18 ತಿಂಗಳ ಹಿಂದೆ ಸತ್ತಳೆಂದು ಅಂತ್ಯಸಂಸ್ಕಾರ ಮಾಡಿದ ಮಹಿಳೆ ವಾಪಸಾಗಿದ್ದಾಳೆ. ಆಕೆಯ 'ಕೊಲೆ' ಆರೋಪದಲ್ಲಿ ನಾಲ್ವರು ಜೈಲಿನಲ್ಲಿದ್ದಾರೆ.
ಮಂಡಸೌರ್: ಮಹಿಳೆಯೊಬ್ಬಳು ಮೃತಪಟ್ಟಳು ಎಂದು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ 18 ತಿಂಗಳ ಬಳಿಕ ಆಕೆ ಪುನಃ ತನ್ನ ತವರಿಗೆ ವಾಪಸಾದ ವಿಚಿತ್ರ ಘಟನೆ ಮಧ್ಯಪ್ರದೇಶದ ಮಂಡಸೌರ್ ಜಿಲ್ಲೆಯಲ್ಲಿ ನಡೆದಿದೆ. ಆಕೆಯ 'ಕೊಲೆ' ಆರೋಪದಲ್ಲಿ ನಾಲ್ವರು ಜೈಲಿನಲ್ಲಿರುವಾಗಲೇ ಈ ಘಟನೆ ಸಂಭವಿಸಿದೆ.
ಆಗಿದ್ದೇನು?:
ನವಾಲಿ ಗ್ರಾಮದ ಲಲಿತಾ ಬಾಯಿ (35) 2023ರ ಸೆಪ್ಟೆಂಬರ್‌ನಲ್ಲಿ ನಾಪತ್ತೆಯಾಗಿದ್ದಳು. ಕುಟುಂಬಸ್ತರ ದೂರಿನ ಮೇರೆಗೆ ಝಬುವಾ ಜಿಲ್ಲೆಯ ಥಂಡ್ಲಾ ಪಟ್ಟಣದಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ತಲೆ ಭಾಗ ಸಂಪೂರ್ಣ ಜರ್ಜರಿತವಾದ ಶವವೊಂದು ಪತ್ತೆಯಾಗಿತ್ತು. ಅದು ಲಲಿಲಾ ಬಾಯಿಯದೇ ಶವ ಎಂದು ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಿದ್ದರು.
ಇದನ್ನೂ ಓದಿ: 'ನನ್ನಪ್ಪ ಡ್ರಂನಲ್ಲಿದ್ದಾರೆ'..; ನೆರೆಮನೆಯವರಿಗೆ ಕೊಲೆಯ ಮಾಹಿತಿ ನೀಡಿದ್ದ ನೌಕಾಧಿಕಾರಿ ಸೌರಭ್ ರಜಪೂತ್‌ರ 6 ವರ್ಷದ ಮಗಳು!
5 ಲಕ್ಷ ರೂ. ಗೆ ಮಹಿಳೆ ಮಾರಾಟ ಆಗಿದ್ದ ಲಲಿತಾ ಬಾಯಿ
ಈ ವರ್ಷದ ಮಾ.11ರಂದು ಆಕೆ ಸುರಕ್ಷಿತವಾಗಿ ಮನೆಗೆ ಹಿಂದಿರುಗಿ ಅಚ್ಚರಿ ನೀಡಿದ್ದಾಳೆ. 'ಶಾರುಖ್ ಎಂಬಾತನ ಜತೆ ಸ್ವ-ಇಚ್ಛೆಯಿಂದ ಭಾನುರಕ್ಕೆ ತೆರಳಿದ್ದೆ. ಆದರೆ ಆತ ನನಗೆ ಗೊತ್ತಿಲ್ಲದಂತೆ ಶಾರುಖ್ ಎಂಬ ಇನ್ನೊಬ್ಬ ವ್ಯಕ್ತಿಗೆ 5 ಲಕ್ಷ ರು.ಗಳಿಗೆ ನನ್ನನ್ನು ಮಾರಾಟ ಮಾಡಿದ್ದ. ಖರೀದಿಸಿದಾತ ರಾಜಸ್ಥಾನದ ಕೋಟಾಕ್ಕೆ ನನ್ನನ್ನು ಕರೆದೊಯ್ದ. ಆತನ ಜತೆ 18 ತಿಂಗಳು ಇದ್ದೆ. ನನ್ನ ಬಳಿ ಮೊಬೈಲ್ ಇಲ್ಲದ ಕಾರಣ ಅವನಿಂದ ತಪ್ಪಿಸಿಕೊಂಡು ಬರಲು ಸಾಧ್ಯವಾಗಿರಲಿಲ್ಲ. ಆದರೆ ಈಗ ಅವಕಾಶ ಸಿಕ್ಕಿದ್ದು, ತಪ್ಪಿಸಿಕೊಂಡು ಬಂದಿದ್ದೇನೆ' ಎಂದು ಲಲಿತಾಬಾಯಿ ತಿಳಿಸಿದ್ದಾಳೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಶಾರುಖ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಕೊಲೆ ಆರೋಪದಲ್ಲಿ ಈಗಾಗಲೇ 4 ಮಂದಿ ಜೈಲಿನಲ್ಲಿದ್ದಾರೆ.