ಡೀಪ್‌ಫೇಕ್ ಬಗ್ಗೆ ಪ್ರಧಾನಿ ಮೋದಿ ಕಳವಳ: ಕೃತಕ ಬುದ್ಧಿಮತ್ತೆಯ ದುರ್ಬಳಕೆ ಬಗ್ಗೆ ಅತಂಕ

By BK Ashwin  |  First Published Nov 17, 2023, 1:52 PM IST

ಡೀಪ್‌ಫೇಕ್ ವಿಡಿಯೋಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯ ದುರ್ಬಳಕೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆತಂಕ ವ್ಯಕ್ತಪಡಿಸಿದ್ದು, ಇದು ದೊಡ್ಡ ಕಳವಳಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.


ನವದೆಹಲಿ (ನವೆಂಬರ್ 17, 2023): ಇತ್ತೀಚೆಗೆ ಈಪ್‌ ಫೇಕ್‌ ವಿಡಿಯೋ ಬಗ್ಗೆ ಹೆಚ್ಚು ಚರ್ಚೆಯಾಗ್ತಿದೆ. ರಶ್ಮಿಕಾ ಮಂದಣ್ಣ ಡೀಪ್‌ ಫೇಕ್‌ ವಿಡಿಯೋ ವೈರಲ್‌ ಆಗ್ತಿದ್ದಂತೆ AI ದುರ್ಬಳಕೆ ಬಗ್ಗೆ ಹೆಚ್ಚು ಆತಂಕ ವ್ಯಕ್ತವಾಗ್ತಿದೆ. ರಶ್ಮಿಕಾ ಮಾತ್ರವಲ್ಲದೆ, ಬಾಲಿವುಡ್‌ ಖ್ಯಾತ ನಟಿಯರಾದ ಕತ್ರೀನಾ ಕೈಫ್‌, ಕಾಜೋಲ್‌ ಸೇರಿ ಕೆಲವರ ವಿಡಿಯೋ, ಫೋಟೋಗಳನ್ನು ಡೀಪ್‌ಫೇಕ್‌ ಮಾಡಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಈಗ ಪ್ರಧಾನಿ ಮೋದಿ ಸಹ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಡೀಪ್‌ಫೇಕ್ ವಿಡಿಯೋಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯ ದುರ್ಬಳಕೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಆತಂಕ ವ್ಯಕ್ತಪಡಿಸಿದ್ದು, ಇದು ದೊಡ್ಡ ಕಳವಳಕಾರಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು, ಈ ವಿಡಿಯೋಗಳ ಬಗ್ಗೆ ಮಾಹಿತಿ ನೀಡಲು ಮತ್ತು ಅಂತಹ ವಿಡಿಯೋಗಳು ಇಂಟರ್ನೆಟ್‌ನಲ್ಲಿ ಪ್ರಸಾರವಾದಾಗ ಎಚ್ಚರಿಕೆ ನೀಡಲು ಚಾಟ್‌ಜಿಪಿಟಿ ತಂಡವನ್ನು ಕೇಳಿದ್ದೇನೆ ಎಂದೂ ಪ್ರಧಾನಿ ಮೋದಿ ಮಾಹಿತಿ ನೀಡಿದ್ದಾರೆ. ಅಲ್ಲದೆ, ಮಾಧ್ಯಮಗಳು ಜನರಲ್ಲಿ ಬಿಕ್ಕಟ್ಟಿನ ಬಗ್ಗೆ ತಿಳಿವಳಿಕೆ ಮೂಡಿಸಬೇಕು ಎಂದೂ ಮೋದಿ ತಿಳಿಸಿದ್ದಾರೆ. 

Tap to resize

Latest Videos

ಇದನ್ನು ಓದಿ: ರಶ್ಮಿಕಾ ಮಂದಣ್ಣ ಡೀಪ್‌ಫೇಕ್ ವಿಡಿಯೋ ವೈರಲ್‌: ನಕಲಿ ವಿಡಿಯೋ ಗುರುತಿಸೋದು ಹೇಗೆ ತಿಳ್ಳೊಳ್ಳಿ..!

ಇನ್ನು, ಡೀಪ್‌ಫೇಕ್‌ ಫೋಟೋ, ವಿಡಿಯೋಗೊಳಗಾದ ಸಂತ್ರಸ್ತರು ಪೊಲೀಸರಿಗೆ ದೂರು ಸಲ್ಲಿಸಲು ಮತ್ತು ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಒದಗಿಸಲಾದ ಪರಿಹಾರಗಳನ್ನು ಪಡೆದುಕೊಳ್ಳಲು ಸಹ ಕೇಂದ್ರ ಸರ್ಕಾರ ಈಗಾಗಲೇ ಸಲಹೆ ನೀಡಿದೆ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಗೆ ತಪ್ಪು ಮಾಹಿತಿಯ ಹರಡುವಿಕೆಯನ್ನು ತಡೆಯುವುದು "ಕಾನೂನು ಬಾಧ್ಯತೆ" ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಳೆದ ವಾರ ಎಚ್ಚರಿಕೆ ನೀಡಿದ್ದರು.

ಅಲ್ಲದೆ, ಸರ್ಕಾರವು, ನಾಗರಿಕರ ಸುರಕ್ಷತೆ ಮತ್ತು ನಂಬಿಕೆಯನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತದೆ. ಮತ್ತು ಅಂತಹ ವಿಷಯದಿಂದ ಗುರಿಯಾಗುವ ನಮ್ಮ ಮಕ್ಕಳು ಹಾಗೂ ಮಹಿಳೆಯರ ಬಗ್ಗೆಯೂ ಗಂಭೀರವಾಗಿ ಪರಿಗಣಿಸುತ್ತದೆ ಎಂದೂ ಕೇಂದ್ರ ಸಚಿವರು ಹೇಳಿದ್ದರು. ಹಾಗೂ, ಡೀಪ್‌ಫೇಕ್‌ಗಳ ಸೃಷ್ಟಿ ಮತ್ತು ಚಲಾವಣೆಗೆ 1 ಲಕ್ಷ ರೂ. ದಂಡ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದೂ ಕೇಂದ್ರ ಸರ್ಕಾರ ಎಚ್ಚರಿಸಿದೆ.

ಇದನ್ನು ಓದಿ: ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಲು ಸಂಚು; ಏನು ಹೇಳ್ತಾರೆ ಅಮಿತಾಭ್ ಬಚ್ಚನ್ !

ನಟಿ ರಶ್ಮಿಕಾ ಮಂದಣ್ಣ, ಕತ್ರೀನಾ ಕೈಫ್ ಮತ್ತು ಕಾಜೋಲ್ ಅವರ ಮಾರ್ಫ್ ಮಾಡಿದ ಮುಖಗಳೊಂದಿಗೆ ಹಲವಾರು ಡೀಪ್‌ಫೇಕ್ ವಿಡಿಯೋಗಳು ವೈರಲ್‌ ಆಗುತ್ತಿದೆ. ಇದು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಆಕ್ರೋಶ ಹುಟ್ಟುಹಾಕಿದೆ ಹಾಗೂ ಕಾನೂನು ಕ್ರಮ ಕೈಗೊಳ್ಳಬೇಎಂಬ ಒತ್ತಾಯವೂ ಕೇಳಿಬರ್ತಿದೆ.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ ಮಾನ ಹರಾಜು ಹಾಕಿದ ವೈರಲ್‌ ವಿಡಿಯೋ; ಡೀಪ್‌ಫೇಕ್ ತಂತ್ರಜ್ಞಾನ ಎಂದರೇನು?

click me!