ಬಾಯಾರಿಕೆ ನೀಗಿಸಲು ಮೂತ್ರ ಕುಡಿದೆವು: ರೋಪ್‌ ವೇನಲ್ಲಿ ಸಿಲುಕಿದವರ ಕರಾಳ ಅನುಭವ

By Anusha Kb  |  First Published Apr 14, 2022, 3:44 AM IST
  • ತ್ರಿಕೂಟ ಪರ್ವತದಲ್ಲಿ ಕೇಬಲ್‌ ಕಾರ್‌ ಅಪಘಾತ ಪ್ರಕರಣ
  • ಬಾಯಾರಿಕೆ ನೀಗಿಸಲು ಮೂತ್ರ ಕುಡಿದೆವು
  • ಕರಾಳ ಅನುಭವ ಬಿಚ್ಚಿಟ್ಟ ಸಂತ್ರಸ್ತರು

ರಾಂಚಿ: ಜಾರ್ಖಂಡನ ದೇವಘರ್‌ ಜಿಲ್ಲೆಯ (Devgarh district) ತ್ರಿಕೂಟ ಪರ್ವತದಲ್ಲಿ (Trikuta Mountain) ನಡೆದ ಕೇಬಲ್‌ ಕಾರ್‌ ಡಿಕ್ಕಿ ಹಿನ್ನೆಲೆಯಲ್ಲಿ 46 ಗಂಟೆಗಳಿಗೂ ಹೆಚ್ಚಿನ ಸಮಯ ಕೇಬಲ್‌ ಕಾರಿನ (cable car) ಟ್ರಾಲಿಯಲ್ಲೇ ಸಿಲುಕಿದ ಜನರು ತಮ್ಮ ಭೀಕರ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಸಿಲುಕಿದ ಪ್ರವಾಸಿಗರೊಬ್ಬರು ನೀರಿನ ಲಭ್ಯತೆಯಿಲ್ಲದ ಕಾರಣದಿಂದ ಬಾಟಲಿಯಲ್ಲಿ ಮೂತ್ರ (urine) ವಿಸರ್ಜಿಸಿ ಅದನ್ನೇ ಕುಡಿದು ಬಾಯಾರಿಕೆ ನೀಗಿಸಿಕೊಂಡಿದ್ದಾಗಿ ಹೇಳಿದ್ದಾರೆ.

‘ಪ್ರವಾಸಿಗರು ಹಸಿವು, ಬಾಯಾರಿಕೆಯಿಂದ ಕಂಗೆಟ್ಟು ಬದುಕುಳಿಯುವ ಎಲ್ಲ ಭರವಸೆಯನ್ನು ಕಳೆದುಕೊಂಡಿದ್ದರು. ನಮ್ಮ ಹತ್ತಿರ ಇರುವ ಬಾಟಲಿನಲ್ಲಿ ಮೂತ್ರ ತುಂಬಿಸಿ, ಅದನ್ನೇ ಕುಡಿದು ಹೇಗೋ ಜೀವ ಉಳಿಸಿಕೊಂಡಿದ್ದೆವು. ತಮ್ಮನ್ನು ರಕ್ಷಿಸುವಂತೇ ಇಡೀ ರಾತ್ರಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆವು. ಭಾರತೀಯ ವಾಯುಪಡೆಯ ವಿಪತ್ತು ನಿರ್ವಹಣಾ ಪಡೆಯ ಯೋಧರು ದೇವರಂತೇ ಬಂದು ನಮ್ಮನ್ನು ಕಾಪಾಡಿದರು’ ಎಂದು ಪ್ರವಾಸಿಗರೊಬ್ಬರು ತಮ್ಮ ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

Tap to resize

Latest Videos

ಕೇಬಲ್‌ ಕಾರು ದುರಂತ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

ಬದುಕುವ ಭರವಸೆಯೇ ಹೋಗಿತ್ತು:

ಇನ್ನೊಬ್ಬ ಪ್ರವಾಸಿ ಸಂದೀಪ್‌(Sandeep) ‘ಟ್ರಾಲಿಯ ಮೇಲೆ ಬರೆದಿದ್ದ ಎಮರ್ಜೆನ್ಸಿ ನಂಬರಿಗೆ ಫೋನು ಮಾಡಿದ್ದೆವು. ತಾಂತ್ರಿಕ ಸಮಸ್ಯೆಯಿಂದಾಗಿ ಸಂಚಾರ ನಿಂತಿದೆ. ಶೀಘ್ರದಲ್ಲೇ ಇದನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ರಾತ್ರಿಯಾಗಿದ್ದೇ ರಕ್ಷಣಾ ತಂಡಗಳಿಗೂ ದಟ್ಟಾರಣ್ಯದ ನಡುವೆ ಸಿಲುಕಿರುವ ನಮ್ಮನ್ನು ಹುಡುಕಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಬದುಕುತ್ತೇವೆ ಎಂಬ ಭರವಸೆಯೇ ಕಳೆದುಕೊಂಡ ನಮಗೆ ಆಹಾರ, ನೀರು ಒದಗಿಸಿ ರಕ್ಷಣೆ ನೀಡಿದ ಸೇನೆಗೆ ಹಾಗೂ ಸ್ಥಳೀಯ ಆಡಳಿತಕ್ಕೆ ಧನ್ಯವಾದಗಳು’ ಎಂದು ಶ್ಲಾಘಿಸಿದ್ದಾರೆ.

Nandi Hill Rope way ನಂದಿಗಿರಿಗೆ ರೋಪ್‌ ವೇ ನಿರ್ಮಾಣಕ್ಕೆ ರೂಪು ರೇಷೆ
 

ರೋಪ್‌ ವೇಯಲ್ಲಿ ಸಿಲುಕಿದ ಇನ್ನೊಬ್ಬ ಪ್ರವಾಸಿಗರಾದ ಸುಶೀಲಾ ದೇವಿ (Sushila Devi) ಕೂಡಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ‘ಭಾನುವಾರ ಸಾಯಂಕಾಲ 4 ಗಂಟೆಯಿಂದಲೂ ರೋಪ್‌ ವೇ ಮೇಲೆ ಸಿಲುಕಿಕೊಂಡಿದ್ದೆವು. ವಾಯುಪಡೆಯವರು ರಕ್ಷಣೆಗಾಗಿ ಆಗಮಿಸಿದ್ದರು. ರೋಪ್‌ ವೇಯಿಂದ ಹಗ್ಗವನ್ನು ಬಳಸಿ ಹೆಲಿಕಾಪ್ಟರ್‌ ಹತ್ತಲು ತಿಳಿಸಿದ್ದರು. ಇದು ಅತ್ಯಂತ ಭಯಾನಕ ಅನುಭವವಾಗಿತ್ತು. ಸಹ ಪ್ರಯಾಣಿಕರು ಕಾಪ್ಟರ್‌ ಹತ್ತುವಾಗಲೇ ಜಾರಿ ಕೆಳಬಿದ್ದು ಅಸುನೀಗಿದರು. ನಾವು ಎಂದಿಗೂ ಇಂತಹ ಕಾರ್ಯ ಮಾಡದಿದ್ದರೂ ಬೇರೆ ಆಯ್ಕೆಯಿರದ ಕಾರಣ ಭಯದಲ್ಲೇ ಹಗ್ಗ ಹತ್ತಿ ಕಾಪ್ಟರ್‌ ಏರಿದೆವು’ ಎಂದಿದ್ದಾರೆ.

ಘಟನೆಯ ವಿವರ:

ಭಾನುವಾರ ಸಂಜೆ 4 ಗಂಟೆಗೆ ಪ್ರವಾಸಿಗರು (tourists) ರೋಪ್‌ ವೇ ಟ್ರಾಲಿಯಲ್ಲಿ ಸಾಗುತ್ತಿರುವಾಗ ವಿದ್ಯುತ್‌ ಕಡಿತಗೊಂಡಿತ್ತು. ಕೇಬಲ್‌ ಕಾರುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದರು.
 

click me!