ಸೇನೆಯಿಂದ ಸಿಕ್ಕ ಪರಿಹಾರದಲ್ಲಿ ನಮಗೇನೂ ಸಿಕ್ಕಿಲ್ಲ, ಸೊಸೆ ನಮ್ಮೊಂದಿಗಿಲ್ಲ: ಹುತಾತ್ಮ ಅನ್ಶುಮನ್ ಪೋಷಕರ ಅಳಲು

By Anusha Kb  |  First Published Jul 12, 2024, 9:12 AM IST

ತಮ್ಮ ಸಹೋದ್ಯೋಗಿಗಳನ್ನು ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡದ ಹುತಾತ್ಮ ಯೋಧ ಅನ್ಶುಮನ್ ಸಿಂಗ್ ಅವರ ಪೋಷಕರು ಈಗ ಯೋಧನ ಸಾವಿನ ನಂತರ ಸಿಗುವ ಪರಿಹಾರದ ವಾರಸುದಾರರ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. 


ಕಳೆದ ವರ್ಷ ಸಿಯಾಚಿನ್‌ನಲ್ಲಿ ಸೇನಾ ಬಂಕರ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ತಮ್ಮ ಸಹೋದ್ಯೋಗಿಗಳನ್ನು ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡದ ಹುತಾತ್ಮ ಯೋಧ ಅನ್ಶುಮನ್ ಸಿಂಗ್ ಅವರ ಪೋಷಕರು ಈಗ ಯೋಧನ ಸಾವಿನ ನಂತರ ಸಿಗುವ ಪರಿಹಾರದ ವಾರಸುದಾರರ ಬಗ್ಗೆ ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಇತ್ತೀಚೆಗೆ ಅನ್ಶುಮನ್ ಅವರಿಗೆ ಅವರ ಜೀವಮಾನದ ಶ್ರೇಷ್ಠ ತ್ಯಾಗಕ್ಕಾಗಿ ಮರಣೋತ್ತರವಾಗಿ ಕೀರ್ತಿಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು. ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಈ ಪ್ರಶಸ್ತಿಯನ್ನು ಅನ್ಶುಮನ್ ಅವರ ಪತ್ನಿ ಸ್ಮೃತಿ ಅವರಿಗೆ ಪ್ರದಾನ ಮಾಡಿದ್ದರು. ಈ ವೇಳೆ ಎಳೆಯ ಪ್ರಾಯದಲ್ಲಿ ವಿಧವೆಯಾದ ಸ್ಮೃತಿ ಅವರನ್ನು ನೋಡಿ ರಾಷ್ಟ್ರಪತಿಗಳು ಸೇರಿದಂತೆ ಇಡೀ ದೇಶವೇ ಮರುಗಿತ್ತು.

ಆದರೆ ಈಗ ಅನ್ಶುಮನ್ ಸಿಂಗ್ ಅವರ ಪೋಷಕರು ಈಗ ಅನ್ಶುಮನ್ ನಿಧನದ ನಂತರ ಕುಟುಂಬಕ್ಕೆ ಸಿಗುವ ಪರಿಹಾರದ ಹಂಚಿಕೆಯ ಬಗ್ಗೆ ಮರುಶೀಲಿಸುವಂತೆ ಮನವಿ ಮಾಡಿದ್ದಾರೆ. ಭಾರತೀಯ ಸೇನೆಯ ಎನ್‌ಒಕೆ ಮಾನದಂಡದಲ್ಲಿ ( Indian Army's next of kin (NOK) criteria)ಬದಲಾವಣೆ ಮಾಡಿ ಪೋಷಕರಾದ ತಮಗೂ ಆರ್ಥಿಕ ಸಹಾಯ ಮಾಡುವಂತೆ ಅವರು ಮನವಿ ಮಾಡಿದ್ದಾರೆ. ಸಾಮಾನ್ಯವಾಗಿ ಯೋಧ ವಿವಾಹಿತರಾಗಿದ್ದರೆ, ಅವರು ಕರ್ತವ್ಯದ ವೇಳೆ ಮಡಿದಿದ್ದರೆ ಅವರ ಪತ್ನಿಗೆ ಸಂಪೂರ್ಣ ಪರಿಹಾರದ ಹಣ ಸೇರುವುದು.  

Latest Videos

undefined

'ಮನೆ ಕಟ್ಬೇಕು, ಅಪ್ಪ ಆಗ್ಬೇಕು.. 50 ವರ್ಷ ಜೊತೆಯಾಗಿ ಬದುಕಬೇಕು..' ನನ್ನ ಗಂಡನಿಗೆ ಇದೇ ಕನಸಾಗಿತ್ತು!

ಈ ಬಗ್ಗೆ ಚಾನೆಲ್‌ವೊಂದರಲ್ಲಿ ಮಾತನಾಡಿದ ಅನ್ಶುಮನ್ ಸಿಂಗ್ ಅವರ ಪೋಷಕರಾದ ರವಿ ಪ್ರತಾಪ್ ಸಿಂಗ್ ಹಾಗೂ ಮಂಜು ಸಿಂಗ್, ನಮ್ಮ ಕುಟುಂಬವನ್ನು ತೊರೆದು ಹೋಗಿದ್ದಾರೆ. ಹಾಗೂ ಈಗ ನಮ್ಮ ಮಗನ ನಿಧನದ ನಂತರ ಸಿಗುವ ಎಲ್ಲ ಸವಲತ್ತುಗಳಿಗೆ ಅವರು ಮಾತ್ರ ಅರ್ಹರಾಗಿದ್ದಾರೆ. ನಮಗೆ ಗೋಡೆಯಲ್ಲಿ ನೇತು ಹಾಕಿರುವ ಮಗನ ಫೋಟೋ ಮಾತ್ರ ಈಗ ಆಸರೆಯಾಗಿದೆ ಎಂದು ಹೇಳಿದ್ದಾರೆ. 

ಸೇನೆಯ ವಾರಸುದಾರಿಕೆಯ ಮಾನದಂಡ ಸರಿಯಾಗಿಲ್ಲ, ಈ ಬಗ್ಗೆ ನಾನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆ ಮಾತನಾಡಿದ್ದೇನೆ. ಅನ್ಶುಮನ್ ಸಿಂಗ್ ಅವರ ಪತ್ನಿ ನಮ್ಮೊಂದಿಗೆ ವಾಸ ಮಾಡುತ್ತಿಲ್ಲ, ಮದುವೆಯಾಗಿ ಕೇವಲ 5 ತಿಂಗಳಾಗಿತ್ತಷ್ಟೇ, ಹೀಗಾಗಿ ಮಕ್ಕಳು ಕೂಡ ಆಗಿರಲಿಲ್ಲ, ಹೀಗಾಗಿ ನಮಗೀಗ ಗೋಡೆಯಲ್ಲಿ ಹೂವಿನ ಹಾರದೊಂದಿಗೆ ನೇತು ಹಾಕಿದ ಮಗನ ಫೋಟೋ ಮಾತ್ರ ಉಳಿದಿದೆ. ಹೀಗಾಗಿ ನಾವು ಎನ್‌ಒಕೆಗೆ ಸಂಬಂಧಿಸಿದ ಮಾನದಂಡವನ್ನು ಪರಿಶೀಲಿಸಬೇಕು ಎಂದು ಬಯಸುತ್ತೇವೆ.  ಹುತಾತ್ಮನ ಯೋಧನ ಪತ್ನಿ ಕುಟುಂಬದಲ್ಲಿಯೇ ಉಳಿಯಬೇಕೆ ಹಾಗೂ ಯಾರು ಹೆಚ್ಚು ಆತನ ಮೇಲೆ  ಅವಲಂಬಿತರಾಗಿದ್ದಾರೆ ಎಂಬುದನ್ನು ನಿರ್ಧರಿಸಬೇಕು ಎಂದು ಅನ್ಶುಮನ್ ಅವರ ತಂದೆ ಹೇಳಿದ್ದಾರೆ. 

ಎನ್‌ಒಕೆ ರೂಲ್ಸ್ ಏನು?

ಭಾರತೀಯ ಸೇನೆಯಲ್ಲಿ ಎನ್‌ಒಕೆ ಎಂದರೆ ಯೋಧನ ರಕ್ತ ಸಂಬಂಧಿ ಅಥವಾ ಬಹಳ ಹತ್ತಿರದ ಸಂಬಂಧಿಗೆ ನೀಡುವ ಪರಿಹಾರ ಮೊತ್ತದ ವಾರಸುದಾರರು . ಒಂದು ವೇಳೆ ಯೋಧ ವಿವಾಹಿತನಾಗಿದ್ದರೆ ಈ ಪರಿಹಾರ ಸಂಪೂರ್ಣವಾಗಿ ಪತ್ನಿಗೆ ಸೇರುತ್ತದೆ. ಸರಳವಾಗಿ ಹೇಳಬೇಕೆಂದರೆ ಇದು ಬ್ಯಾಂಕ್‌ನಲ್ಲಿ ನಾಮಿನಿ ಇದ್ದಂತೆ. ಕೆಡೆಟ್ ಒಬ್ಬ ಸೇನೆ ಸೇರಿದಾಗ ಆತನ ಪೋಷಕರು ಅಥವಾ ಪಾಲಕರ ಹೆಸರನ್ನು ವಾರಸುದಾರರ ಎಂದು ಎನ್‌ಒಕೆ ಲಿಸ್ಟ್‌ನಲ್ಲಿ ರೆಕಾರ್ಡ್ ಮಾಡಲಾಗುತ್ತದೆ. ಒಂದು ವೇಳೆ ಕೆಡೆಟ್ ಅಥವಾ ಸೇನಾ ಅಧಿಕಾರಿ ವಿವಾಹಿತನಾಗಿದ್ದರೆ, ಸೇನಾ ನಿಯಮಗಳ ಪ್ರಕಾರ, ಪತ್ನಿಯೇ ಆತನ ವಾರಸುದಾರಳಾಗುತ್ತಾಳೆ ಈ ವೇಳೆ ಪೋಷಕರಿಗೆ ಯಾವುದೇ ಪರಿಹಾರ ಸಿಗುವುದಿಲ್ಲ.

ಪುಟ್ಟ ವಯಸ್ಸಿನ ವಿಧವೆಗೆ ಕೀರ್ತಿ ಚಕ್ರ ನೀಡಿ ಸಂತೈಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು!

ಕರ್ತವ್ಯದ ವೇಳೆ ಹುತಾತ್ಮರಾಗಿದ್ದ ಕ್ಯಾಪ್ಟನ್ ಅನ್ಶುಮನ್ ಸಿಂಗ್ ಅವರು  26 ಪಂಜಾಬ್‌ ಬೆಟಾಲಿಯನ್‌ನಲ್ಲಿ ಇದ್ದು, ಸಿಯಾಚಿನ್ ಗ್ಲೇಸಿಯರ್ ಪ್ರದೇಶದಲ್ಲಿ ವೈದ್ಯಕೀಯ ಅಧಿಕಾರಿಯಾಗಿ ನಿಯೋಜನೆಗೊಂಡಿದ್ದರು.  2023 ರ ಜುಲೈ 19 ರಂದು ಬೆಳಗ್ಗೆ 3 ಗಂಟೆ ಸುಮಾರಿಗೆ ಭಾರತೀಯ ಸೇನೆಯ ಶಸ್ತ್ರಾಸ್ತ್ರಗಾರದಲ್ಲಿ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿತ್ತು. ಈ ವೇಳೆ ಜತೆಗಾರರನ್ನು ರಕ್ಷಿಸಲು ಹೋಗಿದ್ದ ಅವರು ಮೂರರಿಂದ 4 ಜನರ ರಕ್ಷಣೆಯನ್ನು ಮಾಡಿದ್ದರು. ಆದರೆ ಅಷ್ಟರಲ್ಲಿ ಬೆಂಕಿ ಶೀಘ್ರವಾಗಿ ಹಬ್ಬಿ ಅನ್ಶುಮನ್ ಅವರನ್ನು ಗಂಭೀರವಾಗಿ ಗಾಯಗೊಳಿಸಿತ್ತು. ಅವರು ಸೇರಿದಂತೆ ಗಾಯಾಳು ಯೋಧರನ್ನು ಕೂಡಲೇ ಏರ್‌ಲಿಫ್ಟ್ ಮಾಡಲಾಯಿತಾದರು ಉಳಿಸಿಕೊಳ್ಳಲಾಗಿರಲಿಲ್ಲ.

ಇವರಿಗೆ ಮರಣೋತ್ತರವಾಗಿ ಜುಲೈ 5 ರಂದು ಭಾರತ ಸರ್ಕಾರದಿಂದ ಕೀರ್ತಿ ಚಕ್ರ ಪ್ರಶಸ್ತಿ ನೀಡಿದ ಗೌರವಿಸಲಾಗಿತ್ತು. ಅನ್ಶುಮನ್ ಅವರ ಪತ್ನಿ ಸ್ಮೃತಿ ಅವರು ತಮ್ಮ ತಾಯಿಯೊಂದಿಗೆ ಆಗಮಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅನ್ಶುಮನ್ ಪರವಾಗಿ ಕೀರ್ತಿಚಕ್ರ ಸ್ವೀಕರಿಸಿದರು.  

click me!