ಪುಂಡರ ಬೈಕ್‌ ರೇಸ್‌ಗೆ 23ರ ಯುವತಿ ಬಲಿ : ಸ್ಕೂಟಿಗೆ ಡಿಕ್ಕಿ ಹೊಡೆದು 50 ಮೀಟರ್ ಎಳೆದೊಯ್ದ ಬೈಕ್

Published : Nov 08, 2025, 12:15 AM IST
Road accident girl died

ಸಾರಾಂಶ

College student dies in accident: ಪುಂಡರ ಗ್ರೂಪ್ ಬೈಕ್‌ ರೇಸ್‌ಗೆ 23ರ ಹರೆಯದ ಕಾಲೇಜು ಯುವತಿಯೊಬ್ಬಳು ಬಲಿಯಾಗಿದ್ದಾಳೆ. ರಸ್ತೆಯಲ್ಲಿ ಯುವಕರು ಗುಂಪಾಗಿ ಬೈಕ್ ರೇಸ್ ಮಾಡಿ ಯುವತಿ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು 50 ಮೀಟರ್ ಎಳೆದೊಯ್ದಿದ್ದಾನೆ. ಪರಿಣಾಮ ಯುವತಿ ಸಾವನ್ನಪ್ಪಿದ್ದಾಳೆ.

ಪುಂಡರ ಗ್ರೂಪ್ ಬೈಕ್‌ ರೇಸ್‌ಗೆ 23ರ ಹರೆಯದ ಕಾಲೇಜು ಯುವತಿ ಬಲಿ

ಕಾನ್ಪುರ: ಪುಂಡರ ಗ್ರೂಪ್ ಬೈಕ್‌ ರೇಸ್‌ಗೆ 23ರ ಹರೆಯದ ಕಾಲೇಜು ಯುವತಿಯೊಬ್ಬಳು ಬಲಿಯಾಗಿದ್ದಾಳೆ. ರಸ್ತೆಯಲ್ಲಿ ಯುವಕರು ಗುಂಪಾಗಿ ಬೈಕ್ ರೇಸ್ ಮಾಡಿ ಯುವತಿ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದು 50 ಮೀಟರ್ ಎಳೆದೊಯ್ದಿದ್ದಾನೆ. ಪರಿಣಾಮ ಯುವತಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಘಟನೆಯಲ್ಲಿ ಇನ್ನೊಬ್ಬ ಯುವತಿ ಗಂಭೀರ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದೆ.

ಸ್ಕೂಟಿಗೆ ಡಿಕ್ಕಿ ಹೊಡೆದ ಪುಂಡರ ಗುಂಪು

ಕಾನ್ಪುರದ ಗಂಗಾ ಬ್ಯಾರೇಜ್‌ನಲ್ಲಿ ಈ ಘಟನೆ ನಡೆದಿದೆ. ಗುರುವಾರ ಸಂಜೆ ಅಂತಿಮ ಪದವಿಯಲ್ಲಿ ಓದುತ್ತಿದ್ದ ಕಾಲೇಜು ವಿದ್ಯಾರ್ಥಿನಿ 23 ವರ್ಷದ ಭಾವಿಕಾ ಗುಪ್ತಾ ಮತ್ತು ಆಕೆಯ ಸ್ನೇಹಿತೆ ನೇಹಾ ಮಿಶ್ರಾ ಗಂಗಾ ಬ್ಯಾರೇಜ್‌ಗೆ ಹೋಗಿದ್ದಾರೆ.. ಹಿಂತಿರುಗಿ ಬರುತ್ತಿದ್ದ ವೇಳೆ ಭಾವಿಕಾ ಗುಪ್ತಾ ತನ್ನ ಸ್ಕೂಟರ್ ಅನ್ನು ಟಿ-ಪಾಯಿಂಟ್‌ನಲ್ಲಿ ತಿರುಗಿಸುತ್ತಿದ್ದಂತೆ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ವ್ಯಕ್ತಿಗಳು ಅತೀ ವೇಗದಲ್ಲಿ ಭಾವಿಕಾ ಗುಪ್ತಾ ಅವರು ಪ್ರಯಾಣಿಸುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದು 50 ಮೀಟರ್ ದೂರದವರೆಗೆ ಎಳೆದೊಯ್ದಿದ್ದು, ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ. ಇತ್ತ ಯುವಕರು ಘಟನೆಯ ಬಳಿಕ ಪರಾರಿಯಾಗಿದ್ದಾರೆ. ನಂತರ ಸ್ಥಳೀಯರೇ ಭಾವಿಕಾ ಹಾಗೂ ಆಕೆಯ ಸ್ನೇಹಿತೆ ನೇಹಾ ಮಿಶ್ರಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಭಾವಿಕಾ ಗುಪ್ತಾ ಸಾವನ್ನಪ್ಪಿದ್ದಾರೆ.

ಡಿಕ್ಕಿ ಹೊಡೆದು ಬೈಕ್ ಬಿಟ್ಟು ಪರಾರಿ

ಸ್ಥಳದಿಂದ ಪರಾರಿಯಾದ ವೇಳೆ ಆರೋಪಿಗಳು ಒಂದು ಬೈಕನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದರು. ಆ ಬೈಕ್‌ನ ಮೇಲೆ ಆರೋಪಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್, brijesh_nishad_r155m ಎಂದು ಬರೆಯಲಾಗಿತ್ತು. ಈ ಇನ್ಸ್ಟಾ ಪೇಜ್ ತೆರೆದಾದ, ಅದರಲ್ಲಿ ಒಂದು ಪೋಸ್ಟ್‌ಗೆ ಗಂಗಾ ಬ್ಯಾರೇಜ್‌ನಲ್ಲಿ ಅಪಘಾತ ಸಂಭವಿಸಿದೆ, ನೀವು ಜೀವಂತವಾಗಿದ್ದೀರಾ ಅಥವಾ ಸತ್ತಿದ್ದೀರಾ... ನೀವು ಹುಡುಗಿಯರನ್ನು ಕೊಂದಿದ್ದೀರಿ ಎಂಬ ಕಾಮೆಂಟ್‌ಗಳು ಬಂದಿದ್ದವು. ಇದಕ್ಕೆ, ಮತ್ತೊಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದು, ನಿಶಾದ್ ತನ್ನ ಬೈಕ್‌ನಿಂದ ಯುವತಿಯರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಉತ್ತರಿಸಿದ್ದಾನೆ. ಈ ಇನ್ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಆರೋಪಿಯ ಬೈಕ್ ಸವಾರಿ ಮತ್ತು ರೇಸ್‌ಗಳ ಇತರ ವೀಡಿಯೊಗಳೂ ಇದ್ದವು. ಘಟನೆಗೆ ಸಂಬಂಧಿಸಿದಂತೆ ಭವಿತಾ ಗುಪ್ತಾ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಚಾರ್ಟೆಡ್ ಅಕೌಂಟೆಂಟ್‌ಗೇ ಸೈಬರ್ ವಂಚಕರಿಂದ 1. 5 ಕೋಟಿ ಉಂಡೆನಾಮ

ಇದನ್ನೂ ಓದಿ: ಸೆಲೆನಾ ಗೋಮೇಜ್ ಹೋಲುವ ಈ ಬಾಲೆ ಯಾರು: ಬಾಲಿವುಡ್‌ನ ಒಂದು ಕಾಲದ ಸ್ಟಾರ್ ನಟಿಯ ಪುತ್ರಿ ಈಕೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಂಬೈ ಹೌಸಿಂಗ್ ಕಾಂಪ್ಲೆಕ್ಸ್‌ನಲ್ಲಿ ಅಗ್ನಿ ದುರಂತ, ನಿರ್ದೇಶಕ ಸಂದೀಪ್ ಸಿಂಗ್ ಸೇರಿ 40 ಮಂದಿ ರಕ್ಷಣೆ
ಶಶಿ ತರೂರ್ ಬರೆದ 'ನಳಂದ' ಕವಿತೆ ವೈರಲ್: ಇತಿಹಾಸ ಸುಡಲು ಸಾಧ್ಯವಿಲ್ಲ ಎಂದ ಕಾಂಗ್ರೆಸ್ ಸಂಸದ!