ವಂದೇ ಭಾರತ್ ರೈಲಿನ ಕಂಟಕ ನಿವಾರಿಸಲು 264 ಕೋಟಿ ರೂಪಾಯಿ ಖರ್ಚು!

By Suvarna NewsFirst Published Dec 3, 2022, 5:29 PM IST
Highlights

ಭಾರತದಲ್ಲೇ ಸಂಪೂರ್ಣವಾಗಿ ತಯಾರಾದ ಅತೀ ವೇಗದ ರೈಲು ವಂದೇ ಭಾರತ್ ಈಗಾಗಲೇ ಸಂಚಾರ ಆರಂಭಿಸಿ ಹಲವು ಕಾರಣಗಳಿಗೆ ಸುದ್ದಿಯಾಗಿದೆ. ಜಾನುವಾರು ಡಿಕ್ಕಿ, ವ್ಹೀಲ್ ಜ್ಯಾಮ್ ಸೇರಿದಂತೆ ಕಲ ಕಹಿ ಘಟನೆಗಳು ವರದಿಯಾಗಿದೆ. ಒಂದಲ್ಲ ಒಂದು ಹಿನ್ನಡೆಯಾಗುತ್ತಲೇ ಇದೆ. ಇದೀಗ ಸಮಸ್ಯೆ ನಿವಾರಿಸಲು ಬರೋಬ್ಬರಿ 264 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ.
 

ಮುಂಬೈ(ಡಿ.03):  ವಂದೇ ಭಾರತ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ ಬಳಿಕ ವಿಶ್ವವೇ ಭಾರತವನ್ನು ತಿರುಗಿ ನೋಡಿತ್ತು. ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣವಾದ ಈ ರೈಲು ಅತೀ ವೇಗ ರೈಲು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇಷ್ಟೇ ಅಲ್ಲ ಅತ್ಯಾಧುನಿಕ ತಂತ್ರಜ್ಞಾನ, ವಿಮಾನದ ರೀತಿಯ ಸೌಲಭ್ಯಗಳು ಈ ರೈಲಿನಲ್ಲಿದೆ. ಆದರೆ ರೈಲು ಸಂಚಾರ ಆರಂಭಗೊಂಡ ಬೆನ್ನಲ್ಲೇ ಹಸುವಿಗೆ ಡಿಕ್ಕಿ ವರದಿಗಳು ಹೆಚ್ಚಾಯಿತು. ಒಂದೊಂದು ವಿಘ್ನಗಳು ವಂದೇ ಭಾರತ್ ಸಂಚಾರಕ್ಕೆ ತೀವ್ರ ಹಿನ್ನಡೆ ತಂದಿತ್ತು. ಇದರ ಜೊತೆಗೆ ಹೆಚ್ಚುವರಿ ಖರ್ಚು ಕೂಡ ತಲೆನೋವು ತಂದಿತ್ತು. ಇದೀಗ ಈ ವಿಘ್ನಗಳ ನಿವಾರಿಸಲು ಪಶ್ಚಿಮ ರೈಲ್ವೇ ಬರೋಬ್ಬರಿ 264 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ. ಹಸು ಸೇರಿದಂತೆ ಯಾವುದೇ ಪ್ರಾಣಿಗಳು ಡಿಕ್ಕಿಯಾಗದಂತೆ ಪಶ್ಚಿಮ ರೈಲ್ವೇ ಹಳಿಗಳ ಎರಡು ಬದಿಗಳಲ್ಲಿ ತಂತಿ ಬೇಲಿ ಹಾಕಲು ಮುಂದಾಗಿದೆ.

ಮುಂಬೈ ಹೈದರಾಬಾದ್ ವಂದೇ ಭಾರತ್ ರೈಲಿಗೆ ಈಗಾಗಲೇ ಹಸು ಡಿಕ್ಕಿಯಾಗಿ ಭಾರಿ ನಷ್ಟ ಅನುಭವಿಸಿದ ಘಟನೆ ನಡೆದಿದೆ. ಸೆಪ್ಟೆಂಬರ್ 30ಕ್ಕೆ ಮುಂಬೈ ಅಹಮ್ಮದಾಬಾದ್ ವಂದೇ ಭಾರತ್ ರೈಲಿಗೆ ಚಾಲನೆ ನೀಡಲಾಗಿದೆ. ಬಳಿಕ ನಾಲ್ಕು ಬಾರಿ ರೈಲಿಗೆ ಹಸು ಡಿಕ್ಕಿಯಾಗಿದೆ. ನಾಲ್ಕು ಬಾರಿ ರೈಲನ್ನು ರಿಪೇರಿ ಮಾಡಲಾಗಿದೆ. ಹೀಗಾಗಿ ವಂದೇ ಭಾರತ್ ರೈಲು ಸಂಚರಿಸುವ ಮುಂಬೈ ಅಹಮ್ಮದಾಬಾದ್ ಹಳಿಗಳ ಎರಡೂ ಬದಿಗಳಲ್ಲಿ ತಂತಿ ನೆಟ್ ಅಳವಡಿಸಲಾಗತ್ತದೆ. 

 

Vande Bharat Express: ಮೈಸೂರು-ಚೆನ್ನೈ ರೈಲಿಗೆ ಹಸು ಡಿಕ್ಕಿ, ಮುಂಭಾಗಕ್ಕೆ ಹಾನಿ!

ಇದಕ್ಕಾಗಿ 264 ಕೋಟಿ ರೂಪಾಯಿ ವೆಚ್ಚದಲ್ಲಿ ತಂತಿ ಬೇಲಿಯನ್ನ ಹಾಕಲಾಗುತ್ತದೆ. 2023ರಲ್ಲಿ ಈ ಕಾರ್ಯ ಸಂಪೂರ್ಣವಾಗಲಿದೆ. ಈಗಾಗಲೇ ವೆಂಡರ್ ಕರೆಯಲಾಗಿದೆ. 620 ಕಿಲೋಮೀಟರ್ ಉದ್ದದ ಹಳಿಗಳ ಎರಡು ಬದಿಗೆ ಫೆನ್ಸಿಂಗ್ ಅಳವಡಿಸಲು 264 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಪಶ್ಚಿಮ ರೈಲ್ವೇಯ ಜನರಲ್ ಮ್ಯಾನೇಜರ್ ಅಶೋಕ್ ಕುಮಾರ್ ಮಿಶ್ರಾ ಹೇಳಿದ್ದಾರೆ.

ಎಮ್ಮೆ ಹಿಂಡಿಗೆ ಡಿಕ್ಕಿ ಹೊಡೆದ ವಂದೇ ಭಾರತ್‌ ರೈಲು ಜಖಂ
ಇತ್ತೀಚೆಗಷ್ಟೇ ಚಾಲನೆ ಪಡೆದ ಮುಂಬೈ ಮತ್ತು ಅಹಮದಾಬಾದ್‌ ನಡುವಿನ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಗುರುವಾರ ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರೈಲಿನ ಎಂಜಿನ್‌ ಭಾಗದಲ್ಲಿ ಹಾನಿಯಾಗಿದೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಹಾನಿ ಸಂಭವಿಸಿಲ್ಲ ಆದರೆ 3 ಎಮ್ಮೆಗಳು ಸಾವಿಗೀಡಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ವಂದೇ ಮಾತರಂ ಹಾಡಿದ ಬೆಂಗಳೂರು ವಿದ್ಯಾರ್ಥಿಗಳು!

ಅಹಮದಾಬಾದ್‌ನ ಬಳಿ ರೈಲು ಸಂಚರಿಸುವ ವೇಳೆ ಏಕಾಏಕಿ ಎಮ್ಮೆ ಹಿಂದು ಹಳಿಯ ಮೇಲೆ ಬಂದು ಘಟನೆ ಸಂಭವಿಸಿದೆ. ಪರಿಣಾಮ ಎಫ್‌ಆರ್‌ಪಿ (ಫೈಬರ್‌ ರೀಇನ್‌ಫೋ​ರ್‍ಸ್ಡ್‌ ಪ್ಲಾಸ್ಟಿಕ್‌)ಯಿಂದ ತಯಾರಿಸಲಾಗಿರುವ ರೈಲಿನ ಮುಂಭಾಗ ಹಾನಿಗೊಳಗಾಗಿದೆ. ನಂತರ ಅದನ್ನು ಸರಿಪಡಿಸಿ ರೈಲನ್ನು ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಂದೇ ಭಾರತ್‌ ರೈಲು ದೇಶದ ಅತಿ ವೇಗದ ರೈಲಾಗಿದ್ದು, ಇದರ ವೇಗವನ್ನು ಮತ್ತಷ್ಟುಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ರೈಲು ಹಳಿಗಳ ಬಳಿ ಬೇಲಿ ಹಾಕುವ ಯೋಜನೆ ರೂಪಿಸಲಾಗಿದ್ದು, ಇದು 2024ರ ವೇಳೆಗೆ ಪೂರ್ಣಗೊಳ್ಳಬಹುದು ಎಂದು ಹೇಳಲಾಗಿದೆ.

click me!