ಪುಣೆ(ಜ.15): ಅದು ಮಹಿಳೆಯರು(Women Trip) ಹಾಗೂ ಮಕ್ಕಳು ಜೊತೆ ಸೇರಿ ಹೊರಟ್ಟಿದ್ದ ಪ್ರವಾಸ. ಬಸ್ ಬುಕ್ ಮಾಡಿ ಪ್ರವಾಸಿ ತಾಣ ಸಂದರ್ಶಿಸಿ ಪ್ರವಾಸವನ್ನು ಅತ್ಯಂತ ಸ್ಮರಣೀಯಗೊಳಿಸಿ ಹಿಂತಿರುಗಿದ್ದಾರೆ. ವಾಪಸ್ ಬರುವ ವೇಳೆ ತಾವು ಪ್ರಯಾಣ ಮಾಡುತ್ತಿದ್ದ ಬಸ್ ಚಾಲಕನ(Bus Driver) ಆರೋಗ್ಯ ದಿಢೀರ್ ಏರುಪೇರಾಗಿ(seizure) ಚಾಲನೆ ವೇಳೆ ಕುಸಿದು ಬಿದ್ದಿದ್ದಾರೆ. ಆದರೆ ಬಸ್‌ನಲ್ಲಿದ್ದ ಮಹಿಳೆಯೊಬ್ಬರ ಸಮಯ ಪ್ರಜ್ಞೆ, ಧೈರ್ಯದಿಂದ ತಕ್ಷಣವೇ ಬಸ್ ನಿಯಂತ್ರಣಕ್ಕೆ ಪಡೆದು ಬಸ್‌ನಲ್ಲಿದ್ದ ಎಲ್ಲರ ಜೀವ ಮಾತ್ರವಲ್ಲ, ಆರೋಗ್ಯ ಸಮಸ್ಯೆ ಎದುರಿಸಿದ ಬಸ್ ಡ್ರೈವರ್ ಪ್ರಾಣ ಕೂಡ ಉಳಿಸಿದ ಘಟನೆ ಪುಣೆಯಲ್ಲಿ ನಡೆದಿದೆ.
ಪುಣೆಯ ವಾಘೋಲಿ(Pune) ಗ್ರಾಮದ ಮಹಿಳೆಯರು ಜೊತೆ ಸೇರಿ ಪ್ರವಾಸಕ್ಕೆ ಪ್ಲಾನ್ ಮಾಡಿದ್ದಾರೆ. ಗ್ರಾಮದಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಮೊರಾಚಿ ಚಿಂಚೋಲಿಗೆ(Morachi Chincholi) ಒಂದು ದಿನದ ಪ್ರವಾಸ ಹೊರಟ್ಟಿದ್ದಾರೆ. ಜನವರಿ 8 ರಂದು ಬಸ್ ಬುಕಿಂಗ್ ಮಾಡಿ ಮಹಿಳೆಯರು, ಮಕ್ಕಳು ಬಸ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಮೊರಾಚಿ ಚಿಂಚೋಲಿಯಲ್ಲಿ ಪ್ರವಾಸದ ಅನುಭವ ಸವಿದಿದ್ದಾರೆ. ಬಳಿಕ ಹಿಂತಿರುಗಿದ್ದಾರೆ.
woman on wheels: ಟ್ಯಾಂಕರ್ ಓಡ್ಸೋ 25ರ ಬರ್ಕತ್ ನಿಶಾ
ಪ್ರವಾಸದಿಂದ ಹಿಂತಿರುಗುವ ವೇಳೆ 40 ವರ್ಷದ ಬಸ್ ಡ್ರೈವರ್ ಫಿಟ್ಸ್ ಸಮಸ್ಯೆ ಎದುರಿಸಿದ್ದಾರೆ. ಪರಿಣಾಮ ಡ್ರೈವರ್ ಕುಸಿದು ಬಿದ್ದಿದ್ದಾರೆ. ಡ್ರೈವರ್ ಫಿಟ್ಸ್ ಸಮಸ್ಯೆ ಎದುರಿಸುತ್ತಿರುವುದನ್ನು ಗಮನಿಸಿದ ಪ್ರವಾಸ ಆಯೋಜಿಸಿದ ಮಹಿಳೆ ಆಶಾ ವಾಗ್ಮಾರೆ ಬಸ್ ನಿಲ್ಲಿಸುವಂತೆ ಡ್ರೈವರ್‌ಗೆ ಸೂಚಿಸಿದ್ದಾರೆ. ಫಿಟ್ಸ್‌ನಿಂದ ಕುಸುದ ಬಿದ್ದ ಡ್ರೈವರ್ ಅದು ಹೇಗೋ ಬಸ್ ನಿಲ್ಲಿಸಿದ್ದಾರೆ.
ಡ್ರೈವರ್‌ಗೆ ತಕ್ಷಣ ಪ್ರಥಮ ಚಿಕಿತ್ಸೆಯ(Health) ನೆರವಿನ ಅಗತ್ಯವಿತ್ತು. ಆದರೆ ಹತ್ತಿರದಲ್ಲಿ ಯಾವುದೇ ಆಸ್ಪತ್ರೆ ಇರಲಿಲ್ಲ. ಹಳ್ಳಿ ದಾರಿಯಾಗಿದ್ದ ಕಾರಣ ಆಸ್ಪತ್ರೆಗೆ ತೆರಳಲು ಮುಂದೆ ಸಾಗಲೇಬೇಕಿತ್ತು. ಬಸ್‌ನಲ್ಲಿ ಮಹಿಳೆಯರು ಯಾರೂ ಇದುವರೆಗೆ ಬಸ್ ಡ್ರೈವಿಂಗ್ ಮಾಡಿಲ್ಲ, ಕಲಿತಿಲ್ಲ. ಆದರೆ ಯೋಗಿತಾ ಸತ್ವಾ ಅನ್ನೋ ಮಹಿಳೆ ಕಾರು ಜೀಪು ಓಡಿಸಿದ ಅನುಭವ ಹೊಂದಿದ್ದಾರೆ. ಹೀಗಾಗಿ ಧೈರ್ಯದಿಂದ ಮುಂದೆ ಬಂದ ಯೋಗಿತಾ ಬಸ್ ಚಲಾಯಿಸಿಕೊಂಡು ಆಸ್ಪತ್ರೆಯತ್ತ ತೆರಳಿದ್ದಾರೆ.
ಸುಮಾರು 10 ಕಿಲೋಮೀಟರ್ ಬಸ್ ಚಲಾಯಿಸಿದ ಮಹಿಳೆ ಸಮೀಪದ ಗೆನಗಾಂವ್ ಖಲ್ಸಾ ತಲುಪಿತು. ಅಲ್ಲಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡ್ರೈವರ್‌ಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಬಳಿಕ ಬಸ್ ಡ್ರೈವರ್ ಇತರ ವಾಹನದಲ್ಲಿ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಳಿಕ ಪ್ರಥಮ ಚಿಕಿತ್ಸೆಯ ಬಳಿಕ ಅದೇ ಬಸ್‌ನಲ್ಲಿ ಮತ್ತೊರ್ವ ಬಸ್ ಡ್ರೈವರ್ ನೆರವಿನಿಂದ ಶಿಕ್ರಾಪುರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಮಹಿಳೆಯರನ್ನು ವಾಘೋಲಿಗೆ ಬಿಡಲಾಗಿದೆ.
ದಿಲ್ಲಿ- ಮುಂಬೈ ಎಕ್ಸ್‌ಪ್ರೆಸ್ ಹೈವೇಯಲ್ಲಿ ಗಡ್ಕರಿ 170 ಕಿ.ಮೀ. ವೇಗದ ಟೆಸ್ಟ್ ಡ್ರೈವ್!
ಕಾರು ಹಾಗಾ ಜೀಪು ಓಡಿಸಿ ಅನುಭವವಿದ್ದ ಯೋಗಿತಾ ಧೈರ್ಯದಿಂದ ಡ್ರೈವರ್ ಜೀವ ಉಳಿಸಿದ್ದಾರೆ. ಬಸ್ ಡ್ರೈವಿಂಗ್ ಅನುಭವ ಇಲ್ಲದಿದ್ದರೂ ಬಸ್ ಚಲಾಯಿಸಿದ್ದಾರೆ. ಇದೀಗ ಪುಣೆಯ ಯೋಗಿತಾ ಸಾಹಸಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಾರು ಸೇರಿದಂತೆ ಇತರ ಸಣ್ಣ ವಾಹನದ ಡ್ರೈವರ್ ಅನಾರೋಗ್ಯಕ್ಕೆ ತುತ್ತಾದ ಸಂದರ್ಭ ಪ್ರಯಾಣಿಕರು ಕಾರು ಚಲಾಯಿಸಿ ತೆರಳಿದ ಹಲವು ಘಟನೆಗಳಿವೆ. ನಿದ್ದೆ ಅಮಲಿನಲ್ಲಿರುವ ಡ್ರೈವರನ್ನು ವಿಶ್ರಾಂತಿ ಪಡೆಯಲು ಹೇಳಿ ಪ್ರಯಾಣಿಕರು ಡ್ರೈವಿಂಗ್ ಮಾಡಿದ ಘಟನೆಗಳು ವರದಿಯಾಗಿದೆ. ಆದರೆ ಬಸ್ ಡ್ರೈವರ್ ಆನಾರೋಗ್ಯದ ಕಾರಣ ಬಸ್‌ನಲ್ಲಿದ್ದ ಮಹಿಳೆ ಬಸ್ ಚಲಾಯಿಸಿದ ಘಟನೆ ವಿರಳವಾಗಿದೆ. ಮಹಿಳೆಯರು ಇದೀಗ ಎಲ್ಲಾ ಕ್ಷೇತ್ರದಲ್ಲಿ ಪುರುಷರಷ್ಟೇ ಸಾಧನೆ ಮಾಡುತ್ತಿದ್ದಾರೆ. ತಮ್ಮ ಕೆಲಸ, ಮನೆ ನಿರ್ವಹಣೆ ಸೇರಿದಂತೆ ಅಗತ್ಯಕ್ಕೆ ಅನುಗುಣವಾಗಿ ಎಲ್ಲವನ್ನೂ ಕಲಿತಿರುತ್ತಾರೆ. ಇದರ ಜೊತೆಗೆ ಮಹಿಳೆಯರು ಡ್ರೈವಿಂಗ್ ಸೇರಿದಂತೆ ಎಲ್ಲಾ ವಿದ್ಯೆಗಳನ್ನು ಕಲಿತಿರುವುದು ಅತೀ ಅವಶ್ಯಕ ಅನ್ನೋದು ಈ ಘಟನೆ ಪುನರುಚ್ಚರಿಸಿದೆ.