ಟೀ ಕುಡಿಯಲು ಹೋದ ಮಹಿಳೆ ಚಾಯ್‌ವಾಲಾಗೆ ಅಂಕಲ್ ಎಂದು ಕರೆದಿದ್ದಕ್ಕೆ ಆತ ಕೋಪಗೊಂಡಿದ್ದಾನೆ. ಇದರಿಂದ ಗೊಂದಲಕ್ಕೊಳಗಾದ ಮಹಿಳೆ, ಚಾಯ್‌ವಾಲಾಗೆ ಏನೆಂದು ಕರೆಯಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾಳೆ.
ನಾನು ಟೀ ಕುಡಿಯಲು ಅಂಗಡಿಗೆ ಹೋದಾಗ ಅಲ್ಲಿ ಅವರಿಗೆ 'ಅಂಕಲ್ ಒಂದು ಚಹಾ ಕೊಡಿ' ಎಂದು ಕೇಳಿದೆ. ಆದರೆ, ನಾನು ಅವರಿಗೆ ಅಂಕಲ್ ಅಂದಿದ್ದಕ್ಕೆ ಭಾರೀ ಕೋಪ ಮಾಡಿಕೊಂಡಿದ್ದಾರೆ. ಹೀಗಾಗಿ, ನನಗಿಂತ ವಯಸ್ಸಿನಲ್ಲಿ ಚಿಕ್ಕವರಾದ ಚಾಯ್‌ವಾಲಾಗೆ ಏನೆಂದು ಕರೆಯಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದು, ನೆಟ್ಟಿಗರು ತಬ್ಬಿಬ್ಬಾಗಿದ್ದಾರೆ.
ನಮ್ಮ ದೈನಂದಿನ ಜೀವನದಲ್ಲಿ ಏನೇ ನಡೆದರೂ ಅದನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅಲ್ಲಿ ನೆಟ್ಟಿಗರು ಕೊಡುವ ಸಲಹೆಗಳನ್ನು ಕೇಳಿ ಅದನ್ನು ಫಾಲೋ ಮಾಡುತ್ತಾರೆ. ಇನ್ನು ಕಲೆವರು ಕಷ್ಟಗಳನ್ನು ಹೇಳಿಕೊಂಡು ನೆಟ್ಟಿಗರ ಸಲಹೆಗಳಿಂದ ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಟೀ ಕುಡಿಯಲು ಹೋದಾಗ ಅಂಗಡಿಯಲ್ಲಿ ಚಾಯ್‌ವಾಲಾಗೆ ಅಂಕಲ್ ಒಂದು ಟೀ ಕೊಡಿ ಎಂದು ಕೇಳಿದ್ದಾರೆ. ಇದಕ್ಕೆ ಅವರು ಭಾರೀ ಕೋಪ ಮಾಡಿಕೊಂಡು ಮಹಿಳೆ ಮೇಲೆ ಕೆಂಡಾಮಂಡಲವಾಗಿದ್ದಾರೆ. ಇದರಿಂದ ಯುವತಿ ಬೇಸರಗೊಂಡಿದ್ದು, ಭಾರತದಲ್ಲಿ ಚಾಯ್‌ವಾಲಾಗೆ ಏನೆಂದು ಕರೆಯಬೇಕು ಎಂದು ಪ್ರಶ್ನೆ ಮಾಡಿದ್ದಾಳೆ.
ಇದನ್ನೂ ಓದಿ: ದೆಹಲಿ ನ್ಯಾಯಾಧೀಶರ ಮನೆಯಲ್ಲಿ ಸುಟ್ಟ ನೋಟಿನ ದೃಶ್ಯ ಬಯಲು
ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಸಮ್ಥಿಂಗ್ ಅಂಡ್ ಎನಿಥಿಂಗ್’ ಹೆಸರಿನ ಖಾತೆಯಲ್ಲಿ ಯುವತಿಯೊಬ್ಬಳು ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 'ನಿಮಗಿಂತ ವಯಸ್ಸಿನಲ್ಲಿ ಹೆಚ್ಚು ದೊಡ್ಡವರಾದ ಚಹಾ ಅಂಗಡಿಯವನ ಬಳಿ ಟೀ ಕೇಳುವಾಗ ನೀವು ಅವರನ್ನು ಏನೆಂದು ಕರೆಯುತ್ತೀರಿ?' ಎನ್ನುವ ಪ್ರಶ್ನೆಯನ್ನು ಕೇಳಿದ್ದಾಳೆ. 'ನಾನು ಚಿಕ್ಕವಳಿದ್ದಾಗ ನನಗಿಂತ ದೊಡ್ಡವರನ್ನು ವಯಸ್ಕ ಹಂತದಲ್ಲಿದ್ದವರನ್ನು ಅಂಕಲ್ ಎಂದು ಕರೆಯುವುದು ತುಂಬಾ ಸುಲಭವಾಗಿತ್ತು. ಅವರ ವಯಸ್ಸಿನ ಆಧಾರದ ಮೇಲೆ 'ಭಯ್ಯಾ' ಅಥವಾ 'ಅಂಕಲ್' ಎಂದು ಕರೆಯುತ್ತಿದ್ದೆನು. ಆದರೆ ಈಗ? ಅರ್ಧದಷ್ಟು ಕೆಲಸಗಾರರು ನನ್ನ ವಯಸ್ಸಿನವರು ಅಥವಾ ನನಗಿಂತ ಕಿರಿಯರು ಆಗಿದ್ದಾರೆ. ಆದ್ದರಿಂದ ನಾನು ಅವನನ್ನು 'ಅಂಕಲ್' ಎಂದು ಕರೆದಿದ್ದರಿಂದ ಆ ವ್ಯಕ್ತಿ ಕೋಪಗೊಂಡಿದ್ದ, ಏಕೆಂದರೆ ಅವನಿಗೆ ಕೇವಲ 36 ವರ್ಷ' ಎಂದು ಬರೆದುಕೊಂಡಿದ್ದಾಳೆ.
ಇನ್ನು ಈ ಮಹಿಳೆಯ ಪೋಸ್ಟ್ ಭಾರೀ ಚರ್ಚೆಗೆ ಕಾರಣವಾಗಿದ್ದು, ತರಹೇವಾರಿ ಕಾಮೆಂಟ್‌ಗಳು ಬಂದಿವೆ. ಟೀ ಕೊಡುವವರನ್ನು 'ಭಾಯ್ ಅಥವಾ ಬಾಸ್ ಎಂದು ಕರೆಯಿರಿ' ಎಂದಿದ್ದಾರೆ. ಇನ್ನೊಬ್ಬರು, 'ಬಾಸ್, ಎಂದು ಕರೆಯಬಹುದು ಇದು ಒಳ್ಳೆಯ ಸಲಹೆ, ಅಭ್ಯಾಸವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, 'ನೀವು ಅವನನ್ನು ದೋಸ್ತ್ ಎಂದು ಕರೆಯಬಹುದು' ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಾರೆ, ತಮಗಿಂತ ಚಿಕ್ಕವರನ್ನು ಏನೆಂದು ಕರೆಯಬೇಕು ಎಂಬುದು ಮಹಿಳೆಯರಲ್ಲಿ ಭಾರೀ ಗೊಂದಲಕ್ಕೆ ಕೆಲವೊಮ್ಮೆ ಕಾರಣವಾಗುತ್ತದೆ.