Viral Video: ಪೊಲೀಸರು ಎಸೆದ ತರಕಾರಿ ಎತ್ತಿಕೊಳ್ಳಲು ಹೋಗಿ ರೈಲು ಅಪಘಾತದಲ್ಲಿ 2 ಕಾಲು ಕಳೆದುಕೊಂಡ ವ್ಯಾಪಾರಿ..!

By BK Ashwin  |  First Published Dec 3, 2022, 2:54 PM IST

ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು ಆ ವ್ಯಾಪಾರಿಯ ತರಕಾರಿ, ವಸ್ತುಗಳನ್ನು ಟ್ರ್ಯಾಕ್‌ನಲ್ಲಿ ಎಸೆದರು ಎಂದು ಆರೋಪಿಸಲಾಗಿದೆ.


ರೈಲಿಗೆ (Train) ಸಿಲುಕಿ ಬೀದಿ ತರಕಾರಿ ವ್ಯಾಪಾರಿಯೊಬ್ಬರು (Vegetable Vendor) ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿರುವ (Lost Both Legs) ಭೀಕರ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ. ಶುಕ್ರವಾರ ಸಂಜೆ ಕಾನ್ಪುರದ ಕಲ್ಯಾಣಪುರ (Kalyanpur) ಪ್ರದೇಶದಲ್ಲಿ ರೈಲ್ವೆ ಹಳಿಯಿಂದ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯ ಸಮಯದಲ್ಲಿ ಪೊಲೀಸರು (Police) ಆ ವ್ಯಾಪಾರಿಯ ತರಕಾರಿ, ವಸ್ತುಗಳನ್ನು ಟ್ರ್ಯಾಕ್‌ನಲ್ಲಿ ಎಸೆದರು ಎಂದು ಆರೋಪಿಸಲಾಗಿದೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ (Social Media)  ವೈರಲ್ (Viral) ಆಗಿದ್ದು, ಮಾರಾಟಗಾರ ರೈಲ್ವೇ ಹಳಿಗಳ ಮೇಲೆ ನೋವಿನಿಂದ ನರಳುತ್ತಿರುವುದನ್ನು ಈ ವಿಡಿಯೋದಲ್ಲಿ ತೋರಿಸುತ್ತದೆ. ಅಲ್ಲದೆ, ಆ ವ್ಯಾಪಾರಿಯ ಸುತ್ತ ಜನರು ಸುಮ್ಮನೆ ಆತನನ್ನು ನೋಡಲು  ಮುಂದುವರಿಸಿದ್ದು, ಈ ವೇಳೆ ಒಬ್ಬರು ವ್ಯಕ್ತಿ ಮತ್ತು ಪೊಲೀಸ್ ಅಧಿಕಾರಿ ಕಾನ್ಪುರದ ವ್ಯಾಪಾರಿಗೆ ಸಹಾಯ ಮಾಡಲು ಬರುವುದನ್ನು ಸಹ ಇದನ್ನು ತೋರಿಸುತ್ತದೆ

ಜಿ.ಟಿ. ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಇಂದಿರಾ ನಗರ ಪೊಲೀಸ್ ಠಾಣೆ ಪ್ರಭಾರಿ ಶಾದಾಬ್ ಖಾನ್ ಮತ್ತು ಹೆಡ್ ಕಾನ್‌ಸ್ಟೆಬಲ್ ಬೆನ್ನಟ್ಟಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಆ ವ್ಯಾಪಾರಿಯ ಸ್ಕೇಲ್, ತೂಕದ ಕಲ್ಲು ಮತ್ತು ತರಕಾರಿಗಳನ್ನು ರೈಲ್ವೆ ಹಳಿಗಳ ಕಡೆಗೆ ಎಸೆದರು. ಈ ಹಿನ್ನೆಲೆ ವ್ಯಾಪಾರಿಯು ಅದನ್ನು ಎತ್ತಿಕೊಳ್ಳಲು ಹೋಗುತ್ತಿದ್ದಾಗ ರೈಲು ಅಪಘಾತಕ್ಕೀಡಾದರು (Train Accident) ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಹಾಗೆ, ತರಕಾರಿ ಮುಂತಾದ ವಸ್ತುಗಳನ್ನು ಎಸೆದ ಪೊಲೀಸರು ಆ ವ್ಯಾಪಾರಿ ಗಾಯಗೊಂಡಿರುವುದನ್ನು ನೋಡಿದರೂ ಆತನ ಕಡೆಗೆ ನೋಡದೆ ತಕ್ಷಣ ಸ್ಥಳದಿಂದ ತೆರಳಿದರು. ಬಳಿಕ, ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ ನಂತರ ಇತರೆ ಪೊಲೀಸರು ಸ್ಥಳಕ್ಕೆ ಬಂದರು ಎಂದೂ ಪ್ರತ್ಯಕ್ಷದರ್ಶಿ ಹೇಳಿದರು.

Tap to resize

Latest Videos

ಇದನ್ನು ಓದಿ: ದೆಹಲಿಯ ತಿಹಾರ್ ಜೈಲಿನಲ್ಲಿ ಆಪ್‌ ಸಚಿವ ಸತ್ಯೇಂದ್ರ ಜೈನ್‌ಗೆ ಮಸಾಜ್: ವಿಡಿಯೋ ವೈರಲ್..!

ಈ ಮಧ್ಯೆ, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಪಶ್ಚಿಮ ಹೆಚ್ಚುವರಿ ಡಿಸಿಪಿ ಲಖನ್ ಯಾದವ್, ಇರ್ಫಾನ್ ಅಲಿಯಾಸ್ ಲಡ್ಡೂ ರೈಲ್ವೆ ಹಳಿಯ ಹತ್ತಿರ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದರು. ಆ ವೇಳೆ, ಪೊಲೀಸರು ಬಂದು ಆತನಿಗೆ ಸ್ಥಳ ಖಾಲಿ ಮಾಡುವಂತೆ ಒತ್ತಾಯಿಸುತ್ತಿದ್ದಾಗ ಆ ವ್ಯಾಪಾರಿಯ ಸ್ಕೇಲ್‌ ರೈಲ್ವೆ ಹಳಿಗಳ ಮೇಲೆ ಬಿದ್ದಿದೆ. ನಂತರ, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 

ಇರ್ಫಾನ್ ಅವರನ್ನು ಎಲ್ಎಲ್ಆರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ. ಅಲ್ಲದೆ, ತನ್ನ ಮಗನ ಎರಡೂ ಕಾಲುಗಳು ಸ್ಥಳದಲ್ಲೇ ತುಂಡಾಗಿದೆ ಎಂದು ವ್ಯಾಪಾರಿಯ ತಂದೆ ಸಲೀಂ ಅಹ್ಮದ್‌ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೂ, ಅನಾಗರಿಕ ರೀತಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದೂ ಅವರು ವಿಷಾದಿಸಿದ್ದಾರೆ ಎಂದು ವರದಿಯಾಗಿದೆ. 
ಇನ್ನು, ಪೊಲೀಸರು ಪ್ರತಿ ಮಾರಾಟಗಾರರಿಂದ ದಿನಕ್ಕೆ 50 ರೂಪಾಯಿ ಪಡೆಯುತ್ತಾರೆ, ಆದರೂ ಅವರನ್ನು ಓಡಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ, ಸ್ಥಳೀಯರ ಈ ಹೇಳಿಕೆಯನ್ನು ಡಿಸಿಪಿ ಯಾದವ್‌ ತಳ್ಳಿಹಾಕಿದ್ದು, ಪ್ರದೇಶದಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವುದು ನಿತ್ಯ ನಡೆಯುತ್ತದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಗರ್ಲ್‌ ಫ್ರೆಂಡ್‌ ಮೋಸ ಮಾಡಿದ್ಳೆಂದು ಗಂಟಲು ಸೀಳಿ, ಮೃತದೇಹದೊಂದಿಗೆ ವಿಡಿಯೋ ಪೋಸ್ಟ್‌ ಮಾಡಿದ..!

click me!