ಇನ್ಸ್ಟಾಗ್ರಾಂ ರೀಲ್ಸ್‌ಗೆ ದಾಸಳಾಗಿದ್ದ ಮಹಿಳೆ: ಗಂಡ ಮೊಬೈಲ್ ಕಿತ್ತುಕೊಂಡಿದ್ದಕ್ಕೆ ನೇಣಿಗೆ ಶರಣು

Published : Feb 18, 2024, 04:24 PM IST
ಇನ್ಸ್ಟಾಗ್ರಾಂ ರೀಲ್ಸ್‌ಗೆ ದಾಸಳಾಗಿದ್ದ ಮಹಿಳೆ: ಗಂಡ ಮೊಬೈಲ್ ಕಿತ್ತುಕೊಂಡಿದ್ದಕ್ಕೆ  ನೇಣಿಗೆ ಶರಣು

ಸಾರಾಂಶ

ಸದಾ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದ ಹೆಂಡತಿಯ ವರ್ತನೆಯಿಂದ ಬೇಸತ್ತ ಗಂಡನೋರ್ವ ಆಕೆಯ ಕೈನಿಂದ ಮೊಬೈಲ್ ಕಿತ್ತುಕೊಂಡಿದ್ದಾನೆ. ಆದರೆ ಮೊಬೈಲ್‌ಗೆ ದಾಸಳಾಗಿದ್ದ ಹೆಂಡತಿಗೆ ಇದನ್ನು ಸಹಿಸಿಕೊಳ್ಳಲಾಗದೇ ಸಾವಿಗೆ ಶರಣಾದ ಘಟನೆ ಛತ್ತೀಸ್‌ಗಢದ ಸ್ಟೀಲ್ ಸಿಟಿ ಭಿಲಾಯಿಯಲ್ಲಿ ನಡೆದಿದೆ.

ಭಿಲಾಯಿ: ಸದಾ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದ ಹೆಂಡತಿಯ ವರ್ತನೆಯಿಂದ ಬೇಸತ್ತ ಗಂಡನೋರ್ವ ಆಕೆಯ ಕೈನಿಂದ ಮೊಬೈಲ್ ಕಿತ್ತುಕೊಂಡಿದ್ದಾನೆ. ಆದರೆ ಮೊಬೈಲ್‌ಗೆ ದಾಸಳಾಗಿದ್ದ ಹೆಂಡತಿಗೆ ಇದನ್ನು ಸಹಿಸಿಕೊಳ್ಳಲಾಗದೇ ಸಾವಿಗೆ ಶರಣಾದ ಘಟನೆ ಛತ್ತೀಸ್‌ಗಢದ ಸ್ಟೀಲ್ ಸಿಟಿ ಭಿಲಾಯಿಯಲ್ಲಿ ನಡೆದಿದೆ. ಮೃತ ಮಹಿಳೆ ದಿನದ ಸದಾ ಕಾಲ ಮೊಬೈಲ್‌ನಲ್ಲೇ ಕಾಲ ಕಳೆಯುತ್ತಿದ್ದು, ರೀಲ್ಸ್ ಮಾಡುತ್ತಾ ವೀಡಿಯೋ ನೋಡುತ್ತಾ ಸಮಯ ಕಳೆಯುತ್ತಿದ್ದಳು ಎಂದು ತಿಳಿದು ಬಂದಿದೆ. ಹೆಂಡತಿಯ ಈ ವರ್ತನೆಯಿಂದ  ಬೇಸತ್ತ ಪತಿ ಆಕೆಯ ಕೈನಿಂದ ಮೊಬೈಲ್ ಕಿತ್ತುಕೊಂಡಿದ್ದು,  ಇದರಿಂದ ಆಘಾತಕ್ಕೊಳಗಾದ ಮಹಿಳೆ ಸಾವಿಗೆ ಶರಣಾಗಿದ್ದಾಳೆ. 

ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುವ ಮೊದಲೇ ಸ್ಥಳೀಯರು ಮಹಿಳೆಯನ್ನು ನೇಣಿನ ಕುಣಿಕೆಯಿಂದ ಇಳಿಸಿದ್ದಾರೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಲಾಲ್ ಬಹದ್ದೂರ್ ಶಾಸ್ತ್ರ ಆಸ್ಪತ್ರೆಗೆ ಕಳುಹಿಸಿದ್ದಾರೆ. 

ಬೆಸ್ಟ್ ಗರ್ಲ್ ಫ್ರೆಂಡ್‌ ಆಗೋದು ಹೇಗೆ?: ತಿಂಗಳ ಕಡೇಲಿ ಬಾಯ್ ಫ್ರೆಂಡ್‌‌ನ ವಿಚಾರಿಸೋದು ಹೇಗೆ ಹೇಳ್ತಾರೆ ಕೇಳಿ!

ಮೃತ ಮಹಿಳೆಯನ್ನು ಟೈಲ್ಸ್ ಕೆಲಸ ಮಾಡುವ ಭೋಪೇಂದ್ರ ಸಾಹು ಅವರ ಪತ್ನಿ ರಚ್ನಾ ಸಾಹು ಎಂದು ಗುರುತಿಸಲಾಗಿದೆ. ವಿಚಾರಣೆ ವೇಳೆ ಪತಿ ಭೂಪೇಂದ್ರ ಸಾಹು ನೀಡಿರುವ ಮಾಹಿತಿಯಂತೆ ಇಬ್ಬರಿಗೂ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಶಾಲೆಗೆ ಹೋಗುವ 5 ವರ್ಷದ ಮಗಳಿದ್ದಾಳೆ. ಶುಕ್ರವಾರ ಮಧ್ಯಾಹ್ನ ಈತ ರಚ್ನಾಳ ಫೋನ್ ಅನ್ನು ತೆಗೆದುಕೊಂಡು ಮನೆಯಿಂದ ಹೊರಟು ಹೋಗಿದ್ದಾನೆ. ಈ ವೇಳೆ  ಈತನ ತಾಯಿ, ಅತ್ತಿಗೆ ಹಾಗೂ ಮಕ್ಕಳು ಮನೆಯಲ್ಲಿದ್ದರು. ಇದಾಗಿ 4 ಗಂಟೆ ನಂತರ ಅಂದರೆ ಸಂಜೆ 7 ಗಂಟೆಗೆ ಪತ್ನಿ ನೇಣಿಗೆ ಶರಣಾಗಿದ್ದಾಳೆ ಎಂದು ಈತನಿಗೆ ಕರೆ ಬಂದಿದೆ.  ಕೂಡಲೇ ಮನೆಗೆ ಬಂದ ಈತನಿಗೆ ಪತ್ನಿ ಸಾವಿಗೆ ಶರಣಾಗಿರುವುದು ತಿಳಿದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಹೇಳಿದ್ದಾರೆ.  

ನಾವು ಓದೋದು ಹೀಗೆ ಅಂತ ರೀಲ್ ಪೋಸ್ಟ್ ಮಾಡಿದ್ರೆ ಎಲ್ಲ ಮಕ್ಕಳೂ ಇದು ನಾವೇ ಅನ್ನೋದಾ?

ರಚ್ನಾ ಇಡೀ ದಿನ ತನ್ನ ಮೊಬೈಲ್ ಫೋನ್‌ನಲ್ಲೇ ಕಾಲ ಕಳೆಯುತ್ತಿದ್ದಳು, ಮಕ್ಕಳು ಹಾಗೂ ಮನೆಯ ಕೆಲಸಗಳನ್ನು ನಿರ್ಲಕ್ಷಿಸುತ್ತಿದ್ದಳು. ರೀಲ್ಸ್ ಮಾಡುವುದರ ಜೊತೆಗೆ  ಇನ್ಸ್ಟಾಗ್ರಾಂ ವೀಡಿಯೋ ನೋಡುವುದರಲ್ಲಿ ಹಾಗೂ ಅದರಲ್ಲಿ ತನ್ನ ವೀಡಿಯೋ ಪೋಸ್ಟ್ ಮಾಡುವುದರಲ್ಲಿ ಕಾಲ ಕಳೆಯುತ್ತಿದ್ದಳು. ಮೊಬೈಲ್ ಬಳಕೆ ಕಡಿಮೆ ಮಾಡುವುಂತೆ ಆಕೆಗೆ ಹಲವು ಬಾರಿ ನಾನು ಎಚ್ಚರಿಸಿದೆ. ಇದರಿಂದ ನಮ್ಮ ನಡುವೆ ಸದಾ ಜಗಳಗಳಾಗುತ್ತಿತ್ತು. ರಚನಾ ನನ್ನ ಮಾತು ಕೇಳುವುದಕ್ಕೆ ಸಿದ್ಧಳಿರಲಿಲ್ಲ, ಇದರಿಂದ ಸಿಟ್ಟುಗೊಂಡ ನಾನು ಆಕೆಯ ಫೋನ್ ಅನ್ನು ಕಿತ್ತುಕೊಂಡಿದ್ದೆ ಎಂದು ಘಟನೆ ಬಗ್ಗೆ ಪತಿ ಭೂಪೇಂದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. 

ಇನ್‌ಸ್ಟಾಗ್ರಾಂ ರೀಲ್ಸ್ ಪ್ರೀಯರಿಗೆ ಗುಡ್ ನ್ಯೂಸ್, 10 ನಿಮಿಷ ವಿಡಿಯೋಗೆ ಅವಕಾಶ!

ರಚನಾ ಹಾಗೂ ಆಕೆಯ ಗಂಡ ಮನೆಯ ಮೊದಲ ಮಹಡಿಯಲ್ಲಿ ವಾಸ ಮಾಡುತ್ತಿದ್ದಾರೆ. ಆಕೆಯ ಗಂಡನ ಪೋಷಕರು ಅತ್ತಿಗೆ ಹಾಗೂ ಮಕ್ಕಳು ಮನೆಯ ಕೆಳ ಮಹಡಿಯಲ್ಲಿ ವಾಸ ಮಾಡುತ್ತಿದ್ದರು. ಘಟನೆ ನಡೆಯುವ ಮೊದಲು ಮಗಳನ್ನು ಮೇಲೆ ಕರೆದೊಯ್ದ ರಚ್ನಾ ಆಕೆಯನ್ನು ಕೋಣೆಯೊಳಗೆ ಹಾಕಿ ಬಾಗಿಲು ಹಾಕಿ ಬಳಿಕ ಇನ್ನೊಂದು ರೂಮ್‌ಗೆ ಹೋದ ಆಕೆ ಅಲ್ಲಿ ನೇಣಿಗೆ ಶರಣಾಗಿದ್ದಾಳೆ. ಇತ್ತ ಕೋಣೆಯಲ್ಲಿ ಬಂಧಿಯಾಗಿದ್ದ ಮಗು ಬೊಬ್ಬೆ ಹೊಡೆಯಲು ಶುರು ಮಾಡಿದಾಗ ಕೆಳಗಿನ ಮನೆಯಲ್ಲಿದ್ದ ಆಕೆಯ ಅತ್ತೆ ಮಾವ ಅತ್ತಿಗೆ ಮೇಲೋಡಿ ಬಂದು ನೋಡಿದಾಗ ರಚ್ನಾ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ. ಕೂಡಲೇ ಕುಣಿಕೆಯಿಂದ ಕೆಳಗಿಸಿದರು ಅಷ್ಟರಲ್ಲಾಗಲೇ ಆಕೆಯ ಜೀವ ಹಾರಿ ಹೋಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹಬೂಬಾ...ಹಾಡಿಗೆ ನೃತ್ಯದ ವೇಳೆ ಗೋವಾ ಪಬ್‌ ದುರಂತ!
₹500 ಕೋಟಿ ಕೊಟ್ರೆ ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿ : ಸಿಧು ಪತ್ನಿ ಆರೋಪ