ದೇವಸ್ಥಾನದಲ್ಲಿ ಮೊಬೈಲ್ ಫೋನ್, ಕ್ಯಾಮರಾ ಬಳಕೆ ನಿಷೇಧಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ!

By Suvarna NewsFirst Published Dec 3, 2022, 3:58 PM IST
Highlights

ಇತ್ತೀಚೆಗೆ ದೇವಸ್ಥಾನದ ಒಳಗಡೆ ಮೊಬೈಲ್ ಫೋನ್ ಬಳಕೆ, ಸೆಲ್ಫಿ, ವಿಡಿಯೋ ರೆಕಾರ್ಡಿಂಗ್ ಸಾಮಾನ್ಯವಾಗಿದೆ. ಜೊತೆಗೆ ಕ್ಯಾಮೆರ ಬಳಕೆಯೂ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಹೈಕೋರ್ಟ್ ಸರ್ಕಾರಕ್ಕೆ ಮಹತ್ವದ ನಿರ್ದೇಶ ನೀಡಿದೆ.
 

ಚೆನ್ನೈ(ಡಿ.03): ಮೊಬೈಲ್ ಫೋನ್ ಇಲ್ಲದೆ ಜೀವನವೇ ಇಲ್ಲ ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ. ನಿಜ, ಮೊಬೈಲ್ ಇದೀಗ ಅನಿವಾರ್ಯವಾಗಿದೆ. ಆದರೆ ಅದರ ಬಳಕೆ ಹಿತಮಿತವಾಗಿದ್ದರೆ ಒಳಿತು. ಇತ್ತೀಚೆಗೆ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ ಹೆಚ್ಚಾಗುತ್ತಿದೆ. ದೇವಸ್ಥಾನದ ಒಳಗೆ ಕ್ಯಾಮೆರಾ ಬಳಕೆ ಗೀಳು ಹೆಚ್ಚಾಗುತ್ತಿದೆ. ಇದರಿಂದ ದೇವಸ್ಥಾನದ ಪಾವಿತ್ರ್ಯ ಹಾಗೂ ಭಕ್ತರ ಶ್ರದ್ಧೆಗೆ ಧಕ್ಕೆಯಾಗುತ್ತಿದೆ ಅನ್ನೋ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆ. ಈ ಕುರಿತು ದೂರುಗಳು ದಾಖಲಾಗಿತ್ತು. ಈ ಕುರಿತು ಮದ್ರಾಸ್ ಹೈಕೋರ್ಟ್ ದ್ವಿಸದಸ್ಯ ಪೀಠ ಮಹತ್ವದ ಆದೇಶ ನೀಡಿದೆ. ದೇವಸ್ಥಾನದ ಪಾವಿತ್ರ್ಯತಗೆ ಧಕ್ಕೆ ಬರುತ್ತಿರುವ ಕಾರಣ ಸರ್ಕಾರ ತಕ್ಷಣವೇ ದೇವಸ್ಧಾನದಲ್ಲಿ ಮೊಬೈಲ್ ಫೋನ್ ಬಳಕೆ, ಕ್ಯಾಮೆರ ಬಳಕೆ ನಿಷೇಧ ಹಾಗೂ ವಸ್ತ್ರಸಂಹಿತೆ ಜಾರಿಗೊಳಿಸಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.

ಜಸ್ಚೀಸ್ ಆರ್ ಮಹದೇವನ್ ಹಾಗೂ ಜೆ ಸತ್ಯ ನಾರಾಯಣ ಅವರನ್ನೊಳಗೊಂಡ ಮಧುರೈ ಬೆಂಚ್ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆ ನೀಡಿದೆ. ಮೊಬೈಲ್ ಫೋನ್ ಬಳಕೆ, ಕ್ಯಾಮೆರಾ ಬಳಕೆಯಿಂದ ಇತರ ಭಕ್ತಾದಿಗಳಿಗೆ ಸಮಸ್ಯೆಯಾಗುತ್ತಿದೆ. ಇದರಿಂದ ದೇವಸ್ಥಾನದ ಪಾವಿತ್ರ್ಯತೆಗೂ ಧಕ್ಕೆಯಾಗುತ್ತಿದೆ. ದೇವಸ್ಥಾನದ  ಮೇಲೆ ಭಕ್ತರಿಗೆ ಇರುವ ನಂಬಿಕೆ ಹಾಗೂ ಶ್ರದ್ಧೆಯನ್ನು ಉಳಿಸಿಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ದ್ವಿಸದಸ್ಯ ಪೀಠ ಹೇಳಿದೆ.

ಕೊಡಗು ಪೊನ್ನಂಪೇಟೆ ದೇವಾಲಯದಲ್ಲಿ ಹಿಂದೂ ಸೋಗಿನಲ್ಲಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್

ಆರ್ಟಿಕಲ್ 25ರ ಅಡಿಯಲ್ಲಿ ಎಲ್ಲರಿಗೂ ತಮ್ಮ ತಮ್ಮ ಧರ್ಮ ಅನುಸರಿಸಲು, ಧರ್ಮದ ಆಚರಣೆಗಳು ಮಾಡಲು ಮುಕ್ತರಾಗಿರುತ್ತಾರೆ. ಆದರೆ ಧರ್ಮದಲ್ಲಿನ ಪೂಜೆ ಆಚರಣೆಗಳು ನಿಗಿಧಿತ ಸ್ಥಳಗಳಲ್ಲಿ ಮಾಡುವಾಗ ಅದರದ್ದೇ ಆದ ಸಂಪ್ರದಾಯ ಹಾಗೂ ರೀತಿ ನೀತಿಗಳಿರುತ್ತದೆ. ಅದನ್ನು ಆಯಾ ಸ್ಥಳಗಳಲ್ಲಿ ಪಾಲಿಸಬೇಕು. ಇದನ್ನು ದೇವಸ್ಥಾನದ ಆಡಳಿತ ಮಂಡಳಿ ಆಯಾ ದೇವಸ್ಥಾನದಲ್ಲಿನ ಸಂಪ್ರದಾಯ, ಪೂಜಿಸುವ ವಿಧಾನಗಳನ್ನು ಪಾಲಿಸುಕೊಂಡು ಬರುವ ಜವಾಬ್ದಾರಿಯನ್ನು ಹೊತ್ತಿದೆ. ಇದರ ಜೊತೆಗೆ ಭಕ್ತರ ಪೂಜೆಗೆ, ನಂಬಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ. ಹೀಗಾಗಿ ಸರ್ಕಾರ ದೇವಸ್ಥಾನ ಒಳಗಡೆ ಪಾವಿತ್ರ್ಯ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಮೊಬೈಲ್ ಫೋನ್ ಬಳಕೆ, ಕ್ಯಾಮೆರಾ ಬಳಕೆ ನಿಷೇಧ ಹಾಗೂ ವಸ್ತ್ರ ಸಂಹಿತಿ ಪಾಲಿಸುವಂತೆ ಸರ್ಕಾರ ನಿಯಮ ರೂಪಿಸಬೇಕು ಎಂದು ಸ್ಪಷ್ಟಸೂಚನೆ ನೀಡಿದೆ.

ಈ ಕುರಿತು ಅಲುರ್‌ಮಿಗು ಸುಬ್ರಮಣಿಯ ಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಮದ್ರಾಸ್ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯಲ್ಲಿ  ತಮಿಳುನಾಡಿನ ಮೀನಾಕ್ಷಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳನ್ನು ಉಲ್ಲೇಖಿಸಿದ್ದರು. ಈ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್ ಬಳಕೆ, ಕ್ಯಾಮರ ಬಳಕೆ ನಿಷೇಧಿಸಲಾಗಿದೆ. ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಇದರ ಅಗತ್ಯತೆ ಇತರ ದೇವಸ್ಥಾನಕ್ಕೂ ಬೇಕಿದೆ ಎಂದಿದ್ದರು. ಈ ಕುರಿತು ಸ್ಪಷ್ಟ ನಿರ್ದೇಶವನ್ನು ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದ್ದರು. 

ಭಯೋತ್ಪಾದನೆಯಲ್ಲಿ ಭಾಗಿಯಾಗದಂತೆ ಮೌಲ್ವಿಗಳು ಬುದ್ಧಿ ಹೇಳಬೇಕು: ಕಾಣಿಯೂರುಶ್ರೀ

ಈ ಕುರಿತು ಮಹತ್ವದ ವಿಚಾರಣೆ ನಡೆಸಿದ ಕೋರ್ಟ್, ಎಲ್ಲಾ ಆಯಾಗಳಲ್ಲಿ ಚರ್ಚಿಸಿ ಆದೇಶ ನೀಡಿದೆ. ಇದೀಗ ತಮಿಳುನಾಡು ಸರ್ಕಾರ ಶೀಘ್ರದಲ್ಲೇ ಸುತ್ತೊಲೆ ಹೊರಡಿಸಲಿದೆ. ತಮಿಳುನಾಡಿನ ಎಲ್ಲಾ ದೇವಸ್ಥಾನಗಳಲ್ಲಿ ಮೊಬೈಲ್ ಫೋನ್, ಕ್ಯಾಮೆರಾ ಬಳಕೆ ನಿಷೇಧ ಹಾಗೂ ವಸ್ತ್ರ ಸಂಹಿತೆ ಜಾರಿಯಾಗಲಿದೆ.

click me!