ಕರ್ವಾ ಚೌತ್‌ಗಾಗಿ ಗರ್ಲ್‌ಫ್ರೆಂಡ್‌ ಜೊತೆ ಶಾಪಿಂಗ್‌, ನಡುರಸ್ತೆಯಲ್ಲೇ ಗಂಡನಿಗೆ ಗ್ರಹಚಾರ ಬಿಡಿಸಿದ ಹೆಂಡ್ತಿ!

By Santosh Naik  |  First Published Oct 14, 2022, 12:41 PM IST

ಗಾಜಿಯಾಬಾದ್‌ನಲ್ಲಿ ವ್ಯಕ್ತಿಯೊಬ್ಬ ಕರ್ವಾಚೌತ್‌ಗಾಗಿ ಶಾಪಿಂಗ್‌ಗೆ ಹೋಗಿದ್ದಾಗ ನಾಟಕೀಯ ಘಟನೆ ನಡೆದಿದೆ. ತನ್ನ ಗಂಡ ಪ್ರೇಯಸಿಯ ಜೊತೆ ಕರ್ವಾ ಚೌತ್‌ಗಾಗಿ ಶಾಪಿಂಗ್‌ ಮಾಡುವ ವೇಳೆ ರೆಡ್‌ ಹ್ಯಾಂಡ್‌ ಆಗಿ ಕಂಡ ಆತನ ಹೆಂಡತಿ ನಡುರಸ್ತೆಯಲ್ಲಿಯೇ ಗ್ರಹಚಾರ ಬಿಡಿಸಿದ್ದ ವಿಡಿಯೋ ವೈರಲ್‌ ಆಗಿದೆ.


ಲಕ್ನೋ (ಅ.14): ಕರ್ವಾ ಚೌತ್‌ಗಾಗಿ ಗೆಳತಿಯ ಜೊತೆ ಶಾಪಿಂಗ್‌ಗೆ ಹೋಗಿದ್ದ ವ್ಯಕ್ತಿಗೆ ಆತನ ಹೆಂಡತಿಯೇ ನಡು ರಸ್ತೆಯಲ್ಲಿ ಗ್ರಹಚಾರ ಬಿಡಿಸಿದ ಘಟನೆ ಗಾಜಿಯಾಬಾದ್‌ನಲ್ಲಿ ನಡೆದಿದೆ. ಸಿನಿಮೀಯ ರೀತಿಯಲ್ಲಿ ನಡೆದ ಘಟನೆಯಲ್ಲಿ ಪತ್ನಿಯು, ತನ್ನ ಗಂಡ ಗರ್ಲ್‌ಫ್ರೆಂಡ್‌ನ ಜೊತೆ ಮಾರ್ಕೆಟ್‌ನಲ್ಲಿ ಸುತ್ತಾಡುತ್ತಿರುವುದನ್ನು ಗುರುವಾರ ನೇರವಾಗಿ ಕಂಡಿದ್ದಾಳೆ. ಕಂಡವಳೇ ಇಬ್ಬರಿಗೂ ನಡುರಸ್ತೆಯಲ್ಲಿಯೇ ಸರಿಯಾಗಿ ಬಾರಿಸಿದ್ದಾಳೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಮಹಿಳೆ ಸರಿಯಾದ ಕೆಲಸ ಮಾಡಿದ್ದಾಳೆ ಎಂದು ಮೆಚ್ಚುಎ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಮಹಿಳೆಯರು ಗುಂಪು ಗೂಡಿದ್ದ ಪ್ರದೇಶದಲ್ಲಿ, ಮಹಿಳೆಯು ತನ್ನ ತಾಯಿಯೊಂದಿಗೆ ಮಾರ್ಕೆಟ್‌ನಲ್ಲಿ ಶಾಪಿಂಗ್‌ಗೆ ಬಂದಿದ್ದಾಳೆ. ಇದೇ ವೇಳೆ ತನ್ನ ಗಂಡ, ಗರ್ಲ್‌ಫ್ರೆಂಡ್‌ ಜೊತೆ ಇರೋದನ್ನು ಕಂಡಿದ್ದಯ, ನಡು ರಸ್ತೆಯಲ್ಲಿಯೇ ರುದ್ರಾವತಾರ ತೋರಿದ್ದಾಳೆ. ಈ ವೇಳೆ, ಆತನಿಗೆ ಸಹಾಯ ಮಾಡಲು ಬಂದ ಗರ್ಲ್‌ಫ್ರೆಂಡ್‌ಗೂ ಮಹಿಳೆ ಸರಿಯಾಗಿ ಬಾರಿಸಿದ್ದಾಳೆ. ಇಂಥವೆಲ್ಲಾ ನಾಟಕೀಯವಾದ ಘಟನೆಗಳು ತನ್ನ ಅಂಗಡಿಯ ಎದುರು ನಡೆಯುತ್ತಿದ್ದ ವೇಳೆ ಅಂಗಡಿಯ ಮಾಲೀಕ ಮಾತ್ರ, ನೀವೆಲ್ಲಾ ಹೊರಗೆ ಹೋಗಿ ಹೊಡೆದಾಡಿಕೊಳ್ಳಿ ಎಂದು ಹೇಳುತ್ತಿರುವುದು ಕಾಣುತ್ತಿದೆ. 

On Karwa Chauth, Husband Gets Thrashed by Wife and Mother-in-Law After Getting Caught Red-Handed Shopping With Girlfriend in Ghaziabad pic.twitter.com/DGFm1ZWjPk

— Subodh Srivastava 🇮🇳 (@SuboSrivastava)


'ಬಾಹರ್‌, ಬಾಹರ್‌..' ಎಂದು ಅಂಗಡಿ ಮಾಲೀಕ ಹೇಳುವ ಮೂಲಕ, ಈ ಘಟನೆಗೂ ತನಗೂ ಯಾವುದೇ ಸಂಬಂಧವಿಲ್ಲದಂತೆ ವರ್ತಿಸಿದ್ದಾನೆ. ಕೆಲವೊಂದು ಮಾಧ್ಯಮಗಳು, ಮಹಿಳೆ ತನ್ನ ಗಂಡನಿಗೆ ಚಪ್ಪಲಿಯಲ್ಲಿ ಕೂಡ ಹೊಡೆದಿದ್ದಾಳೆ ಎಂದು ಹೇಳಿದ್ದರೂ, ವೈರಲ್‌ ಆಗಿರುವ ವಿಡಿಯೋದಲ್ಲಿ ಅದರ ಮಾಹಿತಿ ಕಂಡಿಲ್ಲ. ವಿಡಿಯೋದಲ್ಲಿ ಮಹಿಳೆ ಹಾಗೂ ಆಕೆಯ ಕುಟುಂಬದವರು ಗಂಡಸಿನ ಶರ್ಟ್‌ ಕಾಲರ್‌ ಅನ್ನು ಹಿಡಿದು ಆತನಿಗೆ ಹೊಡೆಯುತ್ತಿರುವುದು ಕಾಣಿಸಿದೆ. ಅಕ್ಕಪಕ್ಕದಲ್ಲಿ ಸಾಕಷ್ಟು ಜನರು ಈ ಘಟನೆಯನ್ನು ನೋಡುತ್ತಿದ್ದರು. 

ಬಳಿಕ ಈ ಪ್ರಕರಣ ಗಾಜಿಯಾಬಾದ್‌ನ ಕೋಟ್ವಲಿ ಪೊಲೀಸ್‌ ಠಾಣೆಯಲ್ಲಿ (Ghaziabad Kotwali Police Station) ಇತ್ಯರ್ಥವಾಗಿದೆ. ಪೊಲೀಸರು (Police)  ಮಹಿಳೆಯ ಪತಿಗೆ ಶಾಂತಿಯನ್ನು ಕದಡಿದ ಆರೋಪದಲ್ಲಿ ಸಣ್ಣ ಮಟ್ಟದ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ. ಗಂಡನ ಜೊತೆ ಗಲಾಟೆ ಮಾಡಿಕೊಂಡು ಅಮ್ಮನ ಜೊತೆ ವಾಸ ಮಾಡುತ್ತಿರುವ ಮಹಿಳೆಗೆ ಪೊಲೀಸರು ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಘಟನೆ ನಡೆಯುವ ವೇಳೆ, ಗಂಡ ಹಾಗೂ ಹೆಂಡತಿ ಇಬ್ಬರೂ ಬೇರೆ ಬೇರೆಯಾಗಿ ಕರ್ವಾ ಚೌತ್‌ಗೆ ಶಾಪಿಂಗ್‌ಗೆ ತೆರಳಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Tap to resize

Latest Videos

ಆಲಿಯಾರಿಂದ ಕತ್ರಿನಾವರೆಗೆ ಮೊದಲ ಕರ್ವಾಚೌತ್‌ ಆಚರಣೆಯ ಸಂಭ್ರಮ

ಸರ್ಕಲ್ ಆಫೀಸರ್ ಅಂಶು ಜೈನ್ (Circle Officer, Anshu Jain), "ಘಟನೆ ಸಂಭವಿಸಿದ ಸುದ್ದಿ ತಿಳಿದ ತಕ್ಷಣ ನಾವು ಕೋಟ್ವಲಿ ತಲುಪಿದ್ದೆವು. ಅಲ್ಲಿ ಪುರುಷ ಮತ್ತು ಮಹಿಳೆಗೆ ಹೆಂಗಸರು ಕಚ್ಚಿ ಹಲ್ಲೆ ಮಾಡಿದ್ದಾಳೆ.. ಆ ಮಹಿಳೆಯರಲ್ಲಿ ಒಬ್ಬರು ಆ ವ್ಯಕ್ತಿಯ ಹೆಂಡತಿ. ಅವರು ಕರ್ವಾ ಚೌತ್‌ನಲ್ಲಿ ತನ್ನ ಗೆಳತಿಯೊಂದಿಗೆ ಶಾಪಿಂಗ್ (Shoping With girlfriend) ಮಾಡುತ್ತಿದ್ದ ಕಾರಣ ಪತಿಗೆ ಹೊಡೆದಿದ್ದಾರೆ' ಎಂದು ತಿಳಿಸಿದ್ದಾರೆ. ಪತಿ ವಿರುದ್ಧ ಪತ್ನಿ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪತ್ನಿಯರಿಗಾಗಿ ಕರ್ವಾ ಚೌತ್‌ ಉಪವಾಸ ಮಾಡೋ ಬಾಲಿವುಡ್‌ ಸೆಲೆಬ್ರೆಟೀಸ್!

ಉತ್ತರ ಭಾರತದಲ್ಲಿ ಹಿಂದು ಹಬ್ಬವಾದ ಕರ್ವಾ ಚೌತ್‌ಅನ್ನು ( Karwa Chauth) ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡುತ್ತಾರೆ. ಈ ವೇಳೆ ಮದುವೆಯಾದ ಹೆಣ್ಣು, ತನ್ನ ಗಂಡನಿಗೆ ದೀರ್ಘ ಆಯಸ್ಸು ಸಿಗಲಿ ಎಂದು ಬೇಡಿಕೊಂಡು ಇಡೀ ದಿನ ಉಪವಾಸ ಮಾಡುತ್ತಾಳೆ. ಕರ್ವಾ ಚೌತ್ ಅನ್ನು ಹಿಂದೂ ಲೂನಾರ್‌ ಕ್ಯಾಲೆಂಡರ್ ಪ್ರಕಾರ ಕೃಷ್ಣ ಪಕ್ಷದ ನಾಲ್ಕನೇ ದಿನ ಅಥವಾ ಕಾರ್ತಿಕ ತಿಂಗಳ ದ್ವಿತೀಯಾರ್ಧದಲ್ಲಿ ಆಚರಿಸಲಾಗುತ್ತದೆ.

click me!