ಈ ವರ್ಷದ ಭಾರತದ ಆರ್ಥಿಕತೆ ಪ್ರಗತಿ ದರ ಶೇ. 6.3: ವಿಶ್ವಬ್ಯಾಂಕ್‌

By Kannadaprabha News  |  First Published Oct 4, 2023, 7:38 AM IST

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಜಾಗತಿಕ ಏರಿಳಿತಗಳ ನಡುವೆಯೂ ತನ್ನ ದೃಢವಾದ ಆರ್ಥಿಕ ನೀತಿಗಳಿಂದಾಗಿ ಶೇ6.3ರಷ್ಟು ಏರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ ತಿಳಿಸಿದೆ.


ನವದೆಹಲಿ/ವಾಷಿಂಗ್ಟನ್‌: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕತೆಯು ಜಾಗತಿಕ ಏರಿಳಿತಗಳ ನಡುವೆಯೂ ತನ್ನ ದೃಢವಾದ ಆರ್ಥಿಕ ನೀತಿಗಳಿಂದಾಗಿ ಶೇ6.3ರಷ್ಟು ಏರಿಕೆ ಕಾಣಲಿದೆ ಎಂದು ವಿಶ್ವಬ್ಯಾಂಕ್‌ ತನ್ನ ವರದಿಯಲ್ಲಿ ತಿಳಿಸಿದೆ.

‘ಭಾರತವು ಜಾಗತಿಕ ಸವಾಲುಗಳ ನಡುವೆಯೂ ತನ್ನ ಆರ್ಥಿಕತೆಯಲ್ಲಿ ಸ್ಥಿತಿಸ್ಥಾಪಕತ್ವವನ್ನು ಕಾಪಾಡಿಕೊಂಡಿದೆ. ಇದರಲ್ಲಿ ಪ್ರಮುಖವಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಬಡ್ಡಿದರಗಳನ್ನು ಸಮ ಪ್ರಮಾಣದಲ್ಲಿ ಏರಿಳಿತ ಮಾಡದಿದ್ದುದೇ ಪ್ರಮುಖ ಕಾರಣವಾಗಿದೆ. ಹಾಗೆಯೇ ಭಾರತ ಸರ್ಕಾರವು ಹಲವು ವಸ್ತುಗಳ ರಫ್ತು ಮಾಡುವುದನ್ನು ನಿಷೇಧಿಸಿ ಅವುಗಳ ಬೆಳೆಯುವಿಕೆಗೆ ಅಗತ್ಯ ಸಾಮಗ್ರಿಗಳನ್ನು ಸಮರ್ಪಕವಾಗಿ ಪೂರೈಸುತ್ತಿದೆ. ಹಾಗಾಗಿ ಭಾರತದ ಆರ್ಥಿಕತೆಯಲ್ಲಿ ಹಣದುಬ್ಬರವೂ ಸಹ ಸ್ವಲ್ಪ ಕಡಿಮೆಯಾಗಿ 5.9ಕ್ಕೆ ಬಂದು ನಿಲ್ಲಲಿದೆ. ಆದರೆ ಭಾರತ ತಾನು ಹಾಕಿಕೊಂಡಿರುವ ಬೆಳವಣಿಗೆಯ ಗುರಿಗೆ ಹೋಲಿಸಿದರೆ ಇದು ಕೊಂಚ ಕಡಿಮೆಯಾಗಿದೆ ಎಂದು ತಿಳಿಸಿದೆ.

 

Tap to resize

Latest Videos

ಸ್ವರ್ಣಮಂದಿರದಲ್ಲಿ ಊಟ ಬಡಿಸಿದ ರಾಹುಲ್‌ಗಾಂಧಿ

ಅಮೃತಸರ: ಇಲ್ಲಿನ ಸ್ವರ್ಣ ಮಂದಿರದಲ್ಲಿ ಸೋಮವಾರ ಬಟ್ಟಲುಗಳನ್ನು ಸ್ವಚ್ಛಗೊಳಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ತರಕಾರಿ ಹೆಚ್ಚಿ, ಭಕ್ತಾದಿಗಳಿಗೆ ಪ್ರಸಾದ ಬಡಿಸಿ, ತಟ್ಟೆಗಳನ್ನು ಸ್ವಚ್ಛ ಮಾಡುವ ಮೂಲಕ ಸೇವೆ ಸಲ್ಲಿಸಿದರು. ಮಂಗಳವಾರ ಸ್ವರ್ಣಮಂದಿರ ಲಂಗರ್‌ (ಸಮುದಾಯ ಅಡುಗೆ ಮನೆ) ತಲುಪಿದ ರಾಹುಲ್‌, ಸ್ವತಃ ತರಕಾರಿ ಹೆಚ್ಚಿ, ಅಡುಗೆಗೆ ಸಹಾಯ ಒದಗಿಸಿದರು. ಬಳಿಕ ಭಕ್ತಾದಿಗಳಿಗೆ ಕೈಯಾರ ಪ್ರಸಾದ ವಿತರಣೆ ಮಾಡಿದರು. ನಂತರ ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸಿದ ರಾಹುಲ್, ಭಕ್ತಾದಿಗಳ ತಟ್ಟೆಯನ್ನು ಸ್ವಚ್ಛಗೊಳಿಸಿದರು. ಇದೇ ವೇಳೆ ತಾವು ಇತ್ತೀಚೆಗೆ ಬಿಲಾಸ್‌ಪುರದಿಂದ ರಾಯಪುರದವರೆಗೆ ರೈಲಿನಲ್ಲಿ ಪ್ರಯಾಣ ಮಾಡಿದ ವಿಡಿಯೋ ದೃಶ್ಯಾವಳಿಗಳನ್ನು ರಾಹುಲ್‌ ಮಂಗಳವಾರ ಬಿಡುಗಡೆ ಮಾಡಿದ್ದಾರೆ.

ಪ್ರತೀಕಾರದ ಕ್ರಮ ಬೇಡ, ಪಾರದರ್ಶಕತೆ ಇರಲಿ: ಇ.ಡಿ.ಗೆ ಸುಪ್ರೀಂ ಸೂಚನೆ

ನವದೆಹಲಿ: ಜಾರಿ ನಿರ್ದೇಶನಾಲಯ ತನ್ನ ತನಿಖೆಯಲ್ಲಿ ಯಾವುದೇ ಪಕ್ಷಪಾತ ತೋರದೆ ಪಾರದರ್ಶಕತೆಯನ್ನು ಕಾಪಾಡಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಇ.ಡಿ.ಗೆ ತಾಕೀತು ಮಾಡಿದೆ. ಎಂ3ಎಂ ಕಂಪನಿಯ ಇಬ್ಬರು ನಿರ್ದೇಶಕರು ತಮ್ಮ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ,‘ಜಾರಿ ನಿರ್ದೇಶನಾಲಯ ಯಾವ ತನಿಖೆ ನಡೆಸಿದರು ಅದರಲ್ಲಿ ಒಂದು ಕ್ರಮ ಇರಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಭಾರದು. ಇ.ಡಿ. ದೇಶದ ಹಣಕಾಸಿನ ಭದ್ರತೆಯನ್ನು ನೋಡಿಕೊಳ್ಳುವ ಕೆಲಸವನ್ನು ಮಾಡುತ್ತಿದೆ. ಅದನ್ನು ಸರಿಯಾಗಿ ನ್ಯಾಯಯುತವಾಗಿ ಮಾಡಬೇಕು’ ಎಂದು ಆದೇಶಿಸಿತು. ಜೊತೆಗೆ ಇ.ಡಿಯಿಂದ ಬಂಧನವಾಗಿದ್ದ ಇಬ್ಬರು ನಿರ್ದೇಶಕರಾದ ಪಂಕಜ್‌ ಹಾಗೂ ಬನ್ಸಾಲ್‌ರನ್ನು ಬಿಡುಗಡೆಗೊಳಿಸಿತು.

ಐಸಿಸ್ ಉಗ್ರರಿಂದ ಸ್ಫೋಟಕ ಮಾಹಿತಿ ಬಯಲು, ಬೇಸ್ ಕ್ಯಾಂಪ್ ಸ್ಥಾಪಿಸಲು ಕರ್ನಾಟಕ, ಕೇರಳಕ್ಕೆ ಭೇಟಿ!

click me!