ಭಗವಾನ ರಾಮನನ್ನ ಅವಮಾನಿಸಿದ್ರಾ ಸತೀಶ್ ಆಚಾರ್ಯ? ಕಾರ್ಟೂನಿಸ್ಟ್‌ ಬಂಧನಕ್ಕೆ ಆಗ್ರಹ!

By Mahmad Rafik  |  First Published May 27, 2024, 5:21 PM IST

ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ (Cartoonist Satish Acharya) ರಚನೆಯ ಕಾರ್ಟೂನ್ (Cartoon) ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸಂಚಲನ ಸೃಷ್ಟಿಸಿವೆ. ಈ ವ್ಯಂಗ್ಯಚಿತ್ರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.


ನವದೆಹಲಿ: 2024ರ ಲೋಕಸಭಾ ಚುನಾವಣೆಯ (Loksabha Elections 2024) ಆರು ಹಂತದ ಮತದಾನ (Voting) ಮುಕ್ತಾಯವಾಗಿದ್ದು, ಏಳನೇ ಹಂತ ಬಾಕಿಯೊಂದಿದೆ. ರಾಜಕೀಯ ನಾಯಕರ ಏಟು-ಏದಿರೇಟು ನಡುವೆ ಲೋಕಸಮರದ ಕಣದಲ್ಲಿ ಈ ಬಾರಿ ವ್ಯಂಗ್ಯಚಿತ್ರಗಳು, ಪ್ರಣಾಳಿಕೆಯ ವಿಷಯಗಳು ಚರ್ಚೆಗೆ ಗ್ರಾಸವಾಗಿವೆ. ಇದೀಗ ವ್ಯಂಗ್ಯ ಚಿತ್ರಕಾರ ಸತೀಶ್ ಆಚಾರ್ಯ (Cartoonist Satish Acharya) ರಚನೆಯ ಕಾರ್ಟೂನ್ (Cartoon) ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಸಂಚಲನ ಸೃಷ್ಟಿಸಿವೆ. ಈ ವ್ಯಂಗ್ಯಚಿತ್ರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.

ಕಾರ್ಟೂನ್‌ನಲ್ಲಿ ಏನಿದ?

Tap to resize

Latest Videos

ಇಂದು ಬೆಳಗ್ಗೆ (27 ಮೇ 2024) ಎಂಟು ಗಂಟೆಗೆ ಸತೀಶ್ ಆಚಾರ್ಯ ತಾವು ರಚಿಸಿದ ವ್ಯಂಗ್ಯ ಚಿತ್ರವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇವಸ್ಥಾನದ ಗರ್ಭಗುಡಿಯೊಳಗೆ ನಿಂತಿದ್ದಾರೆ. ಹೊರಗೆ ಭಗವಾನ್ ಶ್ರೀರಾಮ (Lord Sri Rama) ನಿಂತಿರೋದನ್ನು ಕಾಣಬಹುದು. ಗರ್ಭಗುಡಿಯೊಳಗಿಂದ ಪ್ರಧಾನಿ ಮೋದಿ, ಯಾರು ನೀವು ಎಂದು ಕೇಳುವಂತೆ ಈ ಚಿತ್ರವನ್ನು ರಚಿಸಲಾಗಿದೆ.

ವ್ಯಂಗ್ಯಚಿತ್ರದ ಕುರಿತು ಆಕ್ರೋಶ 

undefined

ಇನ್ನು ಈ ವ್ಯಂಗ್ಯಚಿತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸತೀಶ್ ಆಚಾರ್ಯ ತಮ್ಮ ಈ ಕಾರ್ಟೂನ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ದೇವರು ರಾಮನನ್ನು ಅಪಹಾಸ್ಯ ಮಾಡಿದ್ದಾರೆ. ಸತೀಶ್ ಆಚಾರ್ಯ ಈ ಫೋಟೋವನ್ನು ಡಿಲೀಟ್ ಮಾಡಿ ದೇಶದ ಜನತೆಯಲ್ಲಿ ಕ್ಷಮೆ ಕೇಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಕೂಡಲೇ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿರುವ ಸತೀಶ್ ಆಚಾರ್ಯ ಅವರನ್ನು ಬಂಧನ ಮಾಡಬೇಕೆಂಬ ಆಗ್ರಹ ಸಹ ಕೇಳಿ ಬಂದಿದೆ. 

Hey Bhagwan! pic.twitter.com/GG8xvCnSx2

— Satish Acharya (@satishacharya)

ಪ್ರಧಾನಿ ಮೋದಿ ಸಂದರ್ಶನ

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರದಲ್ಲಿ ಮೂರನೇ ಬಾರಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಮುಂದಿನ ಗುರಿಯನ್ನು ಪೂರ್ಣಗೊಳಿಸಲು ತಾವು ದೈವಿಕ ಉದ್ದೇಶವನ್ನು ಹೊಂದಿದ್ದೇವೆ. ಈ ಗುರಿ ಸಾಧನೆಗೆ ನಾವು ಪ್ರತಿಜ್ಞೆ ಮಾಡುತ್ತೇವೆ ಎಂದು ಹೇಳಿದ್ದರು.

ತಮ್ಮನ್ನು ನಂಬಿರುವ ಜನರಿಗೆ ಸೇವೆ ಸಲ್ಲಿಸುವುದು ನಮ್ಮ ಕರ್ತವ್ಯವಾಗಿರುತ್ತದೆ. ಕೆಲವರು ನನ್ನನ್ನು ಕೆಟ್ಟ ಪದಗಳನ್ನು ಬಳಸಿ ನಿಂದಿಸಬಹುದು. ಒಂದಿಷ್ಟು ಜನರು ನನ್ನ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಬಹುದು. ನನ್ನ ಮೇಲೆ ನಂಬಿಕೆ ಇರಿಸುವ ಜನರನ್ನು ನೋಯಿಸುವ ಕೆಲಸ ಮಾಡಲ್ಲ ಅವರು ನಿರಾಶರಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿರುತ್ತದೆ ಎಂದು ಪ್ರಧಾನಿಗಳು ಹೇಳಿದ್ದರು.

ಅಬ್ಕಿ ಬಾರ್ 400 ಪಾರ್ ಬಗ್ಗೆ ಸಟ್ಟಾ ಭವಿಷ್ಯವೇನು..? ಮೋದಿ & ರಾಹುಲ್‌ಗೆ ಎಲ್ಲಿ ಏಳು..ಬೀಳು..?

ಕೆಲಸಕ್ಕಾಗಿ ನಾನು ಸಮರ್ಪಿತ  

ಕೆಲವರು ಹುಚ್ಚನೆಂದು ಕರೆಯಬಹುದು ಆದ್ರೆ ಆ ದೇವರು ನನ್ನನ್ನು ಒಂದು ಸದುದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂಬ ನಂಬಿಕೆ ನನ್ನಲ್ಲಿದೆ. ಆ ಉದ್ದೇಶ ಸಾಧಿಸಿದ ನಂತರವೂ ನನ್ನ ಕೆಲಸ ಮುಂದುವರಿಯುತ್ತಿರುತ್ತದೆ. ಈ ಉದ್ದೇಶಕ್ಕಾಗಿ ನನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದೇನೆ ಎಂದಿದ್ದರು.

15 ವರ್ಷಗಳಲ್ಲಿ ನಮ್ಮ ದೇಶದಲ್ಲಾದ ಬದಲಾವಣೆ ಹಿಂದೆಂದೂ ಕೇಳರಿಯದಂಥದ್ದು!

ಇಲ್ಲಿ ಹಲವು ಕೆಲಸಗಳನ್ನು ಮಾಡಲು ದೇವರು ನನ್ನನ್ನು ಪ್ರೇರಿಪಿಸಿದ್ದಾನೆ. ಆದ್ರೆ ದೇವರು ಆ ಕೆಲಸಗಳೇನು ಎಂದು ಬಹಿರಂಗಪಡಿಸಲ್ಲ. ನಾನು ನನ್ನ ಕೆಲಸಗಳನ್ನು ಮಾಡುತ್ತಿರುತ್ತೇನೆ. ನಾನು ದೇವರನ್ನು ಕರೆದು ಮುಂದೆ ಏನಾಗುತ್ತೆ ಎಂಬುದನ್ನು ಕೇಳಲು ಸಾಧ್ಯವಿಲ್ಲ ಎಂದು ಪ್ರಧಾನಿಗಳು ದೈವಿಕವಾಗಿ ಮಾತನಾಡಿದ್ದರು.

Would you dare to make similar cartoon on other community?

— Shilpa (@shilpa_cn)

Bhai Blasphemy kar rahe himat ho toh peaceful religion ke liye karo

— delulu(മോദിയുടെ കുടുംബം) (@aakaakar)

Satish is showing his frustration nothing else.

— Radhika Chaudhary (@Radhika8057)
click me!