ಕಾರಿನಲ್ಲಿ 200 ಕಿಲೋ ಮೀಟರ್‌ಗೂ ದೂರ ಪ್ರಯಾಣಿಸಿದ ಕೋಬ್ರಾ ಪೊಲೀಸರ ವಶಕ್ಕೆ

By Anusha KbFirst Published Sep 1, 2022, 4:03 PM IST
Highlights

ಕಾರು ಏರಿ 200 ಕಿಲೋ ಮೀಟರ್‌ಗೂ ದೂರ ಪ್ರಯಾಣಿಸಿದ್ದ ಹಾವೊಂದನ್ನು ಕೇರಳದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ಮಳೆಗಾಲದಲ್ಲಿ ಹಾವು ಚೇಳುಗಳು ನೀರು ಬೀಳದ ಜಾಗಗಳನ್ನು ಆಶ್ರಯಿಸಿ ಮನೆ ವಾಹನಗಳಲ್ಲಿ ಆಶ್ರಯ ಪಡೆಯಲು ನೋಡುತ್ತವೆ. ಕೆಲ ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ಶೂ ಒಳಗೆ ಅಡಗಿದ್ದ ಭಾರಿ ಗಾತ್ರದ ಹಾವೊಂದನ್ನು ಉರಗ ರಕ್ಷಕರು ರಕ್ಷಣೆ ಮಾಡಿದ್ದರು. ಹಾಗೆಯೇ ಈಗ ಕಾರು ಏರಿ 200 ಕಿಲೋ ಮೀಟರ್‌ಗೂ ದೂರ ಪ್ರಯಾಣಿಸಿದ್ದ ಹಾವೊಂದನ್ನು ಕೇರಳದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. 

ದೇಶಾದ್ಯಂತ ಮಳೆಯ ಅವಾಂತರ ಜೋರಾಗಿದೆ. ಹಾಗೆಯೇ ಕೇರಳದಲ್ಲಿಯೂ ಮಾನ್ಸೂನ್ ಅಬ್ಬರ ಜೋರಾಗಿದ್ದು, ಹಾವು ಚೇಳು ಮುಂತಾದವುಗಳು ಆಶ್ರಯ ಅರಸಿ ಮನೆ, ವಾಹನಗಳ ಒಳಗೆ ತೂರಿಕೊಳ್ಳಲು ಯತ್ನಿಸುತ್ತವೆ. ಅದೇ ರೀತಿ ಕಾರು ಏರಿ ಬೆಚ್ಚಗೆ ಕುಳಿತ ಹಾವೊಂದು ಸುಮಾರು 200 ಕಿಲೋ ಮೀಟರ್ ದೂರ ಕಾರಲ್ಲೇ ಸಾಗಿದೆ. ಕಾರು ಏರಿದ ಹಾವು ಸುಮಾರು ಒಂದು ವಾರದ ಕಾಲ ಅದರ ಇಂಜಿನ್ ಮೇಲೆ ಮುದುಡಿ ಮಲಗಿತ್ತು. ಅಲ್ಲದೇ 200 ಕಿಲೋ ಮೀಟರ್ ದೂರ ಪ್ರಯಾಣಿಸಿತ್ತು. ಈ ಹಾವನ್ನು ಕೇರಳದ ಅರಣ್ಯ ಸಿಬ್ಬಂದಿ ಕಡೆಗೂ ರಕ್ಷಿಸಿದ್ದಾರೆ. 

ವಿಡಿಯೋಗಾಗಿ ಮನೆಯಲ್ಲಿ ಹಾವು ಸಾಕಿದ youtuber ಬಂಧನ

ಕೇರಳದ ಅರ್ಪೂಕರದಲ್ಲಿ ಈ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ 10 ಅಡಿ ಉದ್ದದ ಈ ಹಾವನ್ನು ವ್ಯಕ್ತಿಯೊಬ್ಬರ ಕಾಂಪೌಂಡ್‌ನಿಂದ ರಕ್ಷಣೆ ಮಾಡಿ ನಂತರ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಆಗಸ್ಟ್ 2 ರಂದು  ಅರ್ಪೂಕರ ನಿವಾಸಿ ಸುಜಿತ್ ಎಂಬುವವರು ಮಲಪ್ಪುರಂಗೆ (Malappuram) ಹೋಗಿದ್ದಾಗ ಅವರ ಕಾರಿಗೆ ಈ ವಿಷಕಾರಿ ಸರೀಸೃಪವು ಹತ್ತಿಕೊಂಡಿದೆ ಎಂದು ನಂಬಲಾಗಿದೆ. ಸುಜಿತ್ ತಮ್ಮ ಕಾರನ್ನು ವಜಿಕಡವು (Vazhikadavu) ಎಂಬಲ್ಲಿ ಚೆಕ್‌ಪೋಸ್ಟ್ ಸಮೀಪ ನಿಲ್ಲಿಸಿದ್ದರು. ಅಲ್ಲಿ ಕೆಲವು ಸ್ಥಳೀಯರು ಹಾವೊಂದು ಕಾರಿಗೆ ಏರಿರುವುದನ್ನು ನೋಡಿರುವುದಾಗಿ ಸುಜಿತ್ ಅವರಿಗೆ ಮಾಹಿತಿ ನೀಡಿದರು. ಆದರೆ ಆಹ್ವಾನಿಸದೇ ಆಗಮಿಸಿದ ಈ ಅತಿಥಿ ಆ ಸಮಯದಲ್ಲಿ ಅವರ ಕಣ್ಣಿಗೆ ಕಾಣಿಸಿರಲಿಲ್ಲ. 

ಇದಾದ ನಡುವೆ ಭಾನುವಾರದಂದು ಅವರಿಗೆ ಕಾರಿನಲ್ಲಿ ನೇತಾಡುತ್ತಿದ್ದ ಹಾವಿನ ಚರ್ಮ (snake skin) ಕಾಣಿಸಿದ್ದು, ಇದರಿಂದ ಹಾವು ಇಂಜಿನ್‌ ಬಿಸಿಗೆ ಸಿಲುಕಿ ಕರಗಿ ಹೋಗಿರಬೇಕು ಎಂದು ಅವರು ಭಾವಿಸಿದ್ದು, ಇದು ಅವರ ಕುಟುಂಬ ಸದಸ್ಯರಲ್ಲಿ ಆತಂಕದ ಭಾವನೆಯನ್ನು ಮೂಡಿಸಿತ್ತು. ಆದಾಗ್ಯೂ ಕಾರನ್ನು ಸಂಪೂರ್ಣವಾಗಿ ತಪಾಸಣೆ ನಡೆಸಿದರು ಇವರಿಗೆ ಹಾವು ಮಾತ್ರ ಪತ್ತೆಯಾಗಿಲ್ಲ. ಆದರೆ ಕೆಲ ಸಮಯದ ಬಳಿಕ ಈ ಹಾವು ಮನೆಯ ಕಾಂಪೌಂಡ್‌ ಒಳಗೆಯೇ 500 ಮೀಟರ್ ದೂರದಲ್ಲಿ ಕಾಣಿಸಿಕೊಂಡಿತ್ತು. 

ತನ್ನನ್ನು ಕಚ್ಚಿದ ಹಾವನ್ನು ಕೊಂದು ಸೇಡು ತೀರಿಸಿಕೊಂಡ ಟರ್ಕಿಯ 2 ವರ್ಷದ ಮಗು

 ತನ್ನ ಕಾರಿನಲ್ಲಿ ಹಾವು ಇರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ  ಸುಜಿತ್ ಅವರ ನೆರೆಹೊರೆಯವರು  ವನ್ಯಜೀವಿ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು. ಸಾಮನ್ಯವಾಗಿ ಆ ಪ್ರದೇಶದಲ್ಲಿ ನಾಗರಹಾವು (king cobras) ಕಾಣಿಸುವುದು ಅಪರೂಪವಾಗಿದ್ದರಿಂದ ಇದು ಜನರಲ್ಲಿ ಕುತೂಹಲ ಮೂಡಿಸಿತ್ತು. ಬಹುಶಃ ಈ ಹಾವು ವಾಹನದ ಕೆಳಭಾಗದಲ್ಲಿ ಸುರಕ್ಷಿತವಾಗಿ ಆಗಮಿಸಿರಬೇಕು ಎಂದು ಅರಣ್ಯ ಸಿಬ್ಬಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಂತರ ಈ ಹಾವನ್ನು ಜೋಪಾನವಾಗಿ ಸೆರೆ ಹಿಡಿದ ಅರಣ್ಯ ಸಿಬ್ಬಂದಿ ಬಳಿಕ ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.

ಬಿಳಿ ಹಾವು ಪತ್ತೆ
ಕೆಲದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನಿನ ರಾಮನಗರ ನಿವಾಸಿ ಸುಬ್ರಹ್ಮಣ್ಯ ನಾಯ್ಕ ಅವರ ಮನೆಯಲ್ಲಿ ಅಪರೂಪದ ಬಿಳಿ ಹಾವು ಪ್ರತ್ಯಕ್ಷಗೊಂಡು ಜನರಲ್ಲಿ ಭೀತಿ ಸೃಷ್ಠಿಸಿತ್ತು.‌ ಬಳಿಕ ಈ ಮಾಹಿತಿ ಮೇರೆಗೆ ಉರಗ ತಜ್ಞ ಪವನ್ ಎಮ್ ನಾಯ್ಕ ಸ್ಥಳಕ್ಕೆ ಭೇಟಿ ಈ ಬಿಳಿ ಹಾವು ಹೆಬ್ಬಾವು ಎಂದು ತಿಳಿಸುವ ಮೂಲಕ ಜನರ ಭೀತಿಯನ್ನು ದೂರ ಮಾಡಿದ್ದರು. ಬಿಳಿ ಹೆಬ್ಬಾವನ್ನು ಅಲ್ಬಿನೋ ಸ್ನೇಕ್ಸ್ ಎಂದು ಕೂಡಾ ಕರೆಯಲಾಗುತ್ತಿದ್ದು, ಚರ್ಮಕ್ಕೆ ಬಣ್ಣ ನೀಡುವ ವರ್ಣ ದ್ರವ್ಯ ಗ್ರಂಥಿ ಅಂದರೆ ಮೆಲಾಲಿನ್ ಅಥವಾ ಪಿಗ್ಮೆಂಟ್ ನ ಕೊರತೆಯಿಂದ ಚರ್ಮಕ್ಕೆ ಬಣ್ಣ ಬರದೇ ಈ ರೀತಿ ಬಿಳಿ ಬಣ್ಣಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ. 

click me!