ರಸ್ತೆ ಬದಿ ಮೂತ್ರ ಮಾಡ್ತಿದ್ದ ವೇಳೆ ಗುದ್ದಿದ್ದ ಟ್ಯಾಂಕರ್‌: 1 ಕಾಲು ಕಳೆದುಕೊಂಡವನಿಗೆ ಸಿಕ್ತು ಭರ್ಜರಿ 2 ಕೋಟಿ ಪರಿಹಾರ

Published : Nov 17, 2023, 12:42 PM IST
ರಸ್ತೆ ಬದಿ ಮೂತ್ರ ಮಾಡ್ತಿದ್ದ ವೇಳೆ ಗುದ್ದಿದ್ದ ಟ್ಯಾಂಕರ್‌: 1 ಕಾಲು ಕಳೆದುಕೊಂಡವನಿಗೆ ಸಿಕ್ತು ಭರ್ಜರಿ 2 ಕೋಟಿ ಪರಿಹಾರ

ಸಾರಾಂಶ

ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ 53 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಮೊತ್ತದ ಪರಿಹಾರ ಸಿಕ್ಕಿದೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಅವರಿಗೆ ಟ್ಯಾಂಕರ್‌ವೊಂದು ಡಿಕ್ಕಿ ಹೊಡೆದಿತ್ತು.

ಮುಂಬೈ: ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ 53 ವರ್ಷದ ವ್ಯಕ್ತಿಯೊಬ್ಬರಿಗೆ ಬರೋಬ್ಬರಿ ಮೊತ್ತದ ಪರಿಹಾರ ಸಿಕ್ಕಿದೆ. 2016ರಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಅವರಿಗೆ ಟ್ಯಾಂಕರ್‌ವೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಅವರು ತಮ್ಮ ಒಂದು ಕಾಲನ್ನು ಕಳೆದುಕೊಂಡಿದ್ದರು. ಈಗ ಅವರಿಗೆ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿ ಪರಿಹಾರವಾಗಿ ಬಡ್ಡಿ ಸಮೇತ 2 ಕೋಟಿ ಮೊತ್ತದ ಭರ್ಜರಿ ಪರಿಹಾರ ನೀಡುವಂತೆ ಆದೇಶಿಸಿದೆ. 

ಈ ವ್ಯಕ್ತಿ ಎಫ್‌ಎಂಸಿಜಿಯಲ್ಲಿ (FMCG) ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಸ್ನೇಹಿತನ ಜೊತೆ ಮಧ್ಯಪ್ರದೇಶದ ದತಿಯಾಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು. ಮೂತ್ರ ವಿಸರ್ಜನೆಗಾಗಿ ಹೆದ್ದಾರಿಯ ಸಮೀಪದಲ್ಲಿದ್ದ ಡಾಬಾವೊಂದರ ಬಳಿ ವಾಹನ ನಿಲ್ಲಿಸಿ ಮೂತ್ರ ಮಾಡುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.   ತಪ್ಪು ದಿಕ್ಕಿನಿಂದ ಬಂದ ಟ್ಯಾಂಕರೊಂದು ಮೂತ್ರ ಮಾಡುತ್ತಿದ್ದ ಇವರಿಗೆ ಡಿಕ್ಕಿ ಹೊಡೆದಿತ್ತು. 

ದಾವಣಗೆರೆ: ಅಪಘಾತ ಪರಿಹಾರ ನೀಡದ್ದಕ್ಕೆ 4 ಕೆಎಸ್‌ಆರ್‌ಟಿಸಿ ಬಸ್‌ ಜಪ್ತಿ

2016ರ ಅಕ್ಟೋಬರ್ 18ರಂದು ಈ ಘಟನೆ ನಡೆದಿತ್ತು. ನಂತರ ಗಾಯಾಳು ಮಧ್ಯಪ್ರದೇಶದಲ್ಲಿ (Madhya Pradesh) ಉದ್ಯೋಗದಲ್ಲಿದ್ದು, ಗ್ವಾಲಿಯರ್‌ನಿಂದ ಪ್ರಯಾಣ ಮಾಡುತ್ತಿದ್ದರು. ನಂತರ ಅವರನ್ನು ಮಧ್ಯಪ್ರದೇಶದ ದತಿಯಾ ಆಸ್ಪತ್ರೆಗೆ ಅವರ ಸಹೋದ್ಯೋಗಿಯೊಬ್ಬರು ದಾಖಲಿಸಿದ್ದರು. ಅಲ್ಲಿ ಅವರಿಗೆ ಅಪಘಾತದಲ್ಲಿ ಮುರಿದ ಸೊಂಟಕ್ಕೆ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತು ಒಂದು ಕಾಲನ್ನು ಕತ್ತರಿಸಲಾಯ್ತು. ಪೊಲೀಸ್ ದಾಖಲೆಗಳಲ್ಲಿ ಉಲ್ಲೇಖಿಸಲಾಗಿದ್ದ ಈ ಸಾಕ್ಷ್ಯಗಳ ಮೇಲೆ ಮೋಟಾರ್ ಅಪಘಾತ ಹಕ್ಕುಗಳ ನ್ಯಾಯಮಂಡಳಿ ಈ ತೀರ್ಪು ನೀಡಿದೆ. 

ರಸ್ತೆ ಅಪಘಾತ : ಪರಿಹಾರದ ಮೊತ್ತ 10 ಪಟ್ಟು ಏರಿಕೆ

ಈ ಅಪಘಾತದಿಂದ ಅವರ ಕುಟುಂಬಕ್ಕೆ ಲಕ್ಷಾಂತರ ರೂ ವೆಚ್ಚವಾಗಿದೆ. ಜೊತೆಗೆ ಅವರಿಗೆ ಶೇಕಡಾ 50ರಷ್ಟು ಶಾಶ್ವತ ಅಂಗವೈಕಲ್ಯ ಉಂಟಾಗಿದೆ. ದಿನವೂ ಅವರು ಕೋಲಿನ ಹಾಗೂ ವ್ಯಕ್ತಿಯ ಸಹಾಯ ಪಡೆಯಲೇಬೇಕಾಗುತ್ತದೆ. ಬಲಗಾಲು ಕತ್ತರಿಸಿದ ಕಾರಣ ಅವರು ಓಡಾಡಲು, ನಡೆದಾಡಲು ತನ್ನ ಕೆಲಸವನ್ನು ಸುಲಭವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಾಲಯ ಈ ಭಾರಿ ಮೊತ್ತದ ಪರಿಹಾರ ನೀಡಲು ಸೂಚಿಸಿದೆ. 2017ರಲ್ಲಿ ಈ ಗಾಯಾಳು  ವಾಹನ ಮಾಲೀಕ ರಾಕೇಶ್ ಶರ್ಮಾ ಹಾಗೂ ವಿಮಾ ಸಂಸ್ಥೆ ಓರಿಯೆಂಟಲ್ ಇನ್ಶಿಯುರೆನ್ಸ್ ಸಂಸ್ಥೆ (Oriental Insurance Company) ವಿರುದ್ಧ ಪರಿಹಾರ ನೀಡಿಲ್ಲ ಎಂದು ವಾಹನ ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!