ಜುಲೈ 2ಕ್ಕೆ ಪ್ರಧಾನಿ ಮೋದಿ ರಷ್ಯಾ ಪ್ರವಾಸ, ಪುಟಿನ್ ಜೊತೆ ದ್ವಿಪಕ್ಷೀಯ ಮಾತುಕತೆ!

By Chethan KumarFirst Published Jun 26, 2024, 9:30 AM IST
Highlights

ನರೇಂದ್ರ ಮೋದಿ 3ನೇ ಬಾರಿಗೆ ಪ್ರಧಾನಿಯಾದ ಬಳಿಕ ಇದೀಗ 2ನೇ ವಿದೇಶಿ ಪ್ರವಾಸಕ್ಕೆ ಸಜ್ಜಾಗಿದ್ದಾರೆ. ಜುಲೈ 4 ರಂದು ಮೋದಿ ದ್ವಿಪಕ್ಷೀಯ ಮಾತುಕತೆಗಾಗಿ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ.

ನವದೆಹಲಿ(ಜೂ.26): ಉಕ್ರೇನ್‌ ಜೊತೆಗೆ ಕಳೆದ ಎರಡೂವರೆ ವರ್ಷಗಳಿಂದ ಯುದ್ಧ ನಡೆಸುತ್ತಿರುವ ನಡುವೆಯೇ ತಮ್ಮ ಮೂರನೇ ಅವಧಿಯ ಮೊದಲ ರಷ್ಯಾ ಪ್ರವಾಸಕ್ಕೆ ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸುತ್ತಿದ್ದು, ಜುಲೈ 2ನೇ ವಾರ ರಷ್ಯಾಗೆ ತೆರಳಿ ಅಧ್ಯಕ್ಷ ಪುಟಿನ್‌ ಅವರೊಂದಿಗೆ ವಾರ್ಷಿಕ ದ್ವಿಪಕ್ಷೀಯ ಮಾತುಕತೆ ನಡೆಸುವ ಸಾಧ್ಯತೆಯಿದೆ.

ವ್ಲಾಡಿಮಿರ್‌ ಪುಟಿನ್‌ ಸಹ ಇತ್ತೀಚೆಗೆ ರಷ್ಯಾ ಅಧ್ಯಕ್ಷರಾಗಿ ಮರುಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದಿದೆ.ಇದಕ್ಕೂ ಮೊದಲು ರಷ್ಯಾ ಉಕ್ರೇನ್‌ ಯುದ್ಧವನ್ನು ರಾಜತಾಂತ್ರಿಕ ಮಾತುಕತೆಯ ಮೂಲಕ ಮಾತ್ರ ಬಗೆಹರಿಸಿಕೊಳ್ಳಬೇಕು ಎಂದು ತನ್ನ ನಿಲುವು ವ್ಯಕ್ತಪಡಿಸುತ್ತಿರುವ ಭಾರತ ಈ ಕುರಿತಾಗಿ ಇತ್ತೀಚೆಗೆ ಸ್ವಿಜ಼ರ್ಲೆಂಡ್‌ನಲ್ಲಿ ನಡೆದ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ ಎಂಬುದು ಗಮನಾರ್ಹ. ಈ ವೇಳೆ ಶಸ್ತ್ರಾಸ್ತ್ರ ಪೂರೈಕೆ ಜೊತೆಗೆ ಇನ್ನಿತರ ಮಹತ್ವದ ವಿಷಯಗಳನ್ನು ಚರ್ಚಿಸುವ ಸಾಧ್ಯತೆಯಿದೆ.

Latest Videos

3ನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ನರೇಂದ್ರ ಮೋದಿ ಕೈಗೊಳ್ಳುತ್ತಿರುವ 2ನೇ ವಿದೇಶ ಪ್ರವಾಸ ಇದಾಗಿದೆ. ಇದಕ್ಕೂ ಮೊದಲು ಜಿ7 ಶೃಂಗಸಭೆಗಾಗಿ ಮೋದಿ ಇಟಲಿ ಪ್ರವಾಸ ಮಾಡಿದ್ದರು. ಉಕ್ರೇನ್ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಹಾಗೂ ಫ್ರಾನ್ಸ್‌ ಪ್ರಧಾನಿ ಇಮ್ಯಾನ್ಯುಯಲ್‌ ಮ್ಯಾಕ್ರಾನ್‌ ಸೇರಿ ಹಲವು ರಾಜತಾಂತ್ರಿಕ ನಾಯಕರೊಂದಿಗೆ ಸೌಹಾರ್ದ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. 

ತುರ್ತು ಪರಿಸ್ಥಿತಿಯಲ್ಲಿ ಮೋದಿ ಸನ್ಯಾಸಿ, ಸರ್ದಾರ್ಜಿ ವೇಷ ಧರಿಸಿ ಓಡಾಟ!
 
ಯುದ್ಧಪೀಡಿತ ಉಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಝೆಲೆನ್‌ಸ್ಕಿ ಪ್ರಧಾನಿ ಮೋದಿಗೆ ರಷ್ಯಾ ಜೊತೆಗಿನ ಯುದ್ಧದ ವಾಸ್ತವತೆಯನ್ನು ಸಮಗ್ರವಾಗಿ ವಿವರಿಸಿದ್ದರು. ಇದೇ ವೇಳೆ ಮೋದಿ, ‘ಶಾಂತಿ ಮಾತುಕತೆಯೊಂದೇ ಯುದ್ಧ ನಿಲ್ಲಿಸಲು ಉತ್ತಮವಾದ ಆಯುಧ’ ಎಂದು ಝೆಲೆನ್ಸ್ಕಿಗೆ ತಮ್ಮ ಸಲಹೆ ನೀಡಿದರು.ಜು.4ರಂದು ಚುನಾವಣೆ ಎದುರಿಸುತ್ತಿರುವ ಬ್ರಿಟನ್‌ ಪ್ರಧಾನಿ ಭಾರತೀಯ ಮೂಲದ ರಿಷಿ ಸುನಕ್‌ ಅವರನ್ನು ಭೇಟಿ ಮಾಡಿದ ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಪ್ರಗತಿ, ಸೆಮಿಕಂಡಕ್ಟರ್‌, ತಂತ್ರಜ್ಞಾನ, ವ್ಯಾಪಾರ ಹಾಗೂ ರಕ್ಷಣಾ ವಲಯದಲ್ಲಿ ಅಭಿವೃದ್ಧಿ ಮಾಡುವ ಕುರಿತು ಮಾತುಕತೆ ನಡೆಸಿದರು.
 

click me!