
ಕೋಲ್ಕತ್ತಾ (ಫೆ.17): ವಿಶ್ವ ಹಿಂದೂ ಪರಿಷತ್ ಬಂಗಾಳದ ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿರುವ ಸಿಂಹ ಹಾಗೂ ಸಿಂಹಿಣಿಗೆ ಇಟ್ಟ ಹೆಸರಿನ ಕುರಿತಾಗಿ ಪಶ್ಚಿಮ ಬಂಗಾಳದ ಅರಣ್ಯ ಇಲಾಖೆಯ ವಿರುದ್ಧ ಕೋಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿದೆ. ಸಿಲಿಗುರಿಯ ಸಫಾರಿ ಪಾರ್ಕ್‌ನಲ್ಲಿರುವ ಸಿಂಹಿಣಿಗೆ ಸೀತಾ ಎಂದು ಹೆಸರಿಡಲಾಗಿದ್ದು, ಸಿಂಹಕ್ಕೆ ಅಕ್ಬರ್ ಎನ್ನುವ ಹೆಸರನ್ನು ಅರಣ್ಯಾಧಿಕಾರಿಗಳು ನೀಡಿದ್ದಾರೆ. ಅದಲ್ಲದೆ, ಈ ಎರಡೂ ಸಿಂಹಗಳನ್ನು ಒಂದೇ ಆವರಣದಲ್ಲಿ ಇರಿಸಿರುವುದು ವಿಎಚ್‌ಪಿಯ ಕಣ್ಣು ಕೆಂಪಗಾಗಿಸಿದೆ. ಈ ಕುರಿತಾಗಿ ವಿಎಚ್‌ಪಿ ಕೋರ್ಟ್ ಮೆಟ್ಟಿಲೇರಿದೆ. ವಿಶ್ವ ಹಿಂದೂ ಪರಿಷತ್ತಿನ ಬಂಗಾಳ ಘಟಕವು ಫೆಬ್ರುವರಿ 16 ರಂದು ಜಲ್ಪೈಗುರಿಯಲ್ಲಿರುವ ಕೋಲ್ಕತ್ತಾ ಹೈಕೋರ್ಟ್‌ನ ಸರ್ಕ್ಯೂಟ್ ಬೆಂಚ್ ಮೆಟ್ಟಿಲೇರಿದ್ದು, ಫೆಬ್ರವರಿ 20ರ ಮಂಗಳವಾರದಂದು ಪ್ರಕರಣದ ವಿಚಾರಣೆ ನಡೆಯಲಿದೆ. ರಾಜ್ಯದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಬಂಗಾಳದ ಸಫಾರಿ ಪಾರ್ಕ್‌ನ ನಿರ್ದೇಶಕರನ್ನು ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಮಾಡಲಾಗಿದೆ.
19 ವಯಸ್ಸಿಗೆ ಸಾವು ಕಂಡ ದಂಗಲ್ ನಟಿ ಸುಹಾನಿ ಭಟ್ನಾಗರ್‌ಗೆ ಇತ್ತು ವಿಚಿತ್ರ ರೋಗ, ಹೀಗಿರುತ್ತಾ ಈ ಕಾಯಿಲೆಯ ಲಕ್ಷಣ!
ವಿವಾದದ ಕುರಿತು ಪ್ರತಿಕ್ರಿಯೆ ನೀಡಿರುವ ಅರಣ್ಯ ಇಲಾಖೆ, ಸಿಂಹಗಳನ್ನು ಇತ್ತೀಚೆಗೆ ತ್ರಿಪುರಾದ ಸೆಪಹಿಜಾಲಾ ಝೂಲಾಜಿಕಲ್ ಪಾರ್ಕ್‌ನಿಂದ ಸ್ಥಳಾಂತರಿಸಲಾಗಿದೆ. ಫೆಬ್ರವರಿ 13 ರಂದು ಸಫಾರಿ ಪಾರ್ಕ್‌ಗೆ ಬಂದ ನಂತರ ಇದಕ್ಕೆ ಹೆಸರು ನೀಡಲಾಗಿಲ್ಲ. ಅದಾಗಲೇ ಈ ಸಿಂಹ ಹಾಗೂ ಸಿಂಹಿಣಿಗೆ ಈ ಹೆಸರನ್ನು ನೀಡಲಾಗಿತ್ತು ಎಂದಿದ್ದಾರೆ. ಅಕ್ಬರ್ ಎನ್ನುವುದು ಮೊಘಲ್ ಚಕ್ರವರ್ತಿಯ ಹೆಸರು. ಆದರೆ, ಸೀತೆಗೆ ದೇಶದಲ್ಲಿ ಶ್ರೇಷ್ಠ ಸ್ಥಾನವಿದೆ. ಹಿಂದೂಗಳು ಸೀತಾಮಾತೆಯನ್ನು ಪೂಜೆ ಮಾಡುತ್ತಾರೆ. ವಾಲ್ಮೀಕಿ ರಾಮಾಯಣದಲ್ಲೂ ಸೀತೆ ಪ್ರಮುಖ ಪಾತ್ರ ಎಂದು ವಿಎಚ್‌ಪಿ ಹೇಳಿದೆ. ಅದಲ್ಲದೆ, ಇದು ಹಿಂದೂಗಳ ಭಾವನೆಗೆ ನೋವುಂಟು ಮಾಡುವ ಅಂಶ ಎಂದು ತಿಳಿಸಿದೆ.
Watch: 'ಇನ್ನು 2-3 ವರ್ಷದಲ್ಲಿ ಮೋದಿಯನ್ನು ಕೊಲ್ತೇವೆ..' ಪಂಜಾಬ್ ರೈತನ ಧಮ್ಕಿ!
ವರದಿಯ ಪ್ರಕಾರ, ರಾಜ್ಯದ ಅರಣ್ಯ ಇಲಾಖೆಯು ಸಿಂಹಗಳಿಗೆ ಹೆಸರುಗಳನ್ನು ನಿಗದಿಪಡಿಸಿದೆ ಮತ್ತು 'ಅಕ್ಬರ್' ಜೊತೆ 'ಸೀತಾ' ಜೋಡಿಯನ್ನು ಹಿಂದೂಗಳಿಗೆ ಅಗೌರವವೆಂದು ಪರಿಗಣಿಸಲಾಗಿದೆ ಎಂದು ವಿಎಚ್‌ಪಿ ವಾದ ಮಾಡಿದೆ. ಅದಲ್ಲದೆ, ಸಿಂಹಿಣಿಯ ಹೆಸರನ್ನು ಬದಲಾಯಿಸುವಂತೆ ಒತ್ತಾಯ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ