ಹಾವುಗಳು ಸಾಮಾನ್ಯವಾಗಿ ಕಪ್ಪು ಕಂದು ತಿಳಿ ಹಳದಿ ಬಣ್ಣಗಳಲ್ಲಿ ಕಾಣ ಸಿಗುತ್ತವೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಬಿಳಿ ಬಣ್ಣದ ಹಾವೊಂದು ಕಾಣಿಸಿಕೊಂಡಿದೆ.
ಪುಣೆ: ಹಾವುಗಳು ಸಾಮಾನ್ಯವಾಗಿ ಕಪ್ಪು ಕಂದು ತಿಳಿ ಹಳದಿ ಬಣ್ಣಗಳಲ್ಲಿ ಕಾಣ ಸಿಗುತ್ತವೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ಬಿಳಿ ಬಣ್ಣದ ಹಾವೊಂದು ಕಾಣಿಸಿಕೊಂಡಿದೆ. ಬಿಳಿ ಹಾಗೂ ಕೆಂಪು ಮಿಶ್ರಿತ ಬಣ್ಣ ಹೊಂದಿರುವ ಈ ಹಾವು ಇತರ ಹಾವುಗಳಿಗೆ ಹೋಲಿಸಿದರೆ ತುಂಬಾ ವಿಷಕಾರಿ ಎಂದು ಹೇಳಲಾಗುತ್ತಿದೆ. ಅಲ್ಬಿನೋ ತಳಿಯ ಈ ನಾಗರಹಾವನ್ನು ವಿಶ್ವದ ಅತ್ಯಂತ ಅಪರೂಪದ 10 ಪ್ರಾಣಿಗಳಲ್ಲಿ ಒಂದು ಎಂದು ಗುರುತಿಸಲಾಗಿದ್ದು, ಅಳಿವಿನಂಚಿನಲ್ಲಿದೆ.
ಈ ಹಾವುಗಳು ಅತ್ಯಂತ ವಿಷಕಾರಿಯಾಗಿದ್ದು, ಅಷ್ಟೇ ವೇಗವಾಗಿ ಓಡುತ್ತವೆ. ಮಹಾರಾಷ್ಟ್ರದ (Maharashtra) ಪುಣೆಯ (Pune) ಘೋರಪಾಲ್ಡ್ (Ghora ಗ್ರಾಮದ ರೈತ ಸಚಿನ್ ಸೋಂಡ್ಕರ್ ಅವರ ಮನೆಯಲ್ಲಿ ಈ ಹಾವು ಪತ್ತೆಯಾಗಿದ್ದು, ಇದರ ಉದ್ದ ನಾಲ್ಕೂವರೆ ಅಡಿಗೂ ಹೆಚ್ಚಿದೆ. ಈ ಹಾವಿನ ಬಣ್ಣ ನೋಡಿದ ರೈತ ಸಚಿನ್ ಹಾಗೂ ಮನೆಯವರು ಅಚ್ಚರಿಗೊಳಗಾಗಿದ್ದರು. ನಂತರ ಸಚಿನ್ ಅವರು ಉರಗಪ್ರೇಮಿ ಪಂಕಜ್ ಗಡೇಕರ್ ಅವರಿಗೆ ಕರೆ ಮಾಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಅವರು ಹಾವನ್ನು ರಕ್ಷಣೆ ಮಾಡಿ ಅದರ ಆವಾಸ ಸ್ಥಾನಕ್ಕೆ ಬಿಟ್ಟಿದ್ದಾರೆ.
ಅಯ್ಯೋ ಹಾವು ಹಾವು... ಸ್ಕೂಲ್ ಬಸ್ ಕೆಳಗಿತ್ತು ಭಯಾನಕ ದೈತ್ಯ ಹೆಬ್ಬಾವು
ಅನುವಂಶೀಯ (Hereditary) ಸಮಸ್ಯೆಯಿಂದಾಗಿ ಈ ಹಾವುಗಳ ಬಣ್ಣ ಬದಲಾಗಿದೆ ಎಂದು ಉರಗತಜ್ಞರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಹಾವನ್ನು ಅಲ್ಬಿನೋ ಕೋಬ್ರಾ ಎಂದು ಕರೆಯಲಾಗುತ್ತದೆ. ಇದುವರೆಗೆ ದೇಶದಲ್ಲಿ 8 ರಿಂದ 10 ರಷ್ಟು ಹಾವುಗಳು ಮಾತ್ರ ಬಿಳಿ ನಾಗರ ಹಾವುಗಳು ಕಾಣಿಸಿಕೊಂಡಿವೆ. ನಾಗರ ಹಾವುಗಳು ಸಾಮಾನ್ಯವಾಗಿ ಕಪ್ಪು ಹಾಗೂ ಕಂದು ಬಣ್ಣದಲ್ಲಿರುತ್ತದೆ. ಆದರೆ ಲ್ಯುಕಿಸಂನಿಂದ ಅವುಗಳ ದೇಹದ ಬಣ್ಣ ಸಂಪೂರ್ಣ ಬಿಳಿಯಾಗುತ್ತದೆ.
ನೀರು ಕುಡಿಯಲು ಬಂದ ಹಾವು ಮುಂಗುಸಿ ಮಧ್ಯೆ ಘನಘೋರ ಕಾಳಗ
ನಾಗರಹಾವುಗಳಲ್ಲಿ ಒಟ್ಟು ನಾಲ್ಕು ಜಾತಿಗಳಿವೆ. ಅವುಗಳಿಗೆ ನಿರ್ದಿಷ್ಠ ಹೆಸರಿಲ್ಲ. ಅವುಗಳು ವಾಸ ಮಾಡುವ ಪ್ರದೇಶವನ್ನು ಆಧರಿಸಿ ಈ ಹಾವುಗಳನ್ನು ವಿಂಗಡಿಸಲಾಗಿದೆ. ನೈಋತ್ಯ ಭಾರತದ ಪಶ್ಚಿಮ ಘಟ್ಟಗಳ ಹಾವುಗಳು, ಪಶ್ಚಿಮ ಚೀನಾ ಮತ್ತು ಇಂಡೋನೇಷ್ಯಾದ ಇಂಡೋ-ಚೀನೀ ವಂಶಾವಳಿ, ಭಾರತ (India) ಮತ್ತು ಮಲೇಷಿಯಾದ (Malesia) ಇಂಡೋ-ಮಲಯನ್ ವಂಶಾವಳಿ ಮತ್ತು ಫಿಲಿಪೈನ್ಸ್‌ನಲ್ಲಿ ಕಂಡುಬರುವ ಲುಜಾನ್ ದ್ವೀಪ ವಂಶಾವಳಿ ಎಂದು ಈ ಹಾವುಗಳನ್ನು ವಿಂಗಡಿಸಲಾಗಿದೆ. ಇನ್ನು ಸೆರೆ ಆಗಿರುವ ವಿಡಿಯೋದಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಹಾವನ್ನು ಬಾಲದಲ್ಲಿ ಹಿಡಿದು ಡಬ್ಬಿಯೊಂದಕ್ಕೆ ತುಂಬಿಸಲು ನೋಡುತ್ತಿದ್ದಾರೆ.
ಶಾಲಾ ಬಸ್ ಒಳಗೆ ಹೆಬ್ಬಾವು
ಉತ್ತರಪ್ರದೇಶದ ಲಕ್ನೋದಲ್ಲಿ ಶಾಲಾ ಬಸ್ ಒಳಗೆ ಭಾರಿ ಗಾತ್ರದ ಹೆಬ್ಬಾವೊಂದು ನಿನ್ನೆ ಕಾಣಿಸಿಕೊಂಡಿದೆ. ಈ ಹೆಬ್ಬಾವಿನ ಗಾತ್ರವೇ ಒಂದು ಕ್ಷಣ ಭಯ ಮೂಡಿಸುವಂತಿತ್ತು. ಬಸ್ ಒಳಗಿನಿಂದ ಹೆಬ್ಬಾವವನ್ನು ರಕ್ಷಿಸುತ್ತಿರುವ ಕಾರ್ಯಾಚರಣೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಪ್ರದೇಶದ (Uttar Pradesh) ರಾಯ್ ಬರೇಲಿಯಲ್ಲಿ ಭಾನುವಾರ ಸೆರೆಯಾದ ಈ ಭಾರಿ ಗಾತ್ರದ ಹೆಬ್ಬಾವು ನೋಡುಗರನ್ನು ಕ್ಷಣ ಕಾಲ ದಂಗುಬಡಿಸಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಈ ಭಾರಿ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.
ರಾಯ್‌ಬರೇಲಿಯ(Raebareli)ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ (Ryan International School) ಶಾಲಾ ಬಸ್ ಒಳಗೆ ಈ ಹಾವು ಸೇರಿಕೊಂಡಿತ್ತು ಎಂದು ನಗರದ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ (Pallavi Mishra) ಅವರು ಮಾಹಿತಿ ನೀಡಿದರು. ಶಾಲಾ ವಾಹನದೊಳಗೆ ಹಾವಿರುವ ವಿಚಾರ ತಿಳಿದು ಅರಣ್ಯ ಇಲಾಖೆಗೆ ಶಾಲಾ ಸಿಬ್ಬಂದಿ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ಭಾನುವಾರವಾದ್ದರಿಂದ ಶಾಲೆಗೆ ರಜೆ ಇದ್ದ ಕಾರಣ ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪಲ್ಲವಿ ಮಿಶ್ರಾ ಹೇಳಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಬಸ್ ಸೀಟಿನ ಕೆಳಗೆ ಸಿಲುಕಿಕೊಂಡಿದ್ದು ಅರಣ್ಯ ಸಿಬ್ಬಂದಿ ಕಬ್ಬಿಣದ ಕೊಂಡಿಯೊಂದರ ಮೂಲಕ ಅದನ್ನು ಎಳೆದು ರಕ್ಷಿಸುತ್ತಿರುವ ದೃಶ್ಯವಿದೆ.