Rajanikanth: ರಜನಿಕಾಂತ್‌ಗೆ ಬಿಜೆಪಿಯಿಂದ ತೆಲಂಗಾಣ ರಾಜ್ಯಪಾಲ ಹುದ್ದೆ ಆಫರ್?

Published : Sep 07, 2023, 04:53 AM ISTUpdated : Sep 07, 2023, 03:17 PM IST
Rajanikanth: ರಜನಿಕಾಂತ್‌ಗೆ ಬಿಜೆಪಿಯಿಂದ ತೆಲಂಗಾಣ  ರಾಜ್ಯಪಾಲ ಹುದ್ದೆ ಆಫರ್?

ಸಾರಾಂಶ

ತೆಲಂಗಾಣ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಖ್ಯಾತ ನಟ ರಜನಿಕಾಂತ್‌ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಸುದ್ದಿಯೊಂದು ಭಾರೀ ಸದ್ದು ಮಾಡಿದೆ.

ಹೈದರಾಬಾದ್‌: ತೆಲಂಗಾಣ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಹೊತ್ತಿನಲ್ಲೇ, ಖ್ಯಾತ ನಟ ರಜನಿಕಾಂತ್‌ ಅವರನ್ನು ತೆಲಂಗಾಣದ ನೂತನ ರಾಜ್ಯಪಾಲರಾಗಿ ನೇಮಿಸುವ ಸಾಧ್ಯತೆ ಇದೆ ಎಂದು ಸುದ್ದಿಯೊಂದು ಭಾರೀ ಸದ್ದು ಮಾಡಿದೆ.

ತಮಿಳುನಾಡು ಮತ್ತು ತೆಲಂಗಾಣದಲ್ಲಿ ರಜನಿ(Actor rajanikant) ಬಹುದೊಡ್ಡ ಜನಬೆಂಬಲ ಹೊಂದಿದ್ದಾರೆ. ಇದನ್ನು ಬಳಸಿಕೊಳ್ಳಲು ಬಿಜೆಪಿ(BJP India) ಮುಂದಾಗಿದೆ. ಈ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯಪಾಲರಾಗುವಂತೆ ಬಿಜೆಪಿ ರಜನಿಗೆ ಆಫರ್‌ ನೀಡಿದೆ. ಇದನ್ನು ಸ್ವತಃ ರಜನಿ ಕೂಡಾ ಗಂಭೀರವಾಗಿ ಪರಿಶೀಲಿಸುತ್ತಿದ್ದಾರೆ. ಒಂದು ವೇಳೆ ರಜನಿ ಒಪ್ಪಿದರೆ ಯಾವುದೇ ಸಂದರ್ಭದಲ್ಲಿ ಅವರ ನೇಮಕ ಆಗಬಹುದು ಎಂಬ ಸುದ್ದಿ ಹಬ್ಬಿದೆ.

'ಜೈಲರ್‌' ಸೂಪರ್ ಸಕ್ಸಸ್‌, 'ಕಾವಾಲಯ್ಯ' ಸಂಗೀತ ನಿರ್ದೇಶಕನಿಗೆ ಸಿಕ್ತು ದುಬಾರಿ ಗಿಫ್ಟ್‌

ಕಾರಣವೇನು?:

ರಜನಿ ರಾಜ್ಯಪಾಲರಾದರೆ ತೆಲಂಗಾಣ ಮತ್ತು ತಮಿಳುನಾಡು ಎರಡೂ ಕಡೆ ಬಿಜೆಪಿಗೆ ಲಾಭವಾಗಲಿದೆ ಎಂಬುದು ಪಕ್ಷದ ಉದ್ದೇಶ. ಇತ್ತೀಚೆಗಷ್ಟೇ ರಜನಿ ಅವರ ಸೋದರ ಸತ್ಯನಾರಾಯಣ ರಾವ್‌ ಅವರು ‘ರಜನೀಕಾಂತ್‌ ಅವರು ನೇರವಾಗಿ ರಾಜಕೀಯಕ್ಕೆ ಪ್ರವೇಶಿಸದೇ ಇರಬಹುದು. ಆದರೆ ಖಂಡಿತ ಅವರು ರಾಜ್ಯದ ರಾಜ್ಯಪಾಲರಾಗುತ್ತಾರೆ’ ಎಂದು ಹೇಳಿದ್ದರು. ಈ ಹೇಳಿಕೆ ಇಂಥದ್ದೊಂದು ಸಾಧ್ಯತೆಯನ್ನು ಮತ್ತಷ್ಟುದಟ್ಟವಾಗಿಸಿದೆ. 

ವಯಸ್ಸು 72 ಆದ್ರೂ ರಜನಿ ಇಷ್ಟೊಂದು ಯಂಗ್ ಕಾಣಿಸೋ ರಹಸ್ಯ ಏನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?