ಭಜನೆ ಮಾಡ್ತಿದ್ದ ಮಹಿಳೆಯರ ಎದುರು ಬರೀ ಅಂಡರ್‌ವೇರ್‌ನಲ್ಲಿ ಕುಳಿತ ಸಬ್‌ಇನ್ಸ್‌ಪೆಕ್ಟರ್ : ವೀಡಿಯೋ ವೈರಲ್

Published : May 27, 2024, 04:34 PM IST
ಭಜನೆ ಮಾಡ್ತಿದ್ದ ಮಹಿಳೆಯರ ಎದುರು ಬರೀ ಅಂಡರ್‌ವೇರ್‌ನಲ್ಲಿ ಕುಳಿತ ಸಬ್‌ಇನ್ಸ್‌ಪೆಕ್ಟರ್ : ವೀಡಿಯೋ ವೈರಲ್

ಸಾರಾಂಶ

ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೇ ಕೇವಲ ಅಂಡರ್‌ವೇರ್ ಧರಿಸಿ ಕುಳಿತ ಪೊಲೀಸ್ ಪೇದೆಯೊಬ್ಬನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಲಾಗಿದೆ

ಉನ್ನಾವೊ: ಭಜನೆ ಮಾಡುತ್ತಿದ್ದ ಮಹಿಳೆಯರ ಮುಂದೇ ಕೇವಲ ಅಂಡರ್‌ವೇರ್ ಧರಿಸಿ ಕುಳಿತ ಪೊಲೀಸ್ ಪೇದೆಯೊಬ್ಬನ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆತನ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಉತ್ತರ ಪ್ರದೇಶ ರಾಜ್ಯದ ಉನ್ನಾವೊ ಜಿಲ್ಲೆಯ ಅಚಲ್‌ಗಂಜ್‌ನಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯ ಪೊಲೀಸಪ್ಪನ ನಡತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ. ಭಜನೆ ಮಾಡ್ತಿರುವ ಮಹಿಳೆಯರ ಮುಂದೆ ಈತ ಬರೀ ಚಡ್ಡಿ ಧರಿಸಿ ಚೇರೊಂದರ ಮೇಲೆ ಕುಳಿತಿರುವ ವೀಡಿಯೋ ವೈರಲ್ ಆಗಿದೆ. 

ವೈರಲ್ ಆಗಿರುವ ವೀಡಿಯೋದಲ್ಲಿ ಕಾಣಿಸುವಂತೆ ಮಹಿಳೆಯರೆಲ್ಲಾ ದೇವಸ್ಥಾನದ ಮುಂಭಾಗವೊಂದರಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದು ಬಹುತೇಕ ಎಲ್ಲ ಮಹಿಳೆಯರು ತಲೆಗೆ ಸೆರಗನ್ನು ಧರಿಸಿದ್ದಾರೆ. ಆದರೆ ಅವರ ಸರಿ ವಿರುದ್ಧ ದಿಕ್ಕಿನಲ್ಲಿ ಈತ ಬರಿ ಅಂಡರ್‌ವೇರ್‌ ಧರಿಸಿ ಚೇರೊಂದರ ಮೇಲೆ ಕುಳಿತು ಟೇಬಲ್ ಮೇಲಿದ್ದ ಏನನ್ನೋ ತಿನ್ನುತ್ತಿರುವುದನ್ನು ಕಾಣಬಹುದಾಗಿದೆ. ಹೀಗೆ ಬರೀ ಚಡ್ಡಿಯಲ್ಲಿ ಮಹಿಳೆಯ ಮುಂದೆ ಕುಳಿತ ವ್ಯಕ್ತಿಯನ್ನು ಸ್ಥಳೀಯ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಎಂದು ಗುರುತಿಸಲಾಗಿದೆ.

ಬೆಂಗಳೂರಲ್ಲಿ ಹೆಚ್ಚಾಯ್ತು ನಕಲಿ ಪೊಲೀಸರ ಹಾವಳಿ; ರಾತ್ರಿ ಗಸ್ತಿನಲ್ಲಿ ಸಾರ್ವಜನಿಕರಿಂದ ಸುಲಿಗೆ

ವೀಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸಪ್ಪನ ನಡತೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜನ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಮೆಂಟ್ ಮಾಡುತ್ತಿದ್ದಾರೆ. ಅನೇಕರು ಉನ್ನವೋ ಪೊಲೀಸರನ್ನು ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಘಾಪುರದ ಸ್ಟೇಷನ್ ಅಧಿಕಾರಿಗೆ ಈ ಬಗ್ಗೆ ತನಿಖೆಗೆ ಸೂಚಿಸಲಾಗಿದೆ ಎಂದು ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿದೆ.

ಮಕ್ಕಳಿಗೆ ವಾಹನ ಕೊಟ್ಟ ಪೋಷಕರ ವಿರುದ್ಧ ಜಾಮೀನು ರಹಿತ ಕೇಸ್‌: ಬಿ.ದಯಾನಂದ್

 

ಆದರೆ ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅರೆಬೆತ್ತಲೆ ಕುಳಿತ ಪೊಲೀಸ್ ಅಧಿಕಾರಿ, ತಾನು ಉಟ್ಟಿದ ವೇಸ್ಟಿ ಹಾಗೂ ಟವೆಲ್ ತೊಳೆದು ಹಾಕಿದ ನಂತರ ಕರೆಂಟ್ ಹೋಯ್ತು,  ನಾನು ಸ್ನಾನ ಮಾಡುವ ಪ್ರದೇಶವೂ ಕೂಡ ತೆರೆದ ಪ್ರದೇಶದಲ್ಲಿ ಇದೆ ಹೀಗಾಗಿ 2 ನಿಮಿಷಗಳ ಕಾಲ ನಾನು ಅಲ್ಲಿ ಹಾಗೆ ಕುಳಿತಿದೆ ಈ ವೇಳೆ ವೀಡಿಯೋ ಮಾಡಲಾಗಿದೆ ಎಂದು ಹೇಳಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್