ಶರಣಾಗಲು ಬಂದೆ ಪ್ಲೀಸ್‌ ಶೂಟ್‌ ಮಾಡ್ಬೇಡಿ: ಕೊರಳಲ್ಲಿ ಫಲಕ ಧರಿಸಿ ಪೊಲೀಸರಿಗೆ ಶರಣಾದ ದರೋಡೆ ಆರೋಪಿ

By Kannadaprabha NewsFirst Published Aug 31, 2023, 11:00 AM IST
Highlights

ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಕೇಡಿಗಳ ಎನ್‌ಕೌಂಟರ್‌ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ನಾನು ಶರಣಾಗಲು ಬಂದಿದ್ದೇನೆ. ನನ್ನನ್ನು ಶೂಟ್‌ ಮಾಡಬೇಡಿ ಎಂಬ ಫಲಕವನ್ನು ತನ್ನ ಕೊರಳಲ್ಲಿ ನೇತು ಹಾಕಿಕೊಂಡು ಪೊಲೀಸರಿಗೆ ಶರಣಾಗಿರುವ ಘಟನೆ ಗೊಂಡಾದಲ್ಲಿ ನಡೆದಿದೆ.

ಗೊಂಡಾ: ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ಕೇಡಿಗಳ ಎನ್‌ಕೌಂಟರ್‌ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಆರೋಪಿಯೊಬ್ಬ ನಾನು ಶರಣಾಗಲು ಬಂದಿದ್ದೇನೆ. ನನ್ನನ್ನು ಶೂಟ್‌ ಮಾಡಬೇಡಿ ಎಂಬ ಫಲಕವನ್ನು ತನ್ನ ಕೊರಳಲ್ಲಿ ನೇತು ಹಾಕಿಕೊಂಡು ಪೊಲೀಸರಿಗೆ ಶರಣಾಗಿರುವ ಘಟನೆ ಗೊಂಡಾದಲ್ಲಿ ನಡೆದಿದೆ.

ದರೋಡೆ ಪ್ರಕರಣದ ಆರೋಪಿ ಅಂಕಿತ್‌ ವರ್ಮಾ (Ankit verma) ಎಂಬಾತ ಕಳೆದ 6 ತಿಂಗಳುಗಳಿಂದ ಪೊಲೀಸರಿಂದ ತಲೆಮರೆಸಿಕೊಂಡಿದ್ದ. ಇದ್ದಕ್ಕಿಂತ ಪೊಲೀಸರ ಮೇಲಿನ ಭಯದಿಂದ ಛಾಪಿಯಾ ಪೊಲೀಸ್‌ ಠಾಣೆ ತಲುಪಿದ ಅಂಕಿತ್‌ ,‘ನಾನು ಶರಣಾಗಲು ಬಂದಿದ್ದೇನೆ. ನನಗೆ ಗುಂಡು ಹಾರಿಸಬೇಡಿ’ ಎಂದು ಕೂಗಿಕೊಂಡಿದ್ದಾನೆ. ಬಳಿಕ ಈತನನ್ನು ಬಂಧಿಸಿರುವ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

Latest Videos

ಬೈಕ್‌ನಲ್ಲಿದ್ದ ಹಿಂದೂ ಎಂಬ ಸ್ಟಿಕ್ಕರ್ ತೆಗೆಸಿದ ಪೊಲೀಸ್‌: ವೀಡಿಯೋ ವೈರಲ್‌, ತೀವ್ರ ಆಕ್ರೋಶ

ಕಳೆದ ಫೆ.20ರಂದು ಮಹುಲಿ ಖೋರಿ (Mahuli Khori) ಗ್ರಾಮದಲ್ಲಿ ಅಂಕಿತ್‌ ಮತ್ತು ಇನ್ನೊಬ್ಬ, ವ್ಯಕ್ತಿಯೊಬ್ಬರಿಗೆ ಗನ್‌ ತೋರಿಸಿ ಬೆದರಿಸಿ ದ್ವಿಚಕ್ರ ವಾಹನ, ಮೊಬೈಲ್‌ ಮತ್ತು ಹಣ ದೋಚಿ ಪರಾರಿಯಾಗಿದ್ದರು. ಬಳಿಕ ಅಂಕಿತ್‌ನನ್ನು ಹುಡುಕಿಕೊಟ್ಟವರಿಗೆ 20,000 ರು. ಬಹುಮಾನ ಘೋಷಿಸಲಾಗಿತ್ತು. ಈ ಹಿಂದೆ ಸರ್ಕಾರ ಮತ್ತು ಪೊಲೀಸನ್ನೇ ಬೆದರಿಸುತ್ತಿದ್ದ ಅಪರಾಧಿಗಳು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಆಡಳಿತದಲ್ಲಿ ಪೊಲೀಸರು ಮತ್ತು ಕಾನೂನು ಸುವ್ಯವಸ್ಥೆಗೆ ಎಷ್ಟು ಭಯಬಿದ್ದಿದ್ದಾರೆ ಎಂಬುದನ್ನು ತೋರಿಸುತ್ತಿದೆ ಎನ್ನಲಾಗಿದೆ.

ಬಜರಂಗದಳ ವಿರುದ್ಧ ‘ಸುಳ್ಳು’ ಟ್ವೀಟ್‌: ದಿಗ್ವಿಜಯ್‌ ಮೇಲೆ ಕೇಸು

ದಾಮೋಹ್‌: ಮಧ್ಯ ಪ್ರದೇಶದ ದಾಮೋಹ್‌ ಜಿಲ್ಲೆಯಲ್ಲಿ ‘ಜೈನ ಬಸದಿಯನ್ನು ಕೆಡವಿದವರು ಬಜರಂಗದಳದ ಕಾರ್ಯಕರ್ತರು’ ಎಂದು ಟ್ವೀಟ್‌ ಮಾಡಿದ್ದಕ್ಕಾಗಿ ಸುಳ್ಳು ಹರಡಿದ ಆರೋಪದಡಿ ಹಿರಿಯ ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆ.27ರಂದು ಟ್ವೀಟ್‌ ಮಾಡಿದ್ದ ಸಿಂಗ್‌ ‘ಬಜರಂಗದಳ ಸಮಾಜ ವಿರೋಧಿಯಾಗಿದ್ದು ಅದರ ಕಾರ್ಯಕರ್ತರು ಆ.26ರಂದು ಕುಂದಲ್‌ಪುರ (ದಾಮೋಹ್‌)ದಲ್ಲಿರುವ ಜೈನ ಬಸದಿಯನ್ನು ಧ್ವಂಸಗೊಳಿಸಿ, ಅಲ್ಲಿ ಶಿವನ ಮೂರ್ತಿ ಸ್ಥಾಪಿಸಿದ್ದಾರೆ’ ಎಂದಿದ್ದರು. ಆದರೆ ವಾಸ್ತವವಾಗಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂಬುದು ತಿಳಿದು ಬಂದಿದ್ದು ಸುಳ್ಳು ಹರಡುವಿಕೆ ಮತ್ತು ಜನರ ದಾರಿ ತಪ್ಪಿಸುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.

ಸೀಮೆ ಹಾರಿದ ಸೀಮಾ ಹೈದರ್ ಸಾಮಾನ್ಯಳಲ್ಲ; 4 ಫೋನ್, 5 ಪಾಸ್‌ಪೋರ್ಟ್, 2 ಕ್ಯಾಸೆಟ್ ವಶಕ್ಕೆ!

click me!