ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಹಾಗೂ ವಿವಾಹಪೂರ್ವ ಕಾರ್ಯಕ್ರಮಗಳ ಒಟ್ಟು ಖರ್ಚು ಈವರೆಗೆ 4000ದಿಂದ 5000 ಕೋಟಿ ರು. ಎನ್ನಲಾಗಿದೆ. ಆದರೆ ಇದು ಮುಕೇಶ್ ಅಂಬಾನಿ ಅವರ ಕುಟುಂಬದ ಒಟ್ಟು ಆಸ್ತಿ ಪ್ರಮಾಣದಲ್ಲಿ ಶೇ.0.5ಕ್ಕಿಂತಲೂ ಕಡಿಮೆ ಎನ್ನಲಾಗಿದೆ. ಅಂಬಾನಿ ಆಸ್ತಿ 10 ಲಕ್ಷ ಕೋಟಿ ರು.ಗಿಂತಲೂ ಹೆಚ್ಚಿದೆ.
ಮುಂಬೈ(ಜು.12): ಭಾರತದ ಶ್ರೀಮಂತ ಉದ್ಯಮಿ, ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಮತ್ತು ನೀತಾ ಅಂಬಾನಿ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಕಾರ್ಯಕ್ರಮ ಇಂದು(ಶುಕ್ರವಾರ) ನಡೆಯಲಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆಂಷನ್ ಸೆಂಟರ್ ನಲ್ಲಿ ವಿವಾಹ ನಡೆಯಲಿದ್ದು ಹಾಲಿವುಡ್, ಬಾಲಿವುಡ್‌ನ ಖ್ಯಾತ ನಟರು, ಜಾಗತಿಕ ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮತ್ತು ಇತರೆ ಗಣ್ಯರು ಭಾಗಿಯಾಗಲಿದ್ದಾರೆ.
ಖ್ಯಾತ ಪಾಪ್ ಗಾಯಕಿ ಕಿಮ್ ಮತ್ತು ಖೋ ಕರ್ದಾಶಿಯಾನ್, ಬಾಕ್ಸರ್‌ಮೈಕ್ ಟೈಸನ್, ಬ್ರಿಟನ್ ಮಾಜಿ ಪ್ರಧಾನಿಗಳಾದ ಬೋರಿಸ್ ಜಾನ್ಸನ್, ಟೋನಿ ಬ್ಲರ್, ಇಂಗ್ಲೆಂಡ್ ಫುಟ್ಬಾಲ್ ತಾರೆ ಡೇವಿಡ್ ಬೆಕ್ ಹ್ಯಾಮ್, ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್, ಅಮಿರ್ ಖಾನ್, ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ಅಮಿತಾಬ್ ಬಚ್ಚನ್, ಪ್ರಿಯಾಂಕಾಚೋಪ್ರಾ ಹಾಗೂಐಶ್ವರ್ಯರೈ ದಂಪತಿ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ. ನಾಲ್ಕು ತಿಂಗಳ ಹಿಂದೆ ಮುಕೇಶ್ ಅಂಬಾನಿಯ ಹುಟ್ಟೂರಾದ ಗುಜರಾತ್‌ನ ಜಾಮ್ನಗರದಲ್ಲಿ ನಡೆದ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಝುಕರ್‌ಬರ್ಗ್, ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್, ಬ್ಲ್ಯಾಕ್‌ರಾಕ್ ಸಹಸಂಸ್ಥಾಪಕ ಲ್ಯಾರಿ ಫಿಂಕ್, ಆಲ್ಬಬೆಟ್ ಸಿಇಒ ಸುಂದರ್‌ಪಿಚೈ, ಸೌದಿ ಅರಾಮ್ಮೋ ಅಧ್ಯಕ್ಷ ಯಾಸಿರ್‌ಅಲ್ ರುಮಯ್ಯನ್ ಸೇರಿ 1,200 ಆಹ್ವಾನಿತರು ಉಪಸ್ಥಿತರಿದ್ದು, ಖ್ಯಾತ ಗಾಯಕಿ ರಿಹಾನರ ಗಾಯನ ಪ್ರದರ್ಶನವಿತ್ತು.
ಮುಖೇಶ್ ಅಂಬಾನಿಯ ಮೂವರು ಮಕ್ಕಳಲ್ಲಿ ಶ್ರೀಮಂತರು ಯಾರು? ಆಕಾಶ್, ಇಶಾ,ಅನಂತ್ ಆಸ್ತಿ ಮೌಲ್ಯ ಎಷ್ಟು?
4000-5000 ಕೋಟಿ ರು. ಖರ್ಚು: