ನವದೆಹಲಿ: ಮುಂಬರುವ 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ದೆಹಲಿಯ ಭಾರತ ಮಂಟಪಂನಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕರ್ತರ ಸಮಾವೇಶವನ್ನು ಆಯೋಜಿಸಲಾಗಿದ್ದು, ಈ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಮೊದಲಿಗೆ ದೇಶದ ಮೂಲೆ ಮೂಲೆಯಿಂದ ಈ ಸಮಾವೇಶಕ್ಕೆ ಆಗಮಿಸಿದ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸಿದರು. ಬಿಜೆಪಿ ಕಾರ್ಯಕರ್ತರು ಮುಂದಿನ 100 ದಿನಗಳ ಕಾಲ ಲೋಕಸಭಾ ಚುನಾವಣ ಪ್ರಚಾರಕ್ಕಾಗಿ ಹೊಸ ಶಕ್ತಿ, ಉತ್ಸಾಹ ಕನಸಿನೊಂದಿಗೆ ಕೆಲಸ ಮಾಡಬೇಕು. ಪ್ರತಿ ಸಮುದಾಯದ ಪ್ರತಿ ಗಲ್ಲಿಯ ನಾಗರಿಕನನ್ನು ನಾವು ತಲುಪಬೇಕು, ಎಲ್ಲರ ವಿಶ್ವಾಸವನ್ನು ನಾವು ಸೆಳೆಯಬೇಕು. ದೇಶದ ಸೇವೆಗಾಗಿ ಎಲ್ಲರಿಗಿಂತ ಹೆಚ್ಚು ಸೀಟು ಬಿಜೆಪಿಗೆ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿ ಅವರು, ಇಂದು ಸಲ್ಲೇಖನ ವೃತದ ಮೂಲಕ ನಿಧನರಾದ ಜೈನ ಮುನಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದರು. ಸಮಾಜಕ್ಕೆ ಅವರ ಸೇವೆಯನ್ನು ಶ್ಲಾಘಿಸಿದ ಮೋದಿ ಅವರನ್ನು ನಾನು ಈ ಹಿಂದೆ ಭೇಟಿಯಾಗಿದೆ. ಆದರೆ ಮತ್ತೊಮ್ಮೆ ಭೇಟಿಯಾಗುವ ಅವಕಾಶ ಸಿಗಲಾರದು ಎಂದು ನಾನು ಆಗ ಭಾವಿಸಿರಲಿಲ್ಲ ಎಂದು ಹೇಳಿದರು.
ರಾಷ್ಟ್ರ ರಾಜಕೀಯದಲ್ಲಿ ಕಾಂಗ್ರೆಸ್‌ಗೆ ಶಾಕ್ ಮೇಲೆ ಶಾಕ್: ಬಿಜೆಪಿಯತ್ತ ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್ ?
ನಾನು ಬರೀ ನನ್ನ ಬಗ್ಗೆ ಚಿಂತೆ ಮಾಡುವಂತಿದ್ದರೆ ಇಂದು ಕೋಟ್ಯಾಂತರ ಬಡ ಜನರಿಗೆ ಮನೆ ಕಟ್ಟಲಾಗುತ್ತಿರಲಿಲ್ಲ, ದೇಶದ ಕೋಟ್ಯಾಂತರ ಜನ ಬಡವರು, ಯುವಕರು, ಸೋದರ ಸೋದರಿಯರ ಕನಸೇ ಮೋದಿ ಸಂಕಲ್ಪವಾಗಿದೆ. ನಮ್ಮ ಕೆಲಸವೂ ಇಂದು ಮನೆಯವರೆಗೆ ತಲುಪಬಹುದಾದ ಹೊಸ ವಿಶ್ವಾಸವಾಗಿದೆ. 10 ವರ್ಷದಲ್ಲಿ ಹಗಲು ರಾತ್ರಿಯೆನ್ನದೇ ದುಡಿದಿದ್ದೇನೆ. ಇಂದು ನಾವು ದೇಶಕ್ಕಾಗಿ ಕೋಟಿ ಕೋಟಿ ಭಾರತೀಯರಿಗೆ ಪ್ರತಿ ಭಾರತೀಯರ ಜೀವನವನ್ನು ಬದಲಾಯಿಸುವ ಹಲವು ಕನಸು ನಿರ್ಣಯಗಳು ಇನ್ನು ಬಾಕಿ ಇದೆ ಎಂದು ಪ್ರಧಾನಿ ಮೋದಿ ಹೇಳಿದರು.
ಹಿಂದೆಲ್ಲಾ ಸರ್ಕಾರ ಬದಲಾಗ್ತಿದೆ ವ್ಯವಸ್ಥೆ ಬದಲಾಗಲ್ಲ ಎಂಬ ಚಿಂತನೆ ಜನರದ್ದಾಗಿತ್ತು. ಆದರೆ ಈಗ ಅದು ಬದಲಾಗಿದೆ. ನಾವು ವ್ಯವಸ್ಥೆಯನ್ನು ಬದಲಿಸಿದ್ದೇವೆ. ಆದಿವಾಸಿಗಳು ವಿಶ್ವಕರ್ಮ ಸಮುದಾಯ ಸೇರಿದಂತೆ ಹಲವು ಸಮುದಾಯಗಳ ಯೋಜನೆಗಾಗಿ ನಾವು ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ಹಲವು ತಮ್ಮ ಸರ್ಕಾರ ಜಾರಿಗೊಳಿಸಿದ ಹಲವು ಯೋಜನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Mani Shankar Aiyar on Pakistan: ಪಾಕಿಸ್ತಾನವನ್ನು ಹೊಗಳಿ.. ಮೋದಿಯನ್ನು ತೆಗಳಿದ ವಿವಾದ ಪುರುಷ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ