ಸಾಮಾನ್ಯವಾಗಿ ಮರ ಕಡಿಯುವುದು ಮರ ಹತ್ತುವುದು ತೆಂಗಿನ ಕಾಯಿ ತೆಗೆಯುವುದು, ಅಡಿಕೆ ಕೊಯ್ಲು ಮಾಡುವುದು ಮುಂತಾದ ಗ್ರಾಮೀಣ ಭಾಗದ ಕೆಲಸಗಳು ಬಹಳ ಕಷ್ಟಕರ ಇದ್ಯಾವುದಕ್ಕೂ ಯಾವುದೇ ತರಬೇತಿ ಶಾಲೆಯಿರುವುದಿಲ್ಲ. ಆದರೂ ಇಲ್ಲೊಬ್ಬ ತೆಂಗಿನ ಮರವನ್ನು ಕತ್ತರಿಸುವ ಸ್ಟೈಲ್ ನೋಡಿದರೆ ಒಂದು ಕ್ಷಣ ಗಾಬರಿಯಾಗ್ತೀರಿ.
ಶಾಲೆಗೆ ಹೋಗದಿದ್ದರೂ ಯಾವುದೇ ತರಬೇತಿ ಶಾಲೆಗಳಲ್ಲಿ ಕಲಿಯದಿದ್ದರು ಕೆಲವರು ಬಹಳ ಅಪಾಯಕಾರಿ ಕೆಲಸಗಳನ್ನು ಬಹಳ ನಾಜೂಕಾಗಿ ಮುಗಿಸಿ ಬಿಡುತ್ತಾರೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲೂ ಎಂಬಂತೆ ಇಂತಹ ಕೆಲ ವಿದ್ಯೆಗಳು ಸ್ವಂತ ಪ್ರಯತ್ನದಿಂದ ನಾವು ಬೆಳೆದ ಪರಿಸರದಿಂದ ನೋಡಿ ಕಲಿಯುವುದರಿಂದಲೂ ಬರುತ್ತದೆ. ಅದೇ ರೀತಿ ಇಲ್ಲೊಬ್ಬ ತೆಂಗಿನ ಮರವನ್ನು ಕತ್ತರಿಸುವ ಸ್ಟೈಲ್ ನೋಡಿದರೆ ಒಂದು ಕ್ಷಣ ಗಾಬರಿಯಾಗುವುದು ಗ್ಯಾರಂಟಿ. ಆದರೆ ಆತ ಮಾತ್ರ ಯಾವುದೇ ಭಯವಿಲ್ಲದೇ ಬಹಳ ಚಾಣಾಕ್ಷತನದಿಂದ ತನ್ನ ಕೆಲಸ ಮುಗಿಸುತ್ತಾನೆ. ಈ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದ್ದು, 4 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ.
ಸಾಮಾನ್ಯವಾಗಿ ಮರ ಕಡಿಯುವುದು ಮರ ಹತ್ತುವುದು ತೆಂಗಿನ ಕಾಯಿ ತೆಗೆಯುವುದು, ಅಡಿಕೆ ಕೊಯ್ಲು ಮಾಡುವುದು ಮುಂತಾದ ಗ್ರಾಮೀಣ ಭಾಗದ ಕೆಲಸಗಳು ಬಹಳ ಕಷ್ಟಕರ ಇದ್ಯಾವುದಕ್ಕೂ ಯಾವುದೇ ತರಬೇತಿ ಶಾಲೆಯಿರುವುದಿಲ್ಲ, ಕೆಲವರಿಗೆ ಈ ಕೆಲಗಳು ಪೂರ್ವಜರಿಂದ ವಂಶವಾಹಿಯಾಗಿ ಬಂದಿದ್ದರೆ ಮತ್ತೆ ಕೆಲವರು ಸ್ವಂತ ಪ್ರಯತ್ನದಿಂದ ಈ ಕೆಲಸಗಳನ್ನು ಕಲಿಯುತ್ತಾರೆ. ಈ ಕೆಲಸಗಳಿಗೆ ಇತ್ತೀಚೆಗೆ ಯಂತ್ರಗಳು ಬಂದಿವೆಯಾದರೂ, ಇದನ್ನು ಯಂತ್ರಗಳ ಸಹಾಯವಿದಲ್ಲದೇ ಬಹಳ ಚಾಣಾಕ್ಷತನದಿಂದ ಮಾಡಿ ಮುಗಿಸುವವರಿಗೆ ಒಳ್ಳೆಯ ಡಿಮ್ಯಾಂಡ್ ಇದೆ. ಅದೇ ರೀತಿ ಇವರು ಕೆಲಸ ಮಾಡುವ ಶೈಲಿಯೂ ತುಂಬಾ ವಿಭಿನ್ನ ವಾಗಿರುತ್ತದೆ. ಜೊತೆಗೆ ಅಷ್ಟೇ ಅಪಾಯಕಾರಿಯೂ ಕೂಡ.
ಬಂದಿದೆ ನೋಡಿ ತೆಂಗಿನ ಗರಿ ಸ್ಟ್ರಾ: ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿ ಯಶ ಕಂಡ ಯುವೋದ್ಯಮಿಗಳು
ಅದರಲ್ಲೂ ದೊಡ್ಡ ದೊಡ್ಡ ಮರಗಳನ್ನು ಕಡಿಯುವ ವೇಳೆ ಬಹಳ ಜಾಗರೂಕವಾಗಿರಬೇಕಾಗುತ್ತದೆ. ಸ್ವಲ್ಪ ಹೆಚ್ಚು ಕಡಿಮೆ ಆದರೂ ಮರ ಕಡಿಯುವವನ ಜೀವಕ್ಕೆ ಎರವಾಗಿ ಬಂದು ಬಿಡುತ್ತದೆ. ಇದಕ್ಕಾಗಿ ದೊಡ್ಡ ದೊಡ್ಡ ಮರಗಳನ್ನು ಕಡಿಯುವ ವೇಳೆ ಹಗ್ಗ ಕಟ್ಟಿ ದೂರದಲ್ಲಿ 4 ರಿಂದ 5 ಜನ ಸೇರಿ ಎಳೆಯಲು ನಿಂತಿಇರುತ್ತಾರೆ. ಆದರೆ ಈ ವೀಡಿಯೋ ನೋಡಿದರೆ ನೀವು ಅಚ್ಚರಿ ಪಡದೇ ಇರುವುದಿಲ್ಲ, ಇಲ್ಲೊಬ್ಬ ತೆಂಗಿನ ಮರವನ್ನು ಮರದ ಮೇಲೆಯೇ ಕುಳಿತು ಅರ್ಧದಿಂದ ಕತ್ತರಿಸುತ್ತಿದ್ದಾನೆ. ಆತನ ಕೆಲಸವನ್ನು ನೋಡುತ್ತಿರುವವರಿಗೆ ಇನ್ನೇನು ಕೆಲವೇ ಕ್ಷಣದಲ್ಲಿ ಆತ ಮರದಿಂದ ಬಿದ್ದೋ ಅಥವಾ ಕತ್ತರಿಸುತ್ತಿರುವ ಮರವೇ ಆತನ ಮೇಲೆ ಬಿದ್ದು ಆತನಿಗೊಂದು ಗತಿಯಾಗಬಹುದು ಎಂದು ಭಯದಲ್ಲೇ ನೋಡುತ್ತಿರುತ್ತಾರೆ. ಆದರೆ ಆತ ಬಹಳ ಚಾಣಾಕ್ಷತನದಿಂದ ಮರವನ್ನು ಬೀಳಿಸಿ ಕೂದಲೆಳೆಯೂ ಸೋಕದಂತೆ ಅದ್ಭುತವಾಗಿ ಪಾರಾಗುತ್ತಾನೆ. ಆತನನ್ನು ಸಮೀಪಿಸಿಕೊಂಡೆ ಆತನ ಪಕ್ಕದಲ್ಲೇ ಬೃಹತ್ ಆದ ತೆಂಗಿನ ಮರ ನೆಲಕ್ಕುರುಳುತ್ತದೆ.
ಅಡಕೆ ಮರ ಬಳಿಕ ಈಗ ತೆಂಗಿನ ಮರ ಏರುವ ಟ್ರೀ ಬೈಕ್ ಅಭಿವೃದ್ಧಿ
ಈ ವೀಡಿಯೋವನ್ನು ಸನ್ ಆಫ್ ದಿ ಸಾಯಿಲ್ ಎಂಬ ಟ್ವಿಟ್ಟರ್ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದೆ. 32 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಕೆಂಪು ಟೀ ಶರ್ಟ್ , ಜೀನ್ಸ್ ಚೆಡ್ಡಿ ಧರಿಸಿರುವ ಯುವಕನೋರ್ವ ತೆಂಗಿನ ಮರದ ಮಧ್ಯದಲ್ಲಿ ಕುಳಿತು ಮರವನ್ನು ಸಣ್ಣ ಗರಗಸದಿಂದ ಕತ್ತರಿಸುತ್ತಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಮರ ತುಂಡಾಗಿ ಬೀಳುತ್ತದೆ. ಆದರೆ ಮರದ ಮಧ್ಯೆ ನಿಂತು ಮರ ಕತ್ತರಿಸುತ್ತಿದ್ದವನಿಗೆ ಯಾವುದೇ ಹಾನಿಯಾಗಿಲ್ಲ, ಈ ವೀಡಿಯೋ ನೋಡಿದ ಎಲ್ಲರೂ ಈ ಯುವಕನ ಚಾಣಾಕ್ಷತನದ ಕೆಲಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇಂದು ಮಧ್ಯಾಹ್ನ ಪೋಸ್ಟ್ ಆಗಿರುವ ಈ ವೀಡಿಯೋವನ್ನು ಈಗಾಗಲೇ 5 ಮಿಲಿಯನ್‌ಗೂ ಅಧಿಕ ಜನ ವೀಕ್ಷಿಸಿದ್ದಾರೆ.
ಈ ಮರ ಕಡಿಯುವ ಚಾಣಾಕ್ಷಿಯ ವೀಡಿಯೋವನ್ನು ನೀವು ಒಮ್ಮೆ ನೋಡಿ..
How this person cut a tree
pic.twitter.com/pdmJkXupfZ