ಫೇಸ್‌ಬುಕ್‌ ವಿಡಿಯೋದಲ್ಲಿ ರಾಷ್ಟ್ರಗೀತೆಗೆ ಅವಮಾನ, ಪಶ್ಚಿಮ ಬಂಗಾಳದಲ್ಲಿ ಇಬ್ಬರು ಯುವತಿಯರ ಮೇಲೆ ಕೇಸ್‌!

Published : Apr 11, 2023, 04:14 PM IST
ಫೇಸ್‌ಬುಕ್‌ ವಿಡಿಯೋದಲ್ಲಿ ರಾಷ್ಟ್ರಗೀತೆಗೆ ಅವಮಾನ, ಪಶ್ಚಿಮ ಬಂಗಾಳದಲ್ಲಿ ಇಬ್ಬರು ಯುವತಿಯರ ಮೇಲೆ ಕೇಸ್‌!

ಸಾರಾಂಶ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಕುರಿತಾಗಿ ಪ್ರಶ್ನೆ ಮಾಡಿದ ಬಳಿಕ ವಿಡಿಯೋವನ್ನು ತೆಗೆದುಹಾಕಲಾಗಿದೆ. ಈ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ. ರಾಷ್ಟ್ರಗೀತೆಯ ಸಾಹಿತ್ಯವನ್ನು ತಪ್ಪಾಗಿ ಓದಿದ್ದಲ್ಲದೆ, ವಿಡಿಯೋದಲ್ಲಿ ಕುಳಿತುಕೊಂಡು, ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆ ಹಾಡಿದ್ದಾರೆ.

ನವದೆಹಲಿ (ಏ.11): ರಾಷ್ಟ್ರಗೀತೆಯ ಸಾಹಿತ್ಯವನ್ನು ಅಪಹಾಸ್ಯ ಮಾಡಿದ್ದಲ್ಲದೆ, ಕುಳಿತುಕೊಂಡು ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ಅವಮಾನ ಮಾಡಿದ್ದ ಇಬ್ಬರು ಹುಡುಗಿಯರ ವಿರುದ್ಧ ಪಶ್ಚಿಮ ಬಂಗಾಳ ಪೊಲೀಸರು ಕೇಸ್‌ ದಾಖಲಿಸಿದ್ದಾರೆ. ರಾಷ್ಟ್ರಗೀತೆಯನ್ನು ಅಪಹಾಸ್ಯ ಮಾಡಿ ಹಾಡಿದ ವಿಡಿಯೋವನ್ನು ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಲಾಲ್‌ಬಜಾರ್ ಸೈಬರ್ ಸೆಲ್ ಮತ್ತು ಬ್ಯಾರಕ್‌ಪುರ ಕಮಿಷರಿಯೇಟ್‌ಗೆ ವಕೀಲ ಅತ್ರಾಯೀ ಹಲ್ದರ್ ಅವರು ನೀಡಿದ್ದ ದೂರಿನ ಮೇಲೆ ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ. ವಿಡಿಯೋ ಬಗ್ಗೆ ಸಾಕಷ್ಟು ಮಂದಿ ಪ್ರಶ್ನೆ ಮಾಡಿದ ಬಳಿಕ ಇಬ್ಬರೂ ಹುಡುಗಿಯರ ಈ ವಿಡಿಯೋ ಫೇಸ್‌ಬುಕ್‌ನಿಂದ ಡಿಲೀಟ್‌ ಮಾಡಲಾಗಿದೆ. ವಿಡಿಯೋದಲ್ಲಿ ಸಂಪೂರ್ಣವಾಗಿ ರಾಷ್ಟ್ರಗೀತೆಯನ್ನು ಅಪಹಾಸ್ಯ ಮಾಡುವ ಸಾಹಿತ್ಯಗಳಿದ್ದವು.  ಈ ಬಾಲಕಿಯರು ಅಪ್ರಾಪ್ತರೇ ಎನ್ನುವುದು ಖಚಿತವಾಗಬೇಕಿದೆ. ಈ ಕುರಿತಾಗಿ ಮಾತನಾಡಿ ಅತ್ರಾಯೆ ಹಲ್ಡರ್ ಹೇಳಿದರು:

“ಭಾರತದ ರಾಷ್ಟ್ರಗೀತೆ ಮತ್ತು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ್ದಕ್ಕಾಗಿ ಈ ಇಬ್ಬರು ಹುಡುಗಿಯರ ವಿರುದ್ಧ ನಾನು ಸೈಬರ್ ಕ್ರೈಮ್ ಪೊಲೀಸ್‌ ಠಾಣೆ, ಬರಾಕ್‌ಪುರ ಮತ್ತು ಸೈಬರ್ ಕ್ರೈಮ್ ಪೊಲೀಸ್‌ ಠಾಣೆ, ಡಿಟೆಕ್ಟಿವ್ ಡಿಪಾರ್ಟ್‌ಮೆಂಟ್, ಲಾಲ್‌ಬಜಾರ್‌ಗೆ ದೂರು ಸಲ್ಲಿಸಿದ್ದೇನೆ. ಭಾರತ ಮತ್ತು ಎಲ್ಲಾ ಭಾರತೀಯರ ಭಾವನೆಗಳನ್ನು ನೋಯಿಸುತ್ತದೆ' ಎಂದು ಹೇಳಿದ್ದಾರೆ.
ದೂರುಗಳನ್ನು ಸ್ವೀಕರಿಸಿರುವುದನ್ನು ಪೊಲೀಸ್ ಇಲಾಖೆಯ ಮೂಲಗಳು ಖಚಿತಪಡಿಸಿದ್ದು, ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ. “ನಾವು ದೂರನ್ನು ಸ್ವೀಕರಿಸಿದ್ದೇವೆ ಮತ್ತು ವಿಚಾರಣೆಯನ್ನು ಪ್ರಾರಂಭಿಸಿದ್ದೇವೆ. ಕಾನೂನು ಅದರ ಪ್ರಕಾರ ಕ್ರಮ ತೆಗೆದುಕೊಳ್ಳುತ್ತದೆ ”ಎಂದು ಬರಾಕ್‌ಪುರ ಕಮಿಷನರ್ ಅಲೋಕೆ ರಾಜ್ಹೋರಿಯಾ ತಿಳಿಸಿದ್ದಾರೆ. ಲಾಲ್‌ಬಜಾರ್‌ ಪೊಲೀಸ್ ಠಾಣೆಯ ಮೂಲಗಳು ಕೂಡ ದೂರು ಸ್ವೀಕರಿಸಿರುವುದನ್ನು ಖಚಿತಪಡಿಸಿವೆ.

ಆಸ್ತಿಗಾಗಿ ಅತ್ತೆ - ಮಾವನನ್ನೇ ಕೊಲೆ ಮಾಡಿದ ರಾಕ್ಷಸಿ ಸೊಸೆ: ಬಾಯ್‌ಫ್ರೆಂಡ್‌ ನೆರವಿನಿಂದ ಹತ್ಯೆ!

ಲಾಲ್‌ಬಜಾರ್‌ ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಸ್ವತಃ ಫೇಸ್‌ಬುಕ್‌ಗೆ ಈ ಕುರಿತಾಗಿ ಪತ್ರ ಬರೆದಿದ್ದು, ಸೂಕ್ತ ಮಾಹಿತಿಯನ್ನು ನೀಡುವಂತೆ ಕೇಳಿದ್ದೇವೆ ಎಂದಿದ್ದಾರೆ. ಫೇಸ್‌ಬುಕ್ ಖಾತೆಯನ್ನು ಡಿಲೀಟ್‌ ಮಾಡಿದ ನಂತರ ಇಬ್ಬರು ಹುಡುಗಿಯರು ತಮ್ಮ ಸ್ನೇಹಿತರ ವಲಯದಲ್ಲಿ ಬೆಟ್ಟಿಂಗ್‌ ಕಾರಣಕ್ಕಾಗಿ, ತಮಾಷೆಗಾಗಿ ಈ ವಿಡಿಯೋ ಮಾಡಲಾಗಿತ್ತು ಎಂದು ಇನ್ನೊಂದು ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಲೈವ್‌ ಬರುವ ಮೂಲಕ ತಿಳಿಸಿದ್ದಾರೆ.

ರಾಹುಲ್ ಗಾಂಧಿ ವಿದೇಶದಲ್ಲಿ ಭೇಟಿಯಾಗೋ ಉದ್ಯಮಿಗಳು ಯಾರು..? ಬಿಜೆಪಿ ಪ್ರಶ್ನೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರೋಧದ ಮಧ್ಯೆ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಶಂಕು
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌