I-N-D-I-A ಕೂಟದ ಪ್ರಧಾನಿ ಅಭ್ಯರ್ಥಿ ಯಾರು?ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಮತಾ ಬ್ಯಾನರ್ಜಿ!

Published : Aug 31, 2023, 11:52 AM IST
 I-N-D-I-A ಕೂಟದ ಪ್ರಧಾನಿ ಅಭ್ಯರ್ಥಿ ಯಾರು?ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಮತಾ ಬ್ಯಾನರ್ಜಿ!

ಸಾರಾಂಶ

ವಿಪಕ್ಷಗಳ ಮೈತ್ರಿ ಒಕ್ಕೂಟ ಇಂದು ಮುಂಬೈನಲ್ಲಿ ಸಭೆ ಸೇರುತ್ತಿದೆ. ಇದರ ಬೆನ್ನಲ್ಲೇ ಪ್ರಧಾನಿ ಅಭ್ಯರ್ಥಿ ರೇಸ್‌ನಲ್ಲಿ ಹಲವರು ಕಾಣಿಸಿಕೊಂಡಿದ್ದಾರೆ.  ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ  ಯಾರು ಅನ್ನೋ ಪ್ರಶ್ನೆಗೆ ಸಿಎಂ ಮಮತಾ ಬ್ಯಾನರ್ಜಿ  ಉತ್ತರ ನೀಡಿದ್ದಾರೆ.

ಮುಂಬೈ(ಆ.31) ವಿಪಕ್ಷಗಳ ಇಂಡಿಯಾ ಮೈತ್ರಿ ಒಕ್ಕೂಟ ಇಂದು ಮುಂಬೈನಲ್ಲಿ ಸಭೆ ಸೇರುತ್ತಿದೆ.  2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ಪಣತೊಟ್ಟಿರುವ ವಿಪಕ್ಷಗಳು ಇಂಡಿಯಾ ಒಕ್ಕೂಟ ರಚಿಸಿ ಹೋರಾಟಕ್ಕೆ ರಣತಂತ್ರ ರೆಡಿ ಮಾಡಿದೆ. ಆದರೆ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಕುರಿತು ಸಭೆಯಲ್ಲಿ ಚರ್ಚೆ ನಡೆದಿಲ್ಲ. ಬಹರಿಂಗವಾಗಿ ಹಲವು ನಾಯಕರು ತಮ್ಮ ತಮ್ಮ ಮುಖಂಡರ ಹೆಸರು ಹೇಳುತ್ತಿದ್ದಾರೆ. ಇದರ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನಗೆ ಉತ್ತರಿಸಿದ್ದಾರೆ. ವಿಪಕ್ಷಗಳ ಮೈತ್ರಿಯಲ್ಲಿ ಇಂಡಿಯಾವೇ ಪ್ರಧಾನಿ ಅಭ್ಯರ್ಥಿ ಮುಖ.  ನಾವೆಲ್ಲೂ ಒಗ್ಗಟ್ಟಾಗಿ ಹೋರಾಡುತ್ತೇವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮೈತ್ರಿ ಸಭೆಗಾಗಿ ಈಗಾಗಲೇ ಮುಂಬೈಗೆ ಆಗಮಿಸಿರುವ ಪಶ್ಚಿಮ ಬಂಗಾಳ ಮಮತಾ ಬ್ಯಾನರ್ಜಿ, ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಘೋಷಿಸಿ ಚುನಾವಣೆ ಅಖಾಡಕ್ಕಿಳಿಯುವ ಯಾವುದೇ ಚರ್ಚೆ ನಡೆದಿಲ್ಲ. ನಾವೆಲ್ಲಾ ಒಗ್ಗಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಕುರಿತು ಇಂಡಿಯಾ ಒಕ್ಕೂಟದಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ.

ಕರ್ನಾಟಕ, ಹಿಮಾಚಲ ಗೆಲ್ಲಿಸಿದ ಮಲ್ಲಿಕಾರ್ಜುನ ಖರ್ಗೆಗೆ I-N-D-I-A ಕೂಟದ ಮುಖ್ಯಸ್ಥ ಸ್ಥಾನ!

ನಾವೆಲ್ಲಾ ಒಂದೇ ಕುಟುಂಬದಂತೆ ಇದ್ದೇವೆ. ನಮ್ಮ ಉದ್ದೇಶ ಭಾರತವನ್ನು ಕಾಪಾಡಬೇಕಿದೆ.  ಸಂವಿಧಾನವನ್ನು ಉಳಿಸಬೇಕಿದೆ. ಜನತೆಯ ಸಂಕಷ್ಟವನ್ನು ನಿವಾರಿಸಬೇಕಿದೆ. ಹೀಗಾಗಿ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋದು ಮೊದಲ ವಿಚಾರವಲ್ಲ. ದೇಶವನ್ನು ಉಳಿಸಿವುದು ಮೊದಲ ವಿಚಾರವಾಗಿದೆ. ಬಿಜೆಪಿ ಕಪಿಮುಷ್ಠಿಯಿಂದ ಭಾರತವನ್ನು ಬಿಡಿಸಿ ಜನರು ಸ್ವಚ್ಚಂದವಾಗಿ ಉಸಿರಾಡುವಂತೆ ಮಾಡಬೇಕಿದೆ ಎಂದು ಮಮತಾ ಬ್ಯಾನರ್ಜಿಹೇಳಿದ್ದಾರೆ.

ಇಂದಿನ ಸಭೆಗಾಗಿ ಮಮತಾ ಬ್ಯಾನರ್ಜಿ ಆಗಸ್ಟ್ 30 ರ ಸಂಜೆ ಮುಂಬೈ ತಲುಪಿದ್ದಾರೆ.   ಬುಧವಾರ ಮುಂಬೈಯಲ್ಲಿರುವ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಮನೆಗೆ ಭೇಟಿ ನಟನಿಗೆ ರಾಖಿ ಕಟ್ಟಿದ್ದಾರೆ. ಗುರುವಾರ ನಡೆಯಲಿರುವ ‘ಇಂಡಿಯಾ’ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಮುಂಬೈಗೆ ಬಂದಿಳಿದ ಬಳಿಕ ಮಮತಾ ನಟನ ಮನೆಗೆ ತೆರಳಿ ರಕ್ಷಾಬಂಧನ ಆಚರಿಸಿದ್ದಾರೆ. ಬಳಿಕ ಮಾತನಾಡಿದ ಅವರು ‘ಅಮಿತಾಭ್‌ ಅವರು ನಮ್ಮ ಭಾರತ ರತ್ನ. ಇಂದು ನಾನು ಅವರಿಗೆ ರಾಖಿ ಕಟ್ಟಿದೆ’ ಎಂದರು. ಈ ವೇಳೆ ‘ಮಮತಾ ಅವರು ನಮ್ಮನ್ನು ಕೋಲ್ಕತಾಗೆ ಆಹ್ವಾನಿಸಿದರು’ ಎಂದು ಅಮಿತಾಭ್‌ ಹೇಳಿದರು. ಮಮತಾ, ಶಿವಸೇನೆ ನಾಯಕ ಉದ್ಧವ್‌ ಠಾಕ್ರೆಗೂ ಬುಧವಾರ ರಾಖಿ ಕಟ್ಟಿದರು.

ನನ್ನ, ರಾಹುಲ್‌ ಮಧ್ಯೆ ಯಾವುದೇ ಬಿರುಕು ಇಲ್ಲ: ಬಿಜೆಪಿಗೆ ಪ್ರಿಯಾಂಕಾ ತಿರುಗೇಟು

ಇತ್ತೀಚೆಗೆ ಮಮತಾ ಬ್ಯಾನರ್ಜಿ ಚಂದ್ರಯಾನ ಕುರಿತು ನೀಡಿದ ಹೇಳಿಕೆಯಿಂದ ಭಾರಿ ಟ್ರೋಲ್ ಆಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಚಂದ್ರನ ಮೇಲೆ ಹೋಗಿದ್ದರು ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಎಡವಟ್ಟು ಮಾಡಿದ್ದರು. ಕಳೆದ ವಾರ ದೇಶದ ಮೊದಲ ಗಗನಯಾತ್ರಿ ರಾಕೇಶ್‌ ಶರ್ಮಾ ಅವರ ಬಗ್ಗೆ ಹೇಳುವಾಗ ಅವರ ಹೆಸರನ್ನು ರಾಕೇಶ್‌ ರೋಷನ್‌ (ಚಿತ್ರ ನಿರ್ದೇಶಕ) ಎಂದು ಹೇಳಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!