ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಶಾಲಾ ಬಾಲಕಿಯೊಬ್ಬಳ ಬ್ಯಾಗ್ ಒಳಗೆ ಹಾವೊಂದು ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದ ಲಕ್ನೋದಲ್ಲಿ ಶಾಲಾ ಬಸ್ ಒಳಗೆ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ.
ಲಕ್ನೋ: ಕೆಲ ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಶಾಲಾ ಬಾಲಕಿಯೊಬ್ಬಳ ಬ್ಯಾಗ್ ಒಳಗೆ ಹಾವೊಂದು ಪತ್ತೆಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಉತ್ತರಪ್ರದೇಶದ ಲಕ್ನೋದಲ್ಲಿ ಶಾಲಾ ಬಸ್ ಒಳಗೆ ಭಾರಿ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ. ಈ ಹೆಬ್ಬಾವಿನ ಗಾತ್ರವೇ ಒಂದು ಕ್ಷಣ ಭಯ ಮೂಡಿಸುವಂತಿದೆ. ಬಸ್ ಒಳಗಿನಿಂದ ಹೆಬ್ಬಾವವನ್ನು ರಕ್ಷಿಸುತ್ತಿರುವ ಕಾರ್ಯಾಚರಣೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆ ಅಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರಪ್ರದೇಶದ (Uttar Pradesh) ರಾಯ್ ಬರೇಲಿಯಲ್ಲಿ ಭಾನುವಾರ ಸೆರೆಯಾದ ಈ ಭಾರಿ ಗಾತ್ರದ ಹೆಬ್ಬಾವು ನೋಡುಗರನ್ನು ಕ್ಷಣ ಕಾಲ ದಂಗುಬಡಿಸಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಈ ಭಾರಿ ಗಾತ್ರದ ಹೆಬ್ಬಾವನ್ನು ಸೆರೆ ಹಿಡಿಯಲಾಗಿದೆ.
ರಾಯ್‌ಬರೇಲಿಯ(Raebareli)ರಾಯನ್ ಇಂಟರ್‌ನ್ಯಾಷನಲ್ ಸ್ಕೂಲ್‌ನ (Ryan International School) ಶಾಲಾ ಬಸ್ ಒಳಗೆ ಈ ಹಾವು ಸೇರಿಕೊಂಡಿತ್ತು ಎಂದು ನಗರದ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ (Pallavi Mishra) ಅವರು ಮಾಹಿತಿ ನೀಡಿದರು. ಶಾಲಾ ವಾಹನದೊಳಗೆ ಹಾವಿರುವ ವಿಚಾರ ತಿಳಿದು ಅರಣ್ಯ ಇಲಾಖೆಗೆ ಶಾಲಾ ಸಿಬ್ಬಂದಿ ಮಾಹಿತಿ ನೀಡಿದ್ದು ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಾವನ್ನು ರಕ್ಷಣೆ ಮಾಡಿದ್ದಾರೆ. ಭಾನುವಾರವಾದ್ದರಿಂದ ಶಾಲೆಗೆ ರಜೆ ಇದ್ದ ಕಾರಣ ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಪಲ್ಲವಿ ಮಿಶ್ರಾ ಹೇಳಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವೊಂದು ಬಸ್ ಸೀಟಿನ ಕೆಳಗೆ ಸಿಲುಕಿಕೊಂಡಿದ್ದು ಅರಣ್ಯ ಸಿಬ್ಬಂದಿ ಕಬ್ಬಿಣದ ಕೊಂಡಿಯೊಂದರ ಮೂಲಕ ಅದನ್ನು ಎಳೆದು ರಕ್ಷಿಸುತ್ತಿರುವ ದೃಶ್ಯವಿದೆ.
उत्तर प्रदेश के में की एक बस के इंजन में फंसा था।
कड़ी मशक़्क़त के बाद विभाग की टीम ने निकाला बाहर। pic.twitter.com/nuKslyOXT4
ಶೂ ಒಳಗಿತ್ತು ಬುಸ್ ಬುಸ್
ಇನ್ನೇನು ಮಳೆಗಾಲ ಮುಗಿತಾ ಬಂತು ಆದರೂ ಹಾವುಗಳು ಮಾತ್ರ ಸಂಧಿಗೊಂದಿಗಳಲ್ಲಿ ಅಡಗಿ ಆಶ್ರಯ ಪಡೆಯುವುದನ್ನು ನಿಲ್ಲಿಸಿಲ್ಲ. ಶೂಗಳನ್ನೇ ಹಾವುಗಳು ಇತ್ತೀಚೆಗೆ ತಮ್ಮ ಪ್ರಮುಖ ಅಡಗುತಾಣ ಆಗಿಸಿಕೊಂಡಿದ್ದು, ಇದರಿಂದ ಶೂ ಹಾಕುವವರು ಭಯಗೊಳ್ಳುವಂತಾಗಿದೆ. ಮಳೆಗಾಲದಲ್ಲಿ ಜೋರಾಗಿ ಸುರಿಯುವ ಮಳೆಗೆ ಹಾವು ಚೇಳುಗಳು ಆಶ್ರಯ ಅರಸಿ ಮನೆಯ ಸಂಧಿಗೊಂದಿಗಳಿಗೆ ಬಂದು ಸೇರುತ್ತವೆ. ಹೀಗೆ ಮನೆ ಸೇರಿದ ಹಾವುಗಳು ಮನೆಯಲ್ಲಿರುವ ಸಂಕೀರ್ಣ ಕತ್ತಲೆಯಿಂದ ಕೂಡಿದ ಸ್ಥಳಗಳಲ್ಲಿ ಮನೆಯ ಕಪಾಟುಗಳಲ್ಲಿ ಶೂಗಳಲ್ಲಿ ಹೀಗೆ ಕತ್ತಲಿರುವ ಜಾಗದಲ್ಲಿ ಆಶ್ರಯ ಪಡೆಯಲು ನೋಡುತ್ತವೆ. ಅದೇ ರೀತಿ ಇಲ್ಲೊಂದು ಕಡೆ ಹಾವೊಂದು ಕಾಲಿಗೆ ಧರಿಸುವ ಶೂ ಒಳಗೆ ಸೇರಿದ್ದು ಶೂವನ್ನು ಸರಿಸುತ್ತಿದ್ದಂತೆ ಒಮ್ಮೆಲೆ ಹೆಡೆ ಎತ್ತಿ ನಿಂತಿದೆ. ಹಾವು ಶೂ ಒಳಗಿನಿಂದಲೇ ಹೆಡೆ ಎತ್ತಿ ನಿಂತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕಿಯ ಸ್ಕೂಲ್ ಬ್ಯಾಗ್‌ನಲ್ಲಿತ್ತು ಬುಸ್ ಬುಸ್ : ಬ್ಯಾಗ್‌ನಿಂದ ಹಾವು ಹೊರ ಹಾಕಿದ ಶಿಕ್ಷಕ
ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಭಾರತಿ ರಾಜನ್ (BharatiRajan) ಎಂಬುವವರು ಪೋಸ್ಟ್ ಮಾಡಿದ್ದು, ನಮ್ಮ ಮೈಸೂರಿನಲ್ಲಿ(Mysore) ಸೆರೆ ಹಿಡಿಯಲಾದ ದೃಶ್ಯ ಎಂದು ಉಲ್ಲೇಖಿಸಲಾಗಿದೆ. ವ್ಯಕ್ತಿಯೊಬ್ಬರು ಮನೆಯಲ್ಲಿ ಇರಿಸಿದ್ದ ಶೂವೊಂದನ್ನು(Shoe) ಕಾಲಿಗೆ ಧರಿಸಲು ಹೊರಗೆ ತೆಗೆದಿದ್ದು, ಈ ವೇಳೆ ಶೂ ಎಂದಿಗಿಂತ ತುಸು ಹೆಚ್ಚೆ ಭಾರ ಎನಿಸಿದೆ. ಜೊತೆಗೆ ಏನು ಮಿಸುಕಾಡಿದ ಅನುಭವವಾಗಿದೆ. ಹೀಗಾಗಿ ಕೂಡಲೇ ಶೂವನ್ನು ಅವರು ಕೆಳಗೆ ಬಿಟ್ಟಿದ್ದಾರೆ. ಅಷ್ಟರಲ್ಲಾಗಲೇ ಶೂ ಒಳಗೆ ಬೆಚ್ಚಗೆ ಮುದುಡಿ ಮಲಗಿದ್ದ ಹಾವು ಹೆದರಿ ಹೆಡೆಯೇರಿಸಿ ನಿಂತಿದ್ದು, ಶೂ ಮಾಲೀಕರು ಈ ದೃಶ್ಯ ನೋಡಿ ದಂಗಾಗಿದ್ದಾರೆ. ಒಂದು ವೇಳೆ ಸ್ವಲ್ಪವೂ ಗಮನಿಸದೇ ಶೂ ಧರಿಸಿದ್ದರೆ ಪರಲೋಕ ಸೇರುವ ಪರಿಸ್ಥಿತಿ ಬರ್ತಿದ್ದಿದ್ದಂತು ಸತ್ಯ.
ಮಿಚೆಲ್ ಜಾನ್ಸನ್ ಕೋಣೆಯಲ್ಲಿ ಹಾವು ಪತ್ತೆ..! ನಿಮಗೆ ಈ ಹಾವು ಗೊತ್ತೇ ಎಂದು ಪ್ರಶ್ನಿಸಿದ ಆಸೀಸ್ ಕ್ರಿಕೆಟಿಗ