
ಅಹ್ಮದಾಬಾದ್(13): ಕಾಂಗ್ರೆಸ್ ನನ್ನನ್ನು ನಿರ್ಲಕ್ಷಿಸಿದೆ. ಯಾವುದೇ ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ ಎಂದು ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾರ್ದಿಕ್ ಪಟೇಲ್ ಬುಧವಾರ ತಮ್ಮ ಪಕ್ಷದ ವಿರುದ್ಧವೇ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪಕ್ಷದಲ್ಲಿ ನನ್ನ ಸ್ಥಾನವೂ ಸಂತಾನಹರಣಕ್ಕೊಳಗಾದ ನವವಿವಾಹಿತನಂತೆ ಆಗಿದೆ ಎಂದು ಅವರು ದೂರಿದ್ದಾರೆ. 2015ರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತನ್ನ ವಿರುದ್ಧದ ಶಿಕ್ಷೆಗೆ ತಡೆ ನೀಡಿದ ನಂತರ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛೆ ವ್ಯಕ್ತಪಡಿಸಿದ ಒಂದು ದಿನದ ನಂತರ, ಪಾಟಿದಾರ್ ಸಮುದಾಯದ ನಾಯಕ ಮತ್ತು ಗುಜಾರತ್ ಕಾಂಗ್ರೆಸ್‌ನ ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಹಾರ್ದಿಕ್ ಪಟೇಲ್ ಈ ಆರೋಪ ಮಾಡಿದ್ದಾರೆ.
ರಾಜ್ಯದ ಎಲ್ಲಾ ಪಕ್ಷಗಳು ಸೇರಿಸಿಕೊಳ್ಳಲು ಬಯಸುವ ಖೋಡಲ್‌ಧಾಮ್ ಟ್ರಸ್ಟ್ ಅಧ್ಯಕ್ಷ ಮತ್ತು ಪ್ರಬಲ ಪಾಟಿದಾರ್ ನಾಯಕ ನರೇಶ್ ಪಟೇಲ್ ಅವರನ್ನು ಪಕ್ಷಕ್ಕೆ ಕರೆಸಿಕೊಳ್ಳುವಲ್ಲಿ ಕಾಂಗ್ರೆಸ್ ನಾಯಕರ ವಿಳಂಬವನ್ನು ಪ್ರಶ್ನಿಸಿದ ಅವರು ಇದು ಇಡೀ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಹೇಳಿದರು. ಪ್ರದೇಶ ಕಾಂಗ್ರೆಸ್ ಸಮಿತಿಯ ಯಾವುದೇ ಸಭೆಗಳಿಗೆ ನನ್ನನ್ನು ಆಹ್ವಾನಿಸುತ್ತಿಲ್ಲ. ಅವರು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ನನ್ನನ್ನು ಸಂಪರ್ಕಿಸುವುದಿಲ್ಲ, ಹಾಗಿದ್ದ ಮೇಲೆ ನನ್ನ ಹುದ್ದೆಗಿರುವ ಅರ್ಹತೆ ಏನು ಎಂದು ಹಾರ್ದಿಕ್ ಕೇಳಿದರು. ಇತ್ತೀಚೆಗೆ ಪಕ್ಷಕ್ಕೆ 75 ಹೊಸ ಪ್ರಧಾನ ಕಾರ್ಯದರ್ಶಿಗಳು ಮತ್ತು 25 ಹೊಸ ಉಪಾಧ್ಯಕ್ಷರನ್ನು ಘೋಷಿಸಿದರು. ಆಗಲೂ ಅವರೇನಾದರು ನನ್ನನ್ನು ಸಂಪರ್ಕಿಸಿದರೇ? ಎಂದು ಹಾರ್ದಿಕ್ ಪ್ರಶ್ನಿಸಿದರು.
20 ದಿನಗಳಿಂದ ಹಾರ್ದಿಕ್ ಪಟೇಲ್ ಮನೆಗೆ ಬಂದಿಲ್ಲ: ಪತ್ನಿಯಿಂದ ದೂರು!
ಕಳೆದ ಚುನಾವಣೆಗೆ ಮುನ್ನ ಗುಜರಾತ್ ಸರ್ಕಾರದ ವಿರುದ್ಧ ಯಶಸ್ವಿ ಆಂದೋಲನದ ನೇತೃತ್ವ ವಹಿಸಿದ್ದ ಮತ್ತು 2020 ರಲ್ಲಿ ಸ್ವತಃ ರಾಹುಲ್ ಗಾಂಧಿಯಿಂದಲೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಹಾರ್ದಿಕ್, ಈ ಹಿಂದೆಯೂ ಸಹ ಪಕ್ಷದಲ್ಲಿ ಪ್ರಮುಖ ಸ್ಥಾನಮಾನ ನೀಡದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. 2015ರ ಸ್ಥಳೀಯ ಸಂಸ್ಥೆ ಮತ್ತು 2017ರ ವಿಧಾನಸಭೆ ಚುನಾವಣೆಯಲ್ಲಿ ಪಾಟಿದಾರ್ ಹೋರಾಟದಿಂದಾಗಿ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ ಎಂದು ಹಾರ್ದಿಕ್ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದರು. 2017ರಲ್ಲಿ 182 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಗೆದ್ದಿತ್ತು. ಆದರೆ ಅದರ ನಂತರ ಏನಾಯಿತು? ಹಾರ್ದಿಕ್ ಅವರನ್ನು ಪಕ್ಷ ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಕಾಂಗ್ರೆಸ್‌ನ ಹಲವರು ಭಾವಿಸಿದ್ದಾರೆ ಎಂದು ಹಾರ್ದಿಕ್ ಹೇಳಿದರು.
2022 ರ ಚುನಾವಣೆಗೆ ನರೇಶ್ ಪಟೇಲ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು ಬಯಸಿದೆ ಎಂದು ನಾನು ಟಿವಿಯಲ್ಲಿ ನೋಡುತ್ತಿದ್ದೇನೆ. 2027 ರ ಚುನಾವಣೆಗೆ ಅವರು ಹೊಸ ಪಟೇಲರನ್ನು ಹುಡುಕುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಪಕ್ಷವು ಈಗಾಗಲೇ ಹೊಂದಿರುವ ಜನರನ್ನು ಏಕೆ ಬಳಸಿಕೊಳ್ಳುವುದಿಲ್ಲ ಎಂದು ಹಾರ್ದಿಕ್ ಪ್ರಶ್ನಿಸಿದರು. ಗುಜರಾತ್ ಕಾಂಗ್ರೆಸ್ ಅಧ್ಯಕ್ಷ (Gujarat Congress president)ಜಗದೀಶ್ ಠಾಕೂರ್ (Jagdish Thakor)ಅವರು ಹಾರ್ದಿಕ್ (Hardik) ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಾತನಾಡುವುದಾಗಿ ಹೇಳಿದರು, ಆದರೆ ನರೇಶ್ ಪಟೇಲ್ ಅವರ ಬಗ್ಗೆ ಪಕ್ಷವು ತಲೆಕೆಡಿಸಿಕೊಳ್ಳುತ್ತಿದೆ ಎಂಬುದನ್ನು ನಿರಾಕರಿಸಿದರು.
ಮೋದಿ ತವರಿನಲ್ಲಿ ಪಕ್ಷ ಬಲ ಪಡಿಸಲು ಕಾಂಗ್ರೆಸ್ ನಿರ್ಧಾರ , ಹಾರ್ಧಿಕ್ ಪಟೇಲ್‌ಗೆ ಜವಾಬ್ದಾರಿ!
ನರೇಶ್ ಪಟೇಲ್ (Naresh Patel) ಇರಲಿ ಅಥವಾ ಗುಜರಾತಿನ ಯಾವುದೇ ಉತ್ತಮ ನಾಯಕರಾಗಿದ್ದರೂ ಪಕ್ಷದಲ್ಲಿ ಅವರಿಗೆ ಸ್ವಾಗತವಿದೆ ಎಂದು ಮೊದಲ ದಿನದಿಂದಲೂ ಕಾಂಗ್ರೆಸ್ ಸ್ಪಷ್ಟಪಡಿಸಿದೆ. ನರೇಶ್ ಪಟೇಲ್ ಪಕ್ಷಕ್ಕೆ ಬರಲು ಅರ್ಹರಲ್ಲ ಎಂದು ಸೂಚಿಸುವ ಯಾವುದೇ ಬಹಿರಂಗ ಹೇಳಿಕೆಯನ್ನು ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಯಾವೊಬ್ಬ ನಾಯಕನೂ ನೀಡಿಲ್ಲ. ಯಾವುದೇ ವ್ಯಕ್ತಿ ಅಥವಾ ಸಮುದಾಯಕ್ಕೆ ಅಗೌರವ ತೋರಿಲ್ಲ. ತಮ್ಮ ಸಮುದಾಯದವರು ಅವಕಾಶ ನೀಡಿದರೆ ರಾಜಕೀಯಕ್ಕೆ ಬರುವುದಾಗಿ ಸ್ವತಃ ನರೇಶ್ ಪಟೇಲ್ ಹೇಳಿದ್ದಾರೆ. ವಿವಿಧ ಗುಂಪುಗಳ ಜೊತೆ ಚರ್ಚೆ ನಡೆಸುತ್ತಿದ್ದು, ಕಾಂಗ್ರೆಸ್ ಸೇರುವ ನಿರ್ಧಾರ ಸಂಪೂರ್ಣ ಅವರಿಗೇ ಬಿಟ್ಟಿದ್ದು. ಹೀಗಿರುವಾಗ ಕಾಂಗ್ರೆಸ್ ಅವರಿಗೆ ಮತ್ತು ಅವರ ಸಮುದಾಯಕ್ಕೆ ಅಗೌರವ ತೋರುವುದು ಹೇಗೆ ಎಂದು ಜಗದೀಶ್ ಠಾಕೂರ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ