ಈ ಮಕ್ಕಳ ಅಪ್ಪ ನಾನಲ್ಲ ಎಂದ ಗಂಡ: ಅವಳಿ ಹಸುಗೂಸುಗಳ ಕತ್ತು ಸೀಳಿ ಕೊಂದೇ ಬಿಟ್ಟ ತಾಯಿ

Published : Jul 12, 2024, 11:06 AM IST
ಈ ಮಕ್ಕಳ ಅಪ್ಪ ನಾನಲ್ಲ ಎಂದ ಗಂಡ: ಅವಳಿ ಹಸುಗೂಸುಗಳ ಕತ್ತು ಸೀಳಿ ಕೊಂದೇ ಬಿಟ್ಟ ತಾಯಿ

ಸಾರಾಂಶ

ಈ ಮಕ್ಕಳ ಅಪ್ಪ ನಾನಲ್ಲ ಎಂದ ಗಂಡನ ಮಾತಿನಿಂದ ಬೇಸತ್ತ ಪತ್ನಿಯೊಬ್ಬಳು ತನ್ನದೇ ಅವಳಿ ಮಕ್ಕಳನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಘಟನೆ ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ನಡೆದಿದೆ. 

ನವದೆಹಲಿ: ಈ ಮಕ್ಕಳ ಅಪ್ಪ ನಾನಲ್ಲ ಎಂದ ಗಂಡನ ಮಾತಿನಿಂದ ಬೇಸತ್ತ ಪತ್ನಿಯೊಬ್ಬಳು ತನ್ನದೇ ಅವಳಿ ಮಕ್ಕಳನ್ನು ಕತ್ತು ಸೀಳಿ ಭೀಕರವಾಗಿ ಹತ್ಯೆಗೈದ ಘಟನೆ ಜಮ್ಮು ಕಾಶ್ಮೀರದ ಪೂಂಚ್‌ ಜಿಲ್ಲೆಯಲ್ಲಿ ನಡೆದಿದೆ. 

ಸೌದಿಯಲ್ಲಿದ್ದ ಗಂಡ

ಹೀಗೆ ತಾನು ಹೆತ್ತ ಕರುಳ ಕುಡಿಗಳನ್ನೇ ಹೀಗೆ ಭೀಕರವಾಗಿ ಹತ್ಯೆ ಮಾಡಿದ ಮಹಿಳೆಯ ಪತಿ ಬಹಳ ದೀರ್ಘಕಾಲದಿಂದ ಅರಬ್ ರಾಷ್ಟ್ರ ಸೌದಿಯಲ್ಲಿ ಉದ್ಯೋಗದಲ್ಲಿದ್ದ, ಇತ್ತೀಚೆಗೆ ಅಂದರೆ 3 ತಿಂಗಳ ಹಿಂದಷ್ಟೇ ಆತ ತವರಿಗೆ ಮರಳಿದ್ದ. ಆತ ಆಗಮಿಸಿದ ಕೆಲವೇ ದಿನಗಳಲ್ಲಿ ಹೆಂಡತಿ ಅವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಹೀಗಾಗಿ ಆತನಿಗೆ ಇದು ತನ್ನ ಮಕ್ಕಳಲ್ಲ ಎಂಬುದು ಖಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಆತ ಸೀದಾ ಹೋಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪತ್ನಿಗೆ ಹುಟ್ಟಿರುವ ಮಕ್ಕಳು ತನ್ನವಲ್ಲ, ಅವು ಆಕೆಯ ಅನೈತಿಕ ಸಂಬಂಧದಿಂದ ಜನಿಸಿವೆ ಎಂದು ದೂರಿದ್ದ. ಇದರಿಂದ ಭಯಗೊಂಡ ಪತ್ನಿ ತನ್ನಿಬ್ಬರು ಅವಳಿ ಮಕ್ಕಳನ್ನು ಎತ್ತಿಕೊಂಡು ಮನೆ ಸಮೀಪದ ಹೊಲವೊಂದಕ್ಕೆ ಹೋಗಿ ಅಲ್ಲೇ ಮಕ್ಕಳಿಬ್ಬರ ಕತ್ತು ಸೀಳಿ ಕೊಲೆ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. 

ಬೆಂಗಳೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪ್ರೇಯಸಿಯ 3 ವರ್ಷದ ಮಗುವನ್ನೇ ಕೊಂದ ಪಾಪಿ..!

ಸ್ಥಳೀಯರು ಈ ಪ್ರಕರಣದಲ್ಲಿ ಗಂಡನೂ ಕೈ ಜೋಡಿಸಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಆದರೆ ಪತ್ನಿಯನ್ನು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಆಕೆ ತಾನೇ ಮಕ್ಕಳನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಗಿ ವರದಿ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನ ಅವಳಿ ಹೆಣ್ಣು ಮಕ್ಕಳನ್ನು ತಾನೇ ಕೊಲೆ ಮಾಡಿದ್ದಾಗಿ ಆಕೆ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ಪೂಂಚ್‌ನ ಪೊಲೀಸ್ ಅಧಿಕಾರಿ ಯೋಗುಲ್ ಮನ್ಹಸ್‌ ಹೇಳಿದ್ದಾರೆ. 

ಈ ಘಟನೆ ಸ್ಥಳೀಯರಲ್ಲಿ ಭಯ ಹುಟ್ಟಿಸಿದ್ದು, ಏನು ಅರಿಯದ ಹಸುಗೂಸುಗಳನ್ನು ಹತ್ಯೆ ಮಾಡಿದ ತಾಯಿಗೆ ಕಠಿಣ ಶಿಕ್ಷೆ ನೀಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.  ನಿನ್ನೆಯಷ್ಟೇ ದೆಹಲಿಯಲ್ಲಿ ವ್ಯಕ್ತಿಯೊಬ್ಬ ತನ್ನ ಅವಳಿ ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ಮನೆ ಸಮೀಪವೇ ಹೂತ್ತಿಟ್ಟಿದ್ದ ದೆಹಲಿಯ ಸುಲ್ತಾನ್‌ಪುರಿ ಬಳಿ ಈ ಘಟನೆ ನಡೆದಿತ್ತು, ಗಂಡು ಮಗುವಿನ ಆಸೆಯಲ್ಲಿದ್ದ ಗಂಡ ಹೆಣ್ಣು ಮಕ್ಕಳು ಹುಟ್ಟಿದ್ದಕ್ಕೆ ಬೇಸತ್ತು ಈ ಕೃತ್ಯವೆಸಗಿದ್ದ ಎಂದು ವರದಿ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಜಮ್ಮುವಿನಲ್ಲಿ ಅವಳಿ ಕಂದಮ್ಮಗಳನ್ನು ತಾಯಿಯೇ ಭೀಕರವಾಗಿ ಕೊಲೆ ಮಾಡಿದ್ದಾಳೆ. 

ಇಂಥಾ ಮಕ್ಕಳು ಬೇಕಾ? ಅಪ್ಪ ಐ ಫೋನ್ ಕೊಡ್ಸಿಲ್ಲ ಅಂತ 18ರ ಬಾಲಕ ಆತ್ಮಹತ್ಯೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ