ಚಂಡೀಘಡ ಮೇಯರ್ ಚುನಾವಣೆ ಗೆದ್ದ ಬಿಜೆಪಿ, ಇಂಡಿಯಾ ಮೈತ್ರಿಗೆ ಮೊದಲ ಸೋಲು!

By Suvarna NewsFirst Published Jan 30, 2024, 3:09 PM IST
Highlights

ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಚುನಾವಣೆಯಲ್ಲಿ ಮೊದಲ ಸೋಲಾಗಿದೆ. ಚಂಡೀಘಡ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇತ್ತ ಸೋಲಿನ ಆಘಾತಕ್ಕೊಳಗಾಗಿರುವ ಆಪ್ ಅಭ್ಯರ್ಥಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಆದರೆ ಈ ಚುನಾವಣಾ ಫಲಿತಾಂಶ, ಆಪ್ ಹಾಗೂ ಕಾಂಗ್ರೆಸ್ ನಡುವಿನ ಅಂತರ ಹೆಚ್ಚಿಸಿದೆ.
 

ಚಂಡಿಘಡ(ಜ.30)  ಚಂಡೀಘಡ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಮೈತ್ರಿಗೆ ತೀವ್ರ ಮುಖಭಂಗವಾಗಿದೆ. ನಾಟಕೀಯ ಬೆಳವಣಿಗೆಗೆ ಕಾರಣವಾಗಿದ್ದ ಈ ಚುನಾವಣೆ ಇಂಡಿಯಾ ಮೈತ್ರಿ ಒಕ್ಕೂಟಕ್ಕೆ ಮೊದಲ ಸೋಲಿನ ಶಾಕ್ ನೀಡಿದೆ. ಚಂಡೀಘಡ ಚುನಾವಣೆಯಲ್ಲಿ ಆಪ್ ಅಭ್ಯರ್ಥಿ ಗೆಲುವು ಬಹುತೇಕ ಖಚಿತವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಅಚ್ಚರಿ ನಡೆದಿದೆ. ಬಿಜೆಪಿ ಅಭ್ಯರ್ಥಿ ಮನೋಜ್ ಸೊಂಕರ್ ಗೆಲುವು ದಾಖಲಿಸಿದ್ದಾರೆ.  

ಫಲಿತಾಂಶದ ಬೆನ್ನಲ್ಲೇ ಆಪ್ ಅಭ್ಯರ್ಥಿ ಕುಲ್ದೀಪ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಬಹುತೇಕ ಗೆಲುವು ಖಚಿತಗೊಂಡಿದ್ದ ಕುಲ್ದೀಪ್ ಕುಮಾರ್‌ಗೆ ಅಂತಿಮ ಹಂತದಲ್ಲಿ ಸೋಲು ಎದುರಾಗಿದೆ. ಈ ಆಘಾತದಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೆ ಕುಲ್ದೀಪ್ ಕುಮಾರ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇತ್ತ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಬಿಜೆಪಿ ಕಚೇರಿ ಎಂದು ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.

ವಿಜಯಪುರ ಮೇಯರ್‌ ಹುದ್ದೆ ಕಾಂಗ್ರೆಸ್‌ ಪಾಲು: ಯತ್ನಾಳ್‌ಗೆ ಮುಖಭಂಗ

ಬಿಜೆಪಿ ಅಭ್ಯರ್ಥಿ ಸೋಂಕರ್ 16 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಕುಲ್ದೀಪ್ ಕುಮಾರ್ 12 ಮತಗಳನ್ನು ಪಡೆದು ಸೋಲಿಗೆ ಶರಣಾಗಿದ್ದಾರೆ. ಇನ್ನು 8 ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ. ಅಸಿಂಧು ನಿರ್ಧಾರ ಪ್ರಶ್ನಿಸಿ ಆಮ್ ಆದ್ಮಿ ಪಾರ್ಟಿ ಹಾಗೂ ಕಾಂಗ್ರೆಸ್ ಭಾರಿ ಪ್ರತಿಭಟನೆ ನಡೆಸಿದೆ. 14 ಕೌನ್ಸಿಲರ್ಸ್ ಸಂಖ್ಯಾಬಲ ಹೊಂದಿದ ಬಿಜೆಪಿ, ಆಪ್ ಹಾಗೂ ಕಾಂಗ್ರೆಸ್ ಮೈತ್ರಿಯನ್ನು ಸೋಲಿಸಿ ಮೇಯರ್ ಸ್ಥಾನ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆಪ್ ಬಳಿ 13 ಹಾಗೂ ಕಾಂಗ್ರೆಸ್ ಬಳಿ 7 ಕೌನ್ಸಿಲರ್ಸ್ ಬಲವಿತ್ತು. ಅದರೂ ಬಿಜೆಪಿ ಗೆಲುವಿನ ನಗೆ ಬೀರಿದೆ.

ಫಲಿತಾಂಶದ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗರಂ ಆಗಿದ್ದಾರೆ. ಬಿಜೆಪಿ ಮೋಸದ ಮೂಲಕ ಮೇಯರ್ ಸ್ಥಾನ ಗೆದ್ದುಕೊಂಡಿದೆ ಎಂದು ಆರೋಪಿಸಿದ್ದಾರೆ. ಮೇಯರ್ ಚುನಾವಣೆಯಲ್ಲಿ ಮೋಸ ಮಾಡಿರುವ ಬಿಜೆಪಿ ಲೋಕಸಭಾ ಚುನಾವಣೆಯಲ್ಲೂ ಮೋಸ ಮಾಡಲಿದೆ ಅನ್ನೋದು ಖಚಿತ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಬಳ್ಳಾರಿ ಮಹಾನಗರ ಪಾಲಿಕೆಯ ಮೂರನೇ ಅವಧಿಯ ಮೇಯರ್ ಆಗೋದ್ಯಾರು?

ಇಂಡಿಯಾ ಮೈತ್ರಿಯಲ್ಲಿ ಹಲವು ಸಭೆ, ಸವಾಲು ಎದುರಾಗಿದೆ. ಆದರೆ ಇಂಡಿಯಾ ಮೈತ್ರಿ ಕೂಟಕ್ಕೆ ಚಂಡಿಘಡ ಮೇಯರ್ ಚುನಾವಣೆ ಮೊದಲ ಚುನಾವಣೆಯಾಗಿದೆ. ಆದರೆ ಮೈತ್ರಿ ಹೋರಾಟಕ್ಕೆ ಸೋಲಿನ ನಿರಾಸೆಯಾಗಿದೆ. 

click me!