ಕೊರಿಯರ್‌ ಡೆಲಿವರಿ ಸ್ಕ್ಯಾಮ್‌: 5 ರೂ ಪಾವತಿ ಮಾಡಿ 80 ಸಾವಿರ ಕಳೆದುಕೊಂಡ ಮಹಿಳೆ

By Anusha Kb  |  First Published Nov 17, 2023, 2:17 PM IST

ಇಲ್ಲೊಬ್ಬರು ಮಹಿಳೆ ಕೊರಿಯರ್‌ ಆನ್‌ಲೈನ್‌ ಡೆಲಿವರಿಗಾಗಿ 5 ರೂಪಾಯಿ ಪಾವತಿ ಮಾಡಿದ್ದು, ಅವರ ಖಾತೆಯಲ್ಲಿದ್ದ 80 ಸಾವಿರ ಹಣ ಗುಳುಂ ಆಗಿದೆ.


ಮೊಹಾಲಿ: ಕಾಲಕ್ಕೆ ತಕ್ಕಂತೆ ಕೋಲ ಎಂಬ ಆಡು ನುಡಿಯಂತೆ ಈ ಡಿಜಿಟಲ್ ಯುಗದಲ್ಲಿ ಕಳ್ಳರು ಆನ್‌ಲೈನ್‌ನಲ್ಲೇ ಬಲೆ ಬೀಸುತ್ತಿದ್ದು, ಜನ ಕಷ್ಟಪಟ್ಟು ದುಡಿದ ಹಣವನ್ನು ನಿಮಿಷದಲ್ಲಿ ಮಾಯ ಮಾಡುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಕೊರಿಯರ್‌ ಆನ್‌ಲೈನ್‌ ಡೆಲಿವರಿಗಾಗಿ 5 ರೂಪಾಯಿ ಪಾವತಿ ಮಾಡಿದ್ದು, ಅವರ ಖಾತೆಯಲ್ಲಿದ್ದ 80 ಸಾವಿರ ಹಣ ಗುಳುಂ ಆಗಿದೆ.

ಟೈಮ್ಸ್ ಆಫ್‌ ಇಂಡಿಯಾ ವರದಿ ಪ್ರಕಾರ, ಶೆಫಾಲಿ ಚೌಧರಿ ಎಂಬುವವರೇ ಹೀಗೆ ಹಣ ಕಳೆದುಕೊಂಡು ಮೋಸ ಹೋದವರು.  ಪಂಜಾಬ್‌ನ ಮೊಹಾಲಿಯವರಾದ ಈ ಮಹಿಳೆಗೆ ಈ ಆನ್‌ಲೈನ್‌ ದಂಧೆಕೋರರು ತಮ್ಮ ಡೆಲಿವರಿಯನ್ನು ಸ್ವೀಕರಿಸಲು 5 ರೂಪಾಯಿ ಪಾವತಿ ಮಾಡುವಂತೆ ಮೊದಲಿಗೆ ಹೇಳಿದ್ದಾರೆ. ನಾಜೂಕಾಗಿ ಮಾತಾಡಿ ಜನರನ್ನು ಬಲೆಗೆ ಬೀಳಿಸುವ ಈ ಆನ್‌ಲೈನ್ ಖದೀಮರು ಈ ಮಹಿಳೆಗೆ ತಮ್ಮ ಡೆಲಿವರಿ ಪೂರೈಕೆಯಾಗಬೇಕಾದರೆ ಮೊದಲಿಗೆ 5 ರೂಪಾಯಿ ಪಾವತಿ ಮಾಡಿ ಎಂದಿದ್ದಾರೆ. ಜೊತೆಗೆ ಆನ್‌ಲೈನ್‌ನಲ್ಲೇ ಆಕೆಯ  ವಿಳಾಸವನ್ನು ಖಚಿತಪಡಿಸಿಕೊಂಡಿದ್ದಾರೆ. ಅಲ್ಲದೇ ಪೇ ಮಾಡಬೇಕಾದ 5 ರೂಪಾಯಿಗೆ ಲಿಂಕ್ ಕಳುಹಿಸಿದ್ದಾರೆ. ಈ ಖದೀಮರ ನಯವಾದ ಮಾತು ನಂಬಿದ ಆಕೆ ಅವರು ಕಳಿಸಿದ ಲಿಂಕ್ ಕ್ಲಿಕ್ ಮಾಡಿ 5 ರೂಪಾಯಿ ಪಾವತಿ ಮಾಡಿದ್ದು, ಇದಾದ ಸ್ವಲ್ಪ ಹೊತ್ತಿನಲ್ಲಿ 40 ಸಾವಿರ ರೂಪಾಯಿಯಂತೆ ಎರಡು ಬಾರಿ ಖಾತೆಯಿಂದ ಹಣ ಕಡಿತಗೊಂಡಿದೆ. ಒಟ್ಟು 80 ಸಾವಿರ ರೂಪಾಯಿಯನ್ನು ಅವರು ಕೆಲವೇ ನಿಮಿಷಗಳಲ್ಲಿ ಕಳೆದುಕೊಂಡಿದ್ದಾರೆ. 

Tap to resize

Latest Videos

ಸ್ಕ್ಯಾಮ್ ಅಂತ ಮೇಲ್ ನಿರ್ಲಕ್ಷಿಸಿದವನಿಗೆ ಅಚ್ಚರಿ: ಗೆದ್ದ ಭರ್ಜರಿ ಮೊತ್ತದ ಲಾಟರಿ

ಇದಕ್ಕೂ ಮೊದಲು ಇದೇ ರೀತಿಯ ಹಗರಣವೊಂದು ಚಾಲ್ತಿಯಲ್ಲಿತ್ತು. ಇದರಲ್ಲಿ ಈ ಆನ್‌ಲೈನ್ ಖದೀಮರು ನೀವು ಆರ್ಡರ್ ಮಾಡದೇ ಇದ್ದ ಡೆಲಿವರಿ ಖಚಿತಪಡಿಸುವುದಕ್ಕಾಗಿ ಅಥವಾ ಕ್ಯಾನ್ಸಲ್ ಮಾಡುವುದಕ್ಕಾಗಿ ಒಟಿಪಿ ಕೇಳುತ್ತಿದ್ದರು.  ಒಟಿಪಿ ನೀಡಿದ ಕೂಡಲೇ ನೀವು ಕಷ್ಟಪಟ್ಟು ದುಡಿದ ಹಣ ಖದೀಮರ ಪಾಲಾಗುತ್ತಿತ್ತು. ಇಂತಹ ಹಲವು ಆನ್ಲೈನ್ ಹಗರಣಗಳು ಈ ಹಿಂದೆಯೂ ಹಲವು ಬಾರಿ ನಡೆದಿವೆ. ವಾಟ್ಸಾಪ್ , ಟೆಲಿಗ್ರಾಮ್‌ಗಳಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ಅನೇಕ ನಿರುದ್ಯೋಗಿಗಳಿಗೆ ಈ ಖದೀಮರು ಮೋಸ ಮಾಡಿದ್ದಾರೆ. ಇದಾದ ನಂತರ ಸೇನೆಯ ನಕಲಿ ಅಧಿಕಾರಿಯ ಹೆಸರಲ್ಲಿ ಉದ್ಯೋಗ ಕೊಡಿಸುವುದಾಗಿಯೂ ಹಲವು ಅಕ್ರಮ ನಡೆದಿದೆ. 

ಆನ್‌ಲೈನ್ ವಂಚನೆ ಮಾಡ್ತಿದ್ದ 3 ವಿದೇಶಿ ಪ್ರಜೆಗಳ ಬಂಧನ: ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ...

click me!