ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪೊಲೀಸರ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂಫಾಲ್: ಜನಾಂಗೀಯ ಸಂಘರ್ಷ ಪೀಡಿತ ಮಣಿಪುರದದಲ್ಲಿ ಕರ್ಫ್ಯೂ ವಿರೋಧಿಸಿ ಸಾವಿರಾರು ಮಹಿಳೆಯರು ಬುಧವಾರ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಜೊತೆಗೆ ಪೊಲೀಸರ ವಾಹನಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಆಶ್ರವಾಯು ಸಿಡಿಸಿದ್ದು, 25 ಜನರು ಗಾಯಗೊಂಡಿರುವ ಘಟನೆ ಬಿಷ್ಣುಪುರ ಜಿಲ್ಲೆಯ ಚೌಗಕ್‌ಚಾವೊ ಇಖಾಯ್‌ನಲ್ಲಿ ನಡೆದಿದೆ.
ಕರ್ಫ್ಯೂ ಹೇರಿಕೆ ವಿರೋಧಿಸಿ ಬುಧವಾರ ಭದ್ರತಾ ಬ್ಯಾರಿಕೇಡ್‌ಗಳನ್ನು ತಡೆದು ಪ್ರತಿಭಟನೆಗಿಳಿದಿದ್ದ ಸಾವಿರಾರು ಜನರನ್ನು ಚದುರಿಸಲು ಭದ್ರತಾ ಪಡೆಗಳು ಹಲವು ಸುತ್ತಿನ ಆಶ್ರುವಾಯು ಶೆಲ್‌ಗಳನ್ನು ಸಿಡಿಸಿದ್ದರಿಂದ 25 ಮಂದಿ ಗಾಯಗೊಂಡಿದ್ದಾರೆ. ಬಳಿಕ ಗಾಯಾಳುಗಳನ್ನು ಬಿಷ್ಣುಪುರ ಜಿಲ್ಲಾಸ್ಪತ್ರೆ ಮತ್ತು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.
Manipur violence: ಮಣಿಪುರದ ಸ್ಥಿತಿಗೆ ವೋಟ್ ಬ್ಯಾಂಕ್ ರಾಜಕಾರಣ ಕಾರಣ: ಸೂಲಿಬೆಲೆ
ಕರ್ಫ್ಯೂ ಧಿಕ್ಕರಿಸಿದ ಜನರು ತಮ್ಮ ಮನೆಗಳಿಂದ ಹೊರಬಂದು, ಇಂಫಾಲ್‌ನಿಂದ ಚೌಗಕ್‌ಚಾವೊ ಇಖಾಯ್‌ಗೆ ಹೋಗುತ್ತಿದ್ದ ಪೊಲೀಸರು ಮತ್ತು ಇತರ ಕೇಂದ್ರೀಯ ಪಡೆಗಳ ಸಿಬ್ಬಂದಿಯನ್ನು ತಡೆಯಲು ರಸ್ತೆ ಮಧ್ಯದಲ್ಲೇ ಕುಳಿತುಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಣಿಪುರದ ಕುರಿತ ವಿಶ್ವಸಂಸ್ಥೆ ಹೇಳಿಕೆಗೆ ಭಾರತದ ತೀವ್ರ ಆಕ್ಷೇಪ
ಮಣಿಪುರದಲ್ಲಿ ಲೈಂಗಿಕ ಹಿಂಸೆ, ಕೊಲೆ, ಮನೆ ನಾಶ, ಬಲವಂತದ ಸ್ಥಳಾಂತರ ಸೇರಿದಂತೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆ ಎಂಬ ವಿಶ್ವಸಂಸ್ಥೆಯ ತಜ್ಞರ ವರದಿಯನ್ನು ಬಲವಾಗಿ ತಿರಸ್ಕರಿಸಿರುವ ಭಾರತ ‘ಮಣಿಪುರದ ಪರಿಸ್ಥಿತಿ ಶಾಂತವಾಗಿದೆ’ ಎಂದು ಪ್ರತಿಪಾದಿಸಿದೆ.
ಅಲ್ಲದೇ ವರದಿಯು ‘ತಪ್ಪುದಾರಿಗೆಳೆಯುವ ಮತ್ತು ಊಹೆಗಳಾಗಿದೆ’ ಎಂದಿದೆ. ವಿಶ್ವಸಂಸ್ಥೆಯ ವರದಿಗೆ ಪ್ರತಿಕ್ರಿಯೆ ನೀಡಿರುವ ಭಾರತದ ಮಾನವ ಹಕ್ಕುಗಳ ಆಯೋಗ ‘ಮಣಿಪುರದ ಸ್ಥಿತಿ ಶಾಂತ ಮತ್ತು ಸ್ಥಿರವಾಗಿದೆ. ಅಲ್ಲದೇ ಮಣಿಪುರ ಸೇರಿದಂತೆ ಭಾರತದ ಜನರ ಹಕ್ಕುಗಳನ್ನು ರಕ್ಷಿಸಲು ಮತ್ತು ಶಾಂತಿ ಕಾಪಾಡಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲು ಭಾರತ ಸರ್ಕಾರ ಬದ್ಧವಾಗಿದೆ’ ಎಂದು ತಿಳಿಸಿದೆ. ಕಳೆದ 4 ತಿಂಗಳಿನಿಂದ ಜನಾಂಗೀಯ ಸಂಘರ್ಷಕ್ಕೆ ತುತ್ತಾಗಿದ್ದ ಮಣಿಪುರ ಕುರಿತು ಕಳವಳ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆಯ ತಜ್ಞರು ಈ ಬಗ್ಗೆ ಭಾರತಕ್ಕೆ ಮುಜುಗರವೆನಿಸುವಂತ ವರದಿ ನೀಡಿದ್ದರು.
ಸ್ವಾತಂತ್ರ್ಯ ಸಂಭ್ರಮದಲ್ಲಿ ಮಣಿಪುರ, 20 ವರ್ಷದ ಬಳಿಕ ಬಾಲಿವುಡ್ ಚಿತ್ರ ಪ್ರದರ್ಶನ!