
ನವದೆಹಲಿ: ಮಾರ್ಗಸೂಚಿ ಅಥವಾ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 2023ರ ಜನವರಿಯಿಂದ ಮಾರ್ಚ್‌ವರೆಗೆ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದ ಭಾರತದ ಸುಮಾರು 19 ಲಕ್ಷ ವಿಡಿಯೋಗಳನ್ನು ತೆಗೆದು ಹಾಕಲಾಗಿದೆ ಎಂದು ಪ್ರಸಿದ್ಧ ವಿಡಿಯೋ ಸ್ಟ್ರೀಮಿಂಗ್ ಪ್ಲ್ಯಾಟ್‌ಫಾರ್ಮ್ ಯೂಟ್ಯೂಬ್ ಹೇಳಿದೆ.
ಈ ಬಗ್ಗೆ ವರದಿಯೊಂದನ್ನು ಬಿಡುಗಡೆ ಮಾಡಿರುವ ಯೂಟ್ಯೂಬ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜನವರಿಯಿಂದ ಮಾರ್ಚ್‌ವರೆಗೆ 3 ತಿಂಗಳ ಅವಧಿಯಲ್ಲಿ ಜಾಗತಿಕವಾಗಿ ಯ್ಯೂಟ್ಯೂಬ್‌ನಿಂದ 60,48,000 ವಿಡಿಯೋಗಳನ್ನು ತೆಗೆದು ಹಾಕಲಾಗಿದೆ. ಈ ಪೈಕಿ ಭಾರತದ 19 ಲಕ್ಷ ವಿಡಿಯೋಗಳು ಒಳಗೊಂಡಿವೆ ಎಂದು ತಿಳಿಸಿದೆ. ಅಲ್ಲದೇ ಅಮೆರಿಕದ 6,54,968, ರಷ್ಯಾದ 4,91,933 ಮತ್ತು ಬ್ರೆಜಿಲ್‌ನ 4,49,759 ವಿಡಿಯೋಗಳನ್ನು ಡಿಲೀಟ್ ಮಾಡಲಾಗಿದೆ.
ಯೂಟ್ಯೂಬ್ ಇತಿಹಾಸದಲ್ಲಿಯೇ ಗರಿಷ್ಠ ವೀಕ್ಷಣೆ ಕಂಡ Top-10 ಲೈವ್ ಸ್ಟ್ರೀಮ್, ಇಲ್ಲಿಯೂ ಇಸ್ರೋ ದಾಖಲೆ!
Youtube Channel ನಲ್ಲಿ ಹಣ ಗಳಿಸಲು ಈ ರೂಲ್ಸ್ ಫಾಲೋ ಮಾಡಿ : ಟ್ಯಾಕ್ಸ್ ಕಟ್ಟೋಕೆ ಮರೀಬೇಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ