ತಿಂದ ಅನ್ನ ಅರಗುವ ಮೊದಲೇ ಹಾರಿದ ಪ್ರಾಣಪಕ್ಷಿ: ಹೊಟೇಲ್‌ನಲ್ಲಿ ಬಿಲ್ ಪಾವತಿಸುತ್ತಿದ್ದಂತೆ ಸಾವು

Published : Mar 06, 2025, 04:42 PM ISTUpdated : Mar 06, 2025, 05:01 PM IST
ತಿಂದ ಅನ್ನ ಅರಗುವ ಮೊದಲೇ ಹಾರಿದ ಪ್ರಾಣಪಕ್ಷಿ: ಹೊಟೇಲ್‌ನಲ್ಲಿ ಬಿಲ್ ಪಾವತಿಸುತ್ತಿದ್ದಂತೆ ಸಾವು

ಸಾರಾಂಶ

ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಹೊಟೇಲ್‌ನಲ್ಲಿ ಊಟ ಮಾಡಿ ಬಿಲ್ ಪಾವತಿಸುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾವು ಯಾವಾಗ ಹೇಗೆ ಬರುತ್ತದೆ ಎಂದು ಯಾರಿಗೂ ಹೇಳಲಾಗದು. ಇತ್ತೀಚೆಗಂತೂ ಹೃದಯಾಘಾತದಿಂದಾಗಿ ಅನೇಕರು ಹಠಾತ್ ಆಗಿ ಸಾವನ್ನಪ್ಪುತ್ತಿದ್ದಾರೆ. ದೊಡ್ಡವರು ಚಿಕ್ಕವರು, ಶಾಲೆಗೆ ಹೋಗುವ ಮಕ್ಕಳು, ಮಧ್ಯವಯಸ್ಕರು ಎಂಬ ಯಾವ ಬೇಧವನ್ನು ತೋರದೇ ಸಾವು ಹೃದಯಾಘಾತದ ರೂಪದಲ್ಲಿ ಬಂದು ಅನೇಕರನ್ನು ಈಗಾಗಲೇ ಜವರಾಯನ ಪಾದ ಸೇರಿಸಿದೆ. ಜಿಮ್ ಮಾಡುತ್ತಿರುವಾಗ, ನಡೆದು ಹೋಗುವಾಗ, ಶಾಲೆಯಲ್ಲಿ ಆಟವಾಡುವಾಗ ಹೀಗೆ ಸಮಯ ಸಂದರ್ಭದ ಎಣಿಕೆ ಇಲ್ಲದೇ ಈಗಾಗಲೇ ಹಲವು ಎಳೆ ಜೀವಗಳು ಹೃದಯಾಘಾತದಿಂದಾಗಿ ಯಮನ ಪಾದ ಸೇರಿದ್ದಾರೆ. ಇಂತಹದ್ದೇ ಮತ್ತೊಂದು ಘಟನೆ ಈಗ ರಾಜಸ್ಥಾನದಲ್ಲಿ ನಡೆದಿದ್ದು, ಅದರ ವೀಡಿಯೋ ವೈರಲ್ ಆಗಿದೆ. 

ಬಿಲ್ ಪಾವತಿಸುತ್ತಿದ್ದಂತೆ ಸಾವು
ರಾಜಸ್ಥಾನದ ರಾಜಸಮಂದ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಹೊಟೇಲ್‌ನಲ್ಲಿ ಊಟ ಮಾಡಿ ಬಿಲ್ ಪಾವತಿಸುತ್ತಿದ್ದಂತೆ ಕೊನೆಯುಸಿರೆಳೆದಿದ್ದಾರೆ. ಈ ಆಘಾತಕಾರಿ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆದ ವೀಡಿಯೋದಲ್ಲಿ ಕಾಣಿಸುವಂತೆ ಯುವಕನೋರ್ವ ರೆಸ್ಟೋರೆಂಟ್‌ನ ಬಿಲ್ ಕೌಂಟರ್ ಮುಂದೆ ಬಿಲ್ ಪಾವತಿಸಲು ನಿಂತಿದ್ದಾನೆ. ಅಲ್ಲಿ ಆತ ಊಟವಾದ ನಂತರ ಹೊಟೇಲ್‌ಗಳಲ್ಲಿ ನೀಡುವ ಬಡೆಸೊಪ್ಪು ಅಥವಾ ಸೋಂಪು ಎಂದು ಕರೆಯುವ ಪದಾರ್ಥವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಬಾಯಿಗೆ ಹಾಕಿಕೊಂಡಿದ್ದಾನೆ. ನಂತರ ಕ್ಯಾಷಿಯರ್ ಆತನಿಗೆ ಬಿಲ್ ನೀಡಿದ್ದಾರೆ. ಅಷ್ಟೇ.. ಕ್ಷಣದಲ್ಲೇ ಆತ ಕುಸಿದು ನೆಲಕ್ಕೆ ಬಿದ್ದಿದ್ದು, ಅಲ್ಲೇ ಉಸಿರು ಚೆಲ್ಲಿದ್ದಾನೆ. ಹೃದಯಾಘಾತದಿಂದ ಆತನ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. 

ಮದುವೆಯಾದ 3 ದಿನಕ್ಕೆ ಹಾರ್ಟ್ ಅಟ್ಯಾಕ್‌ಗೆ ಬಲಿಯಾದ ಟೆಕ್ಕಿ; ಮಂಡ್ಯದ ಗಂಡು ಶಶಾಂಕ್ ಇನ್ನಿಲ್ಲ!

ನೈರ್ಮಲ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ 27 ವರ್ಷದ ಸಚಿನ್
ಮಾರ್ಚ್‌ 1 ರಂದು ಈ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೀಗೆ ಹಠಾತ್ ಸಾವನ್ನಪ್ಪಿದ ಯುವಕನನ್ನು 27 ವರ್ಷದ ಸಚಿನ್ ಗಾರು ಎಂದು ಗುರುತಿಸಲಾಗಿದ್ದು, ಆತ ರಾಜಸಮಂದ್‌ನ ಮುನ್ಸಿಪಲ್ ಕಾರ್ಪೋರೇಷನ್‌ನಲ್ಲಿ ನೈರ್ಮಲ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದ. ಈತನ ತಂದೆ ಸುರೇಶ್ ಗಾರು ರಾಜಸಮಂದ್‌ನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. 

ಹೃದಯಾಘಾತದ ಸಾವುಗಳ ಬಗ್ಗೆ ತನಿಖೆಗೆ ಆಗ್ರಹ
ಟಿವಿಎಸ್ ಸ್ಕ್ವೇರ್ ಬಳಿಯ ರೆಸ್ಟೋರೆಂಟ್‌ಗೆ ಊಟಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬಿಲ್ ಪಾವತಿಸಲು ಕ್ಯಾಶ್ ಕೌಂಟರ್‌ಗೆ ಬಂದಾಗ ಸಚಿನ್ ಸಂಪೂರ್ಣವಾಗಿ ಆರೋಗ್ಯವಾಗಿದ್ದರು. ಆದರೆ, ಅವರ ಆರೋಗ್ಯ ಹದಗೆಟ್ಟ ನಂತರ ಅವರು ನೆಲಕ್ಕೆ ಕುಸಿದು ಬಿದ್ದರು. ರೆಸ್ಟೋರೆಂಟ್ ಸಿಬ್ಬಂದಿ ಮತ್ತು ಸ್ಥಳದಲ್ಲಿದ್ದ ಇತರರು ಸಚಿನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಈ ದುರಂತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೃದಯಾಘಾತದಿಂದ ಸಂಭವಿಸಿದ ಸಾವುಗಳಿಗೆ ಸಂಬಂಧಿಸಿದಂತೆ ಸರ್ಕಾರ ಕ್ರಮ ಕೈಗೊಳ್ಳದಿರುವ ಬಗ್ಗೆ ಜನರು ಪ್ರಶ್ನಿಸುತ್ತಿದ್ದಾರೆ. ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ದೇಶದಲ್ಲಿ ಯುವಕರ ಜೀವ ಬಲಿ ಪಡೆದ ಹೃದಯಾಘಾತದಿಂದ ಸಂಭವಿಸಿದ ಈ ಸಾವುಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ತಂದೆ-ಮಗ ಇಬ್ಬರೂ ಅದೇ ದಿನ ಹೃದಯಾಘಾತದಿಂದ ಸಾವು! ಸಾವು ಹಿಂಗೂ ಬರುತ್ತಾ ದೇವರೇ!?

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು