
ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ಈಗ ಸಾರ್ವಜನಿಕ ಸ್ಥಳಗಳಲ್ಲೂ ರೀಲ್ಸ್ ಮಾಡುವುದು ಸಾಮಾನ್ಯ ಎನಿಸಿದ್ದು, ಬಸ್‌ಗಳು, ರೈಲು ನಿಲ್ದಾಣಗಳು, ಮೆಟ್ರೋ ರೈಲು ರೈಲ್ವೆ ಟ್ರ್ಯಾಕ್‌ಗಳು ಹೀಗೆ ಯಾವ ಸ್ಥಳಗಳನ್ನು ಬಿಡದೇ ಎಲ್ಲಾ ಕಡೆ ರೀಲ್ಸ್ ಶೂಟ್ ಮಾಡುತ್ತಾರೆ. ಇದರಿಂದ ತಾವು ಅಪಾಯಕ್ಕೊಳಗಾಗುವುದಲ್ಲದೇ ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ. ಜನಜಂಗುಳಿಯಿಂದ ತುಂಬಿ ತುಳುಕುವ ರಸ್ತೆಯಲ್ಲಿ ಡಾನ್ಸ್ ಮಾಡುವುದು ಫೈಟ್ ಮಾಡುವುದು ಮಾಡುವುದರಿಂದ ಜನ ಇವರ ಬಗ್ಗೆ ಆಕ್ರೋಶ ವ್ಯಕ್ತಪಡಿಸುವುದು ಸಾಮಾನ್ಯ ಎನಿಸಿದೆ. ಅದೇ ರೀತಿ ಇಲ್ಲೊಂದು ಕಡೆ ಯುವಕನೋರ್ವ ರೀಲ್ಸ್‌ಗೆ ಜನಜಂಗುಳಿಯಿಂದ ತುಂಬಿದ್ದ ವಾಹನಗಳು ಓಡಾಡುತ್ತಿದ್ದ ಬ್ಯುಸಿಯಾದ ರಸ್ತೆಯಲ್ಲೇ ಶೂಟ್ ಮಾಡಲು ಶುರು ಮಾಡಿದ್ದಾನೆ. ಇದರಿಂದ ಸಿಟ್ಟಿಗೆದ್ದ ಹಿರಿಯ ವಯಸ್ಕರೊಬ್ಬರು ತಮ್ಮ ಗಾಡಿಯಲ್ಲಿದ್ದ ದೊಣ್ಣೆಯೊಂದನ್ನು ತೆಗೆದು ಆತನಿಗೆ ಸರಿಯಾಗಿ ಬಾರಿಸಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಡುರಸ್ತೆಯಲ್ಲಿ ಮಹಿಳೆಗೆ ಕಿರುಕುಳ ನೀಡುವ ದೃಶ್ಯದ ಶೂಟ್
ಯುವಕ ಹಾಗೂ ಆತನ ತಂಡ ನಡುರಸ್ತೆಯಲ್ಲಿ 'ಮಹಿಳೆಗೆ ಕಿರುಕುಳ ನೀಡುವಂತಹ' ದೃಶ್ಯವನ್ನು ರೀಲ್ಸ್‌ಗಾಗಿ ಶೂಟ್ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಈ ಹಿರಿಯ ವ್ಯಕ್ತಿ ಇದನ್ನು ನಿಜವಾಗಿಯೂ ಆತ ಮಹಿಳೆಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಭಾವಿಸಿ ಆ ಯುವಕನನ್ನು ಥಳಿಸಿದ್ದಾರೆ ಎಂದು ವರದಿಯಾಗಿದೆ. ವೈರಲ್ ಆದ ವೀಡಿಯೋದಲ್ಲಿ ವೃದ್ಧರು ತಮ್ಮ ಓಮಿನಿ ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಕಾರಿನಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂಡು ಬಂದು ಆ ಯುವಕನಿಗೆ ಸರಿಯಾಗಿ ಬಾರಿಸಿದ್ದಾರೆ. ಈ ವೇಳೆ ಆ ಮಹಿಳೆ ಹಾಗೂ ಸುತ್ತಲೂ ಇರುವವರೆಲ್ಲರೂ ವೃದ್ಧನನ್ನು ತಡೆಯಲು ಯತ್ನಿಸುತ್ತಿರುವ ದೃಶ್ಯವಿದೆ. ವೃದ್ಧನ ಎಂಟ್ರಿಯಿಂದ ರೀಲ್ಸ್ ಡ್ರಾಮಾ ರಿಯಲ್ ಆಗಿ ಸಂಭವಿಸಿದಂತಾಗಿದೆ. 41 ಸೆಕೆಂಡ್‌ಗಳ ಈ ವೀಡಿಯೋವನ್ನು 10 ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ವೈರಲ್ ರೀಲ್ಸ್‌ಗಾಗಿ ಮೂಗಿಗೆ ಹತ್ತಿ ತುಂಬಿಸಿ ರಸ್ತೆ ಮಧ್ಯೆ ಹೆಣದಂತೆ ಮಲಗಿದವನ ಬಂಧನ
ವೃದ್ಧನ ಕಾರ್ಯಕ್ಕೆ ನೆಟ್ಟಿಗರಿಂದ ಚಪ್ಪಾಳೆ
ವೀಡಿಯೋ ನೋಡಿದ ಅನೇಕರು ವೃದ್ಧನ ಕೆಲಸಕ್ಕೆ ಭಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ನೋಡಿ ಬಹಳ ತೃಪ್ತಿಯಾಗುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ರೀಲ್ಸ್ ಮಾಡುವ ಭರದಲ್ಲಿ ಇತರರಿಗೆ ತೊಂದರೆ ನೀಡುತ್ತಿದ್ದಾರೆ, ಅಜ್ಜ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ರೀಲ್ಸ್ ಮಾಡುವವರಿಗೆ ಇದು ಸರಿಯಾದ ಉತ್ತರ ಎಂದು ಮತ್ತೆ ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂಕಲ್‌ನ ನೋಡಿದ್ರೆ ಅಂಕಲ್‌ಗೆ ನಿಜವಾಗಿಯೂ ರೀಲ್ಸ್ ಇದು ಅಂತ ತಿಳಿದಿರುವಂತೆ ಕಾಣ್ತಿದೆ ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಈ ಅಂಕಲ್‌ಗೆ ಎಲ್ಲರೂ ಬೆಂಬಲ ನೀಡಬೇಕು ಎಲ್ಲಾ ಕಡೆ ಇದೇ ರೀತಿ ನಡೆಯಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೊಂದು ಒಳ್ಳೆ ಚಿಕಿತ್ಸೆ ಅಂತ ಇನ್ನೊಬ್ಬರ ಪ್ರತಿಕ್ರಿಯಿಸಿದ್ದಾರೆ.
ಬೀಚ್‌ನಲ್ಲಿದ್ದ ಸೆಕ್ಸ್ ಟಾಯ್: ಹೆಣ ಎಂದು ತಿಳಿದು ಪೊಲೀಸರಿಗೆ ಫೋನ್ ಮಾಡಿದ ಜನ
ಈ ವೀಡಿಯೋ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ