ಪಶ್ಚಿಮ ಬಂಗಾಳ ರಾಜ್ಯಾಪಾಲ ಜಗದೀಪ್ ಧನ್ಕರ್‌ಗೆ ಮಲೇರಿಯಾ, ದೆಹಲಿ ಏಮ್ಸ್ ಆಸ್ಪತ್ರೆ ದಾಖಲು!

By Suvarna News  |  First Published Oct 25, 2021, 7:12 PM IST
  • ಪಶ್ಚಿಮ ಬಂಗಾಳ ರಾಜ್ಯಪಾಲ ಧನ್ಕರ್‌ಗೆ ಮಲೇರಿಯಾ
  • ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾದ ಜಗದೀಪ್ ಧನ್ಕರ್
  • ಡಾ. ನೀರಜ್ ನಿಶ್ಚಲ್ ನೇತೃತ್ವದಲ್ಲಿ ಚಿಕಿತ್ಸೆ

ನವದೆಹಲಿ(ಅ.25): ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್‌ಗೆ ಮಲೇರಿಯಾ ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ಧನ್ಕರ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಾನುವಾರ ರಕ್ಷ ಪರೀಕ್ಷೆ ವರದಿ ಬಂದ ಬಳಿಕ ಮಲೇರಿಯಾ ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಇಂದು(ಅ.25) ಸಂಜೆ ಧನ್ಕರ್ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಾಕ್ಟರ್ ನೀರಜ್ ನಿಶ್ಚಲ್ ನೇತೃತ್ವದಲ್ಲಿ ರಾಜ್ಯಪಾಲ ಧನ್ಕರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ. 

ಪಶ್ಚಿಮ ಬಂಗಾಳದಲ್ಲಿ ಕ್ಷಿಪ್ರ ಬೆಳವಣಿಗೆ; ರಾಜ್ಯಪಾಲರ ಭೇಟಿ ಮಾಡಿದ ಸೌರವ್ ಗಂಗೂಲಿ!

Tap to resize

Latest Videos

ಆರೋಗ್ಯ ಕ್ಷೀಣಿಸಿದ ಕಾರಣ ಜಗದೀಪ್ ಧನ್ಕರ್ ಶುಕ್ರವಾರ ದೆಹಲಿಗೆ ಆಗಮಿಸಿದ್ದರು. ಶನಿವಾರ ಏಮ್ಸ್ ಆಸ್ಪತ್ರೆಗೆ ತೆರಳಿ ರಕ್ತ ಪರೀಕ್ಷೆ ಮಾಡಿಸಲಾಗಿತ್ತು. ಭಾನುವಾರ ವರದಿ ಬಂದಿದ್ದು, ಮಲೇರಿಯಾ ಇರುವುದು ದೃಢಪಟ್ಟಿದೆ. ಶುಕ್ರವಾರದಿಂದ ದೆಹಲಿಯ ಬಾಂಗಾ ಭವನದಲ್ಲಿ ತಂಗಿದ್ದ ಧನ್ಕರ್ ಇದೀಗ ವೈದ್ಯರ ಸಲಹೆಯಂತೆ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

 

West Bengal Governor Jagdeep Dhankhar admitted in All India Institute of Medical Science, Delhi after testing positive for malaria.

(File photo) pic.twitter.com/3ILqDSnUYC

— ANI (@ANI)

ಬಂಗಾಳ ರಾಜ್ಯಪಾಲರ ಬದಲಾಯಿಸಿ; ಪ್ರಧಾನಿ ಮೋದಿ, ರಾಷ್ಟ್ರಪತಿಗೆ ಮಮತಾ ಪತ್ರ!

ಅಕ್ಟೋಬರ್ 12 ರಂದು ಜಗದೀಪ್ ಧನ್ಕರ್ ಡಾರ್ಜಲಿಂಗ್‌‍ಗೆ ಭೇಟಿ ನೀಡಿದ್ದರು. ಬಳಿಕ ಉತ್ತರ ಬಂಗಾಳಕ್ಕೆ ಭೇಟಿ ನೀಡಿದ್ದರು. ಕಳೆದೆರಡು ವಾರದಿಂದ ಸತತ ಪ್ರವಾಸದಲ್ಲಿದ್ದ ಧನ್ಕರ್‌ಗೆ ಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ ಧನ್ಕರ್ ನೇರವಾಗಿ ದೆಹಲಿಗೆ ಆಗಮಿಸಿ ಚಿಕಿತ್ಸೆಗೆ ಒಳಗಾಗಿದ್ದಾರೆ.

ಬಿಜೆಪಿ ಸಂಸದನ ಮನೆ ಮೇಲೆ 3 ಬಾಂಬ್ ಎಸೆದ ದುಷ್ಕರ್ಮಿಗಳು , ಟಿಎಂಸಿ ಕೈವಾಡ ಎಂದ ಕೇಸರಿ ಪಡೆ!

ಭಾರತದ ರಾಜ್ಯಪಾಲರ ಬೈಕಿ ಭಾರಿ ಸದ್ದು ಮಾಡುತ್ತಿರುವ ರಾಜ್ಯಪಾಲ ಅನ್ನೋ ಹೆಗ್ಗಳಿಕೆ ರಾಜದೀಪ್ ಧನ್ಕರ್‌ಗಿದೆ. ಪಶ್ಚಿಮ ಬಂಗಳಾದ ಮಮತಾ ಬ್ಯಾನರ್ಜಿ ಸರ್ಕಾರ ವಿರುದ್ಧ, ಹಿಂಸಾಚಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಧನ್ಕರ್, ಮಮತಾ ವಿರುದ್ಧ  ಹೇಳಿಕೆ ನೀಡಿದ್ದರು. ಪ್ರತಿ ಭಾರಿ ಮಮತಾ ಬ್ಯಾನರ್ಜಿ ಸರ್ಕಾರದ ಒಲೈಕೆ ರಾಜಕಾರಣವನ್ನು ವಿರೋಧಿಸಿದ ಧನ್ಕರ್, ಸರ್ಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿದ್ದರು.

ಅರ್ಜುನನ ಬಾಣದಲ್ಲಿ ನ್ಯೂಕ್ಲಿಯರ್ ಪವರ್: ಬಂಗಾಳ ಗರ್ವನರ್!

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನಡೆದ ಹಿಂಸಾಚಾರ ವಿರುದ್ಧ ಸರ್ಕಾರ ಹಾಗೂ ಸಿಎಂ ಮಮತಾ ಬ್ಯಾನರ್ಜಿಯನ್ನು ಟೀಕಿಸಿದ್ದ ಧನ್ಕರ್, ಕೇಂದ್ರಕ್ಕೆ ವರದಿ ನೀಡಿದ್ದರು. ಹಿಂಸಾಚಾರ ವಿರುದ್ಧದ ಕಾನೂನು ಹೋರಾಟದಲ್ಲೂ ಧನ್ಕರ್ ಮುಂಚೂಣಿಯಲ್ಲಿದ್ದರು.

click me!