
ಜಿಮ್‌ನಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ಮಹಿಳೆಯೊಬ್ಬಳು ಅದರಿಂದ ಕೆಳಗೆ ಜಾರಿ ಸೀದಾ ಗ್ಲಾಸ್ ವಿಂಡೋ ಮೂಲಕ ಮೂರನೇ ಫ್ಲೋರ್‌ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂಡೋನೇಷ್ಯಾದ ಜಿಮ್‌ವೊಂದರಲ್ಲಿ ಈ ಘಟನೆ ನಡೆದಿದೆ. ಜೂನ್ 18 ರಂದು ಮಂಗಳವಾರ ಮಧ್ಯಾಹ್ನ 1 ಗಂಟೆಗೆ ಈ ಘಟನೆ ನಡೆದಿದೆ. ಇಂಡೋನೇಷ್ಯಾದ ಪಶ್ಚಿಮ ಕಾಲಿಮಂಟನ್ ಎಂಬ ಸ್ಥಳಕ್ಕೆ ಸಮೀಪದ ಪಾಂಟಿಯಾನಕ್ ಎಂಬಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. 22 ವರ್ಷದ ಹುಡುಗಿಯೊಬ್ಬಳು ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ಮಹಿಳೆ ಟ್ರೆಡ್ಮಿಲ್‌ನ್ನು ನಿಲ್ಲಿಸುವುದಕ್ಕೆ ಮೊದಲು ಟವೆಲ್‌ನಲ್ಲಿ ಮುಖ ಒರೆಸಲು ನೋಡಿದ್ದು, ಅಷ್ಟರಲ್ಲಿ ಸಮತೋಲನ ತಪ್ಪಿ ಹಿಂಭಾಗಕ್ಕೆ ಮಗುಚಿದ್ದು, ಸೀದಾ ಹೋಗಿ ತೆರೆದಿದ್ದ ಗ್ಲಾಸ್ ಕಿಟಕಿಯ ಮೂಲಕ ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾಳೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
6 ವರ್ಷದ ಮಗು ದಪ್ಪ ಇದೆ ಎಂದು ಬಿದ್ದರೂ ಬಿಡದೇ ಟ್ರೆಡ್‌ಮಿಲ್‌ನಲ್ಲಿ ಓಡಿಸಿ ಸಾಯಿಸಿಯೇ ಬಿಟ್ಟ ತಂದೆ
ಬೀಳುವುದಕ್ಕೂ ಮೊದಲು ಆಕೆ ಕಿಟಕಿಯನ್ನು ಹಿಡಿದುಕೊಳ್ಳುವ ಪ್ರಯತ್ನ ಮಾಡಿದಳಾದರೂ ಸಾಧ್ಯವಾಗದೇ ಸೀದಾ ಹೋಗಿ ಕೆಳಗೆ ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ. ಮೂರನೇ ಮಹಡಿಯಿಂದ ಕೆಳಗೆ ಬಿದ್ದಿದ್ದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ರಕ್ತಸ್ರಾವವಾಗಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಮರಣೋತ್ತರ ಪರೀಕ್ಷೆ ವರದಿಯಲ್ಲಿ ಹೇಳಲಾಗಿದೆ. ಈಕೆ ತನ್ನ ಬಾಯ್‌ಫ್ರೆಂಡ್ ಜೊತೆ ಜಿಮ್‌ಗೆ ಬಂದಿದ್ದಳು. ಘಟನೆ ನಡೆಯುವ ವೇಳೆ ಆತ 2ನೇ ಮಹಡಿಯಲ್ಲಿ ವರ್ಕೌಟ್ ಮಾಡುತ್ತಿದ್ದ ಎಂದು ಲೋಕಲ್ ಮೀಡಿಯಾ ವರದಿ ಮಾಡಿದೆ.
ಮಹಿಳೆ ಬಿದ್ದ ಕಿಟಕಿ ಹಾಗೂ ಟ್ರೆಡ್‌ಮಿಲ್ ಮಧ್ಯೆ ಕೇವಲ 60 ಸೆಂ.ಮೀ. ಅಷ್ಟೇ ಅಂತರವಿತ್ತು. ಟ್ರೆಡ್‌ಮಿಲ್ ಇದ್ದ ಜಾಗವೂ ಬಹಳ ಅಪಾಯಕಾರಿ ಸ್ಥಿತಿಯಲ್ಲಿತ್ತು ಎಂದು ಘಟನೆ ಬಗ್ಗೆ ನಡೆದ ತನಿಖೆಯಿಂದ ತಿಳಿದು ಬಂದಿದೆ. ಟ್ರೆಡ್ಮಿಲ್‌ನಿಂದ ಕೆಳಗೆ ಬಿದ್ದವರು ಸೀದಾ ಹೋಗಿ ಕಟ್ಟಡದಿಂದಲೇ ಕೆಳಗೆ ಬೀಳುವುದು ಬಹಳ ಸುಲಭ ಎಂದು ಪೊಂಟಿಯಾನಕ್ ಪೊಲೀಸ್ ಕಮಿಷನರ್ ಆಂಟೋನಿಯಸ್ ಟ್ರಿಯಾಸ್ ಕುಂಕುರೊಜಾತಿ ಹೇಳಿದ್ದಾರೆ.
ಟ್ರೆಡ್‌ಮಿಲ್‌ನಲ್ಲಿ ಓಡುತ್ತಿದ್ದ ವ್ಯಕ್ತಿ ಹಾರ್ಟ್‌ಅಟ್ಯಾಕ್‌ನಿಂದ ಸಾವು, ಹೃದಯ ವಿದ್ರಾವಕ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಗ್ಲಾಸ್ ವಿಂಡೋಗಳನ್ನು ತೆರೆಯದಂತೆ ಜಿಮ್‌ಗೆ ಬರುವವರಿಗೆ ಜಿಮ್ ಮ್ಯಾನೇಜ್‌ಮೆಂಟ್ ಅಲ್ಲಿ ಸ್ಟಿಕ್ಕರ್ ಅಂಟಿಸಿತ್ತು. ಆದರ ಆ ಸ್ಟಿಕರ್ ಹಾನಿಗೊಳಗಾಗಿತ್ತು ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಜಿಮ್ ಮಾಲೀಕರನ್ನು ಪ್ರಶ್ನಿಸಿದಾಗ ಅಲ್ಲಿ ವೈಯಕ್ತಿಕ ಟ್ರೈನರ್‌ಗಳಿದ್ದು, ಅವರಿಗೆ ವಿಂಡೋಗಳನ್ನು ಮುಚ್ಚುವ ಕೆಲಸವನ್ನು ಕೂಡ ನೀಡಲಾಗಿತ್ತು. ಆದರೆ ಘಟನೆ ನಡೆಯುವ ವೇಳೆ ಈ ವೈಯಕ್ತಿಕ ಟ್ರೈನರ್ ಬ್ರೇಕ್‌ನಲ್ಲಿದ್ದರು ಎಂದು ಹೇಳಿದ್ದಾರೆ. ಘಟನೆಯ ಬಳಿಕ ಮೂರು ದಿನಗಳ ಕಾಲ ಜಿಮ್‌ನ್ನು ಕ್ಲೋಸ್ ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಜಿಮ್ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ