4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ ಎಸ್ಐ ದಂಪತಿಯ ಆಸ್ತಿ ಮೌಲ್ಯ..!

Published : Feb 18, 2024, 03:34 PM IST
4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ ಎಸ್ಐ ದಂಪತಿಯ ಆಸ್ತಿ ಮೌಲ್ಯ..!

ಸಾರಾಂಶ

ಪೊಲೀಸ್ ಅಧಿಕಾರಿ ದಂಪತಿಯ ಆಸ್ತಿ ಮೌಲ್ಯ  ಕೇವಲ 4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ್ದು, ಈ ಆಸ್ತಿಯ ಮೂಲದ ಬಗ್ಗೆ ಸಮರ್ಪಕ ವಿವರ ನೀಡದ ಹಿನ್ನೆಲೆಯಲ್ಲಿ ಸಿಬಿಐ ಇಬ್ಬರ ವಿರುದ್ಧವೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಪ್ರಕರಣ ದಾಖಲಿಸಿದೆ.

ಚಂಢೀಗಡ: ಪೊಲೀಸ್ ಅಧಿಕಾರಿ ದಂಪತಿಯ ಆಸ್ತಿ ಮೌಲ್ಯ  ಕೇವಲ 4 ವರ್ಷದಲ್ಲಿ ಲಕ್ಷದಿಂದ ಕೋಟಿಗೇರಿದ್ದು, ಈ ಆಸ್ತಿಯ ಮೂಲದ ಬಗ್ಗೆ ಸಮರ್ಪಕ ವಿವರ ನೀಡದ ಹಿನ್ನೆಲೆಯಲ್ಲಿ ಸಿಬಿಐ ಇಬ್ಬರ ವಿರುದ್ಧವೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಪ್ರಕರಣ ದಾಖಲಿಸಿದೆ. ಚಂಢೀಗಡ ಹರೀಂದರ್ ಸಿಂಗ್ ಶೇಖನ್ ಹಾಗೂ ಪರಂಜಿತ್ ಕೌರ್ ಶೇಕನ್ ಅವರು ತಮಗಿರುವ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ದಂಪತಿಯ ಒಟ್ಟು ಆಸ್ತಿ 2017ರಿಂದ 2021ರ ಈ ನಾಲ್ಕು ವರ್ಷದ ಅವಧಿಯಲ್ಲಿ 13.22 ಲಕ್ಷದಿಂದ 1.85 ಕೋಟಿಗೆ ಏರಿಕೆಯಾಗಿದೆ. 

ಸಿಬಿಐ ದಾಖಲಿಸಿರುವ ಎಫ್‌ಐಆರ್ ಪ್ರಕಾರ, ದಂಪತಿ 40 ಲಕ್ಷ ಮೌಲ್ಯದ ಪ್ಲಾಟ್ ಖರೀದಿಸಿದ್ದಾರೆ. ಇದರ ಜೊತೆಗೆ 4.5 ಲಕ್ಷದ ಚಿನ್ನಾಭರಣವನ್ನು ಇದೇ ಅವಧಿಯಲ್ಲಿ ದಂಪತಿ ಗಳಿಸಿದ್ದಾರೆ. ಆದಾಯಕ್ಕೆ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಈಗಾಗಲೇ ದಂಪತಿ ವಿರುದ್ಧ ಡಿಎ ಕೇಸ್ ದಾಖಲಾಗಿದೆ. ಈಗ ಸಿಬಿಐ ಕೂಡ ಇವರ ವಿರುದ್ಧ ಕೇಸ್ ದಾಖಲಿಸಿದ್ದು, ಇವರ ಆಸ್ತಿ ಹಾಗೂ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದೆ.  ಕೇವಲ ಈ ನಾಲ್ಕು ವರ್ಷದ ಅವಧಿಯಲ್ಲಿ ದಂಪತಿ 1.72 ಕೋಟಿ ಆಸ್ತಿ ಸಂಪಾದನೆ ಮಾಡಿದ್ದಾರೆ.  ಇದರ ಜೊತೆ ಮುಲ್ಲಾನ್ಪುರ ನಗರದಲ್ಲಿ ಇರುವ ಆಸ್ತಿಯಲ್ಲೂ ಇವರು ಶೇರ್ ಹೊಂದಿದ್ದಾರೆ. 

ಅಕ್ರಮ ಆಸ್ತಿ ಗಳಿಕೆ: ಡಿ.ಕೆ.ಶಿವಕುಮಾರ್ ವಿರುದ್ಧ ಲೋಕಾ ಎಫ್‌ಐಆರ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 14 ರಂದು ದೂರು ದಾಖಲಾಗಿದ್ದು, ಸೆಕ್ಟರ್‌ 16ರಲ್ಲಿರುವ ಈ ಪೊಲೀಸ್ ಇನ್ಸ್‌ಪೆಕ್ಟರ್ ದಂಪತಿಯ ಮನೆ ಮೇಲೆ ದಾಳಿ ನಡೆಸಿದ ಸಿಬಿಐ ಕೆಲ ದಾಖಲೆಗಳನ್ನು ಜಪ್ತಿ ಮಾಡಿದೆ. ಇದರ ಜೊತೆಗೆ ಇನ್ಸ್‌ಪೆಕ್ಟರ್‌ನ ಸೋದರನ ಮನೆಯಲ್ಲೂ ಸಿಬಿಐ ಶೋಧ ನಡೆಸಿದೆ. 

ತೆಲಂಗಾಣ 20 ಸ್ಥಳಗಳಲ್ಲಿ ದಾಳಿ: ರೇರಾ ಅಧಿಕಾರಿ ಬಳಿ ಪತ್ತೆಯಾಯ್ತು 100 ಕೋಟಿ ಆಸ್ತಿ

2023ರ  ಆಗಸ್ಟ್‌ನಲ್ಲಿ ಕಾನ್‌ಸ್ಟೇಬಲ್ ಪವನ್ ಕುಮಾರ್ ಮತ್ತು ಇತರರ ವಿರುದ್ಧ ದಾಖಲಾದ 7 ಲಕ್ಷ ರೂಪಾಯಿ ಲಸಿಕೆ ಪ್ರಕರಣದ ತನಿಖೆ ನಡೆಸುತ್ತಿರುವಾಗ, ಅಂದಿನ ಆ ಕಾರ್ಯಾಚರಣೆಯ ಸೆಲ್‌ನ ಉಸ್ತುವಾರಿಯಾಗಿದ್ದ ಇನ್ಸ್‌ಪೆಕ್ಟರ್ ಶೆಖೋನ್ ಮತ್ತು ಅವರ ಪತ್ನಿ ಪರಮ್‌ಜಿತ್ ಕೌರ್ ಅವರು ಸಂಗ್ರಹಿಸಿದ ಅಕ್ರಮ ಆಸ್ತಿಯ ವಿಚಾರವನ್ನು ಬ್ಯೂರೋ ಪತ್ತೆ ಮಾಡಿದೆ ಎಂದು ಸಿಬಿಐನ ಎಫ್‌ಐಆರ್ ಹೇಳಿದೆ. . 2023ರ ಆಗಸ್ಟ್‌ 1ರಂದು ಶೆಖೋನ್‌ ಪರವಾಗಿ 3 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಇಬ್ಬರು ಮಧ್ಯವರ್ತಿಗಳನ್ನು ಸಿಬಿಐ ಬಂಧಿಸಿತ್ತು. ಇದರ ಜೊತೆಗೆ ಸಿಬಿಐ ಅಧಿಕಾರಿಗಳು ಕಳೆದ ವರ್ಷ ಶೆಖೋನ್‌ ಅವರನ್ನು ಸೆಕ್ಟರ್‌ 30ರಲ್ಲಿನ ತನ್ನ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದರು ಆದರೆ ಆಗ ಅಕ್ರಮದ ಪತ್ತೆಯಾಗಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌
ಭಾರತ ಎಂದಿಗೂ ಶಾಂತಿ ಪರ : ಪುಟಿನ್‌ಗೆ ಮೋದಿ