Assembly Election 2022 : ಬಿಜೆಪಿ ಆಡಳಿತದಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ!

By Suvarna NewsFirst Published Jan 15, 2022, 5:30 PM IST
Highlights

ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಮರು ಅತ್ಯಂತ ಸುರಕ್ಷಿತ ಹಾಗೂ ಸಂತೋಷದಿಂದ ಇದ್ದಾರೆ
ಆರ್ ಎಸ್ ಎಸ್ ಮುಸ್ಲಿಂ ಘಟಕ ಮುಸ್ಲಿಂ ರಾಷ್ಟ್ರೀಯ ಮಂಚ್ ಹೇಳಿಕೆ
ನಮ್ಮ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ತಂದಿದೆ

ನವದೆಹಲಿ(ಜ. 15): ಮುಂಬರುವ ಪಂಚ ರಾಜ್ಯಗಳ ಚುನಾವಣೆಯಲ್ಲಿ (Five State Assembly Election ) ಮುಸ್ಲಿಮರು ಭಾರತೀಯ ಜನತಾ ಪಕ್ಷಕ್ಕೆ (BJP) ಮತ ಚಲಾಯಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ  ಸಂಘದ (Rashtriya Swayamsevak Sangh)ಮುಸ್ಲಿ ಘಟಕ ಮುಸ್ಲಿ ರಾಷ್ಟ್ರೀಯ ಮಂಚ್ (Muslim Rashtriya Manch) ಹೇಳಿದೆ. ಪ್ರಸ್ತುತ ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಮರು (Muslim) ಅತ್ಯಂತ ಸಂತೋಷ ಹಾಗೂ ಸುರಕ್ಷಿತವಾಗಿದ್ದಾರೆ ಎಂದು ಮಂಚ್ ಅಭಿಪ್ರಾಯಪಟ್ಟಿದ್ದು, ಸಮುದಾಯದ ಮತದಾರರು ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು ಎಂದು ಮನವಿ ಮಾಡಿದೆ.

ಇಲ್ಲಿಯವರೆಗೂ ಕಾಂಗ್ರೆಸ್ (Congress), ಸಮಾಜವಾದಿ ಪಕ್ಷ (SP) ಹಾಗೂ ಬಹುಜನ ಸಮಾಜ ಪಾರ್ಟಿ (BSP) ನಮ್ಮ ಸಮುದಾಯವನ್ನು ವೋಟ್ ಬ್ಯಾಂಕ್ (Vote Bank) ಆಗಿ ಕಂಡಿತ್ತೇ ಹೊರತು ಅಭಿವೃದ್ಧಿಗಾಗಿ ಯಾವುದೇ ಕೆಲಸಗಳನ್ನು ಮಾಡಿರಲಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ ಮುಸ್ಲಿಮರ ಏಳ್ಗೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸಾಕಷ್ಟು ಯೋಜನೆಗಳನ್ನೂ ಮುಸ್ಲಿಂ ರಾಷ್ಟ್ರೀಯ ಮಂಚ್ ಪಟ್ಟಿ ಮಾಡಿದೆ. ಮುಸ್ಲಿಂ ರಾಷ್ಟ್ರೀಯ ಮಂಚ್ (MRM) ಸಮುದಾಯದ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ಜಾರಿಗೊಳಿಸಿದ ವಿವಿಧ ಯೋಜನೆಗಳನ್ನು ಪಟ್ಟಿ ಮಾಡಿದ್ದು, ಬಿಜೆಪಿ ಪಕ್ಷವು ದೇಶದ ಮುಸ್ಲಿಮರ "ಅತಿದೊಡ್ಡ ಹಿತೈಷಿ" ಎಂದು ಹೇಳಿದೆ. ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿದಂತೆ ವಿರೋಧ ಪಕ್ಷಗಳು ಮುಸ್ಲಿಮರನ್ನು ತಮ್ಮ ಮತಬ್ಯಾಂಕ್‌ ಎಂದು ಪರಿಗಣಿಸಿದ್ದವು. ಇವರುಗಳು ಅಧಿಕಾರಕ್ಕೆ ಬಂದ ನಂತರ ನಮ್ಮ ಸಮುದಾಯದವರಿಗೆ ಬಡತನ, ಅನಕ್ಷರತೆ, ಆರ್ಥಿಕವಾಗಿ ಹಿಂದಿಳಿಯುವುದು ಆಗಿದ್ದಲ್ಲದೆ, ತ್ರಿವಳಿ ತಲಾಖ್ ನಂಥ ದೌರ್ಜನ್ಯವನ್ನು ಕಡಿವಾಣ ಹಾಕುವ ಕೆಲಸವನ್ನೂ ಮಾಡಿರಲಿಲ್ಲ ಎಂದು ಎಂಆರ್ ಎಂ ಆರೋಪಿಸಿದೆ.

ಚುನಾವಣೆ ನಡೆಯುವ ರಾಜ್ಯಗಳಲ್ಲಿ ವಿತರಿಸಲು ಕರಪತ್ರದ ರೂಪದಲ್ಲಿ ಮುದ್ರಿಸಲಾಗಿರುವ ಎಂಆರ್ ಎಂನ ನಿವೇದನಾ ಪತ್ರ ಅವರನ್ನು ಎಂಆರ್ ಎಂ ನ ಮುಖ್ಯ ಪೋಷಕ ಇಂದ್ರೇಶ್ ಕುಮಾರ್ ಮತ್ತು ರಾಷ್ಟ್ರೀಯ ಸಂಚಾಲಕ ಹಾಗೂ ಮಾಧ್ಯಮ ಉಸ್ತುವಾರಿ ಶಾಹಿದ್ ಸಯೀದ್ ಶುಕ್ರವಾರ ಬಿಡುಗಡೆ ಮಾಡಿ ಮಾತನಾಡಿದರು. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ನಲ್ಲಿ ಬಿಜೆಪಿಗೆ ಮತ ಯಾಚನೆ ಮಾಡುವ ವೇಳೆ ಅಲ್ಪಸಂಖ್ಯಾತ ಸಮುದಾಯದವರಿಗೆ ಕರಪತ್ರಗಳನ್ನು ಹಂಚಲಾಗುವುದು ಎಂದು ಅವರು ಹೇಳಿದರು.

ಯುಪಿ ಚುನಾವಣೆಗೆ ಬಿಜೆಪಿ ನಾಯಕರ ಪಟ್ಟಿ ರಿಲೀಸ್, ಜ.23ರಿಂದ ಗಣರಾಜ್ಯೋತ್ಸವ; ಜ.15ರ Top 10 News!
"ನರೇಂದ್ರ ಮೋದಿ ಸರ್ಕಾರವು 2014 ರಿಂದ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ ನಯೀ ರೋಶ್ನಿ, ನಯಾ ಸವೇರಾ, ನಯಿ ಉಡಾನ್, ಸೀಖೋ ಔರ್ ಕಾಮಾವೋ, ಉಸ್ತಾದ್ ಮತ್ತು ನಯಿ ಮಂಜಿಲ್ ಸೇರಿದಂತೆ 36 ಯೋಜನೆಗಳನ್ನು ಪ್ರಾರಂಭಿಸಿದೆ" ಎಂದು ಅದು ತಿಳಿಸಿದೆ. ಅಲ್ಪಸಂಖ್ಯಾತ ಸಮುದಾಯದವರು ಪ್ರಧಾನ ಮಂತ್ರಿ ಆವಾಸ್ ಯೋಜನೆ, ಮುದ್ರಾ ಯೋಜನೆ, ಜನ್ ಧನ್ ಯೋಜನೆ, ಉಜ್ವಲ ಯೋಜನೆ, ಅಟಲ್ ಪಿಂಚಣಿ ಯೋಜನೆ, ಸ್ಟಾರ್ಟ್ಅಪ್ ಇಂಡಿಯಾ ಮತ್ತು ಮೋದಿ ಸರ್ಕಾರ ಪ್ರಾರಂಭಿಸಿದ ಇತರ ಯೋಜನೆಗಳಿಂದ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದೆ.

UP Elections: ಸಿಎಂ ಯೋಗಿಗೆ ಅಯೋಧ್ಯೆ ಟಿಕೆಟ್‌ ಕೈತಪ್ಪಿದ್ದೇಕೆ? ಬಿಜೆಪಿ ಚದುರಂಗದಾಟ ಹೀಗಿದೆ
''ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ದೇಶದಿಂದ ಹೊರಹಾಕುತ್ತಾರೆ ಎಂದು ಕಾಂಗ್ರೆಸ್, ಎಸ್‌ಪಿ, ಬಿಎಸ್‌ಪಿ ಸೇರಿದಂತೆ ವಿರೋಧ ಪಕ್ಷಗಳು ಹಿಂದಿನಿಂದಲೂ ಆರ್‌ಎಸ್‌ಎಸ್ ಮತ್ತು ಬಿಜೆಪಿ ವಿರುದ್ಧ ಅಪಪ್ರಚಾರ ನಡೆಸುತ್ತಿವೆ. ಆದರೆ, ಕಳೆದ ಏಳು ವರ್ಷಗಳಲ್ಲಿ ಎಷ್ಟು ಮಂದಿ ಮುಸ್ಲೀಮರನ್ನು ದೇಶದಿಂದ ಹೊರಹಾಕಲಾಗಿದೆ' ಎಂದು ಪ್ರಶ್ನೆ ಮಾಡಿದೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಮುಸ್ಲಿಮರನ್ನು ಕೇವಲ ಮತ ಬ್ಯಾಂಕ್ ಗಳ ರೀತಿ ನೋಡಿದ್ದವು. ನಮ್ಮ ಜನ ಬಡತನ, ಅನಕ್ಷರತೆ, ಹಿಂದೂಗಳ ಮೇಲೆ ದ್ವೇಷ ಇವೆಲ್ಲವೂ ಇವುರುಗಳ ಆಡಳಿತದಲ್ಲಿಯೇ ಬಂದಿದ್ದವು. ನಮ್ಮ ಮೇಲೆ ಸಹಾನುಭೂತಿ ತೋರಿಸುತ್ತಾ ನಮ್ಮನ್ನು ತುಳಿಯುವ ಕೆಲಸ ಮಾಡಿದ್ದರು ಎಂದು ಟೀಕೆ ಮಾಡಿದೆ.2014 ರಿಂದ ಮುಸ್ಲಿಮರ ಮೇಲೆ "ಕೋಮು ಗಲಭೆಗಳು ಮತ್ತು ದೌರ್ಜನ್ಯಗಳ" ಘಟನೆಗಳು "ತೀವ್ರವಾಗಿ" ಕಡಿಮೆಯಾಗಿದೆ ಎಂದು ಎಂಆರ್ ಎಂ ಹೇಳಿಕೊಂಡಿದೆ.

click me!