ಉಪರಾಷ್ಟ್ರಪತಿ ಚುನಾವಣೆ, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಸಿಂಗ್ ಸೇರಿ ಗಣ್ಯರ ಮತದಾನ!

By Suvarna NewsFirst Published Aug 6, 2022, 11:47 AM IST
Highlights

ಉಪರಾಷ್ಟ್ರಪತಿ ಚುನಾವಣೆ ಮತದಾನ ಆರಂಭಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸೇರಿದಂತೆ ಗಣ್ಯರು ಮತ ಚಲಾಯಿಸಿದ್ದಾರೆ. ಮತದಾನದ ಸಂಪೂರ್ಣ ಮಾಹಿತಿ ಇಲ್ಲಿದೆ.

ನವದೆಹಲಿ(ಆ.06): ಭಾರತದ 16ನೇ ಉಪ ರಾಷ್ಟ್ರಪತಿ ಆಯ್ಕೆಗೆ ಇಂದು ಚುನಾವಣೆ ನಡೆಯುತ್ತಿದೆ. ಈಗಾಗಲೇ ಮತದಾನ ಆರಂಭಗೊಂಡಿದೆ. ಎನ್‌ಡಿಎ ಅಭ್ಯರ್ಥಿ ಜಗದೀಪ್ ಧನಕರ್ ಹಾಗೂ ಪ್ರತಿಪಕ್ಷಗಳ ಅಭ್ಯರ್ಥಿ ಮಾರ್ಗರೆಟ್ ಆಳ್ವ ನಡುವೆ ಪೈಪೋಟಿ ಎರ್ಪಟ್ಟಿದೆ. ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸೇರಿದಂತೆ ಗಣ್ಯರು ಮತ ಚಲಾಯಿಸಿದ್ದಾರೆ. ಸಂಸತ್ತಿಗೆ ಆಗಮಿಸಿದ ಪ್ರಧಾನಿ ಮೋದಿ, ಮತ ಚಲಾಯಿಸಿದ್ದಾರೆ.

ಇತ್ತ ವ್ಹೀಲ್ ಚೇರ್ ಮೂಲಕ ಮತದಾನಕ್ಕೆ ಆಗಮಿಸಿದ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಮತ ಚಲಾಯಿಸಿದ್ದಾರೆ. ದೇಶದ ಎಲ್ಲಾ ಭಾಗದಲ್ಲಿ ಮತದಾನ ಆರಂಭಗೊಂಡಿದ್ದು, ಬಿರುಸಿನ ಮತದಾನ ನಡೆಯುತ್ತಿದೆ. ಕೇಂದ್ರ ಸಚಿವ ಜೇತೇಂದ್ರ ಸಿಂಗ್, ಅಶ್ವಿನಿ ವೈಷ್ಣವ್ ಸಂಸತ್ತಿನಲ್ಲಿ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಪಾಲ್ಗೊಂಡು ಮತ ಚಲಾಯಿಸಿದ್ದಾರೆ. ಕಾಂಗ್ರೆಸ್ ಸಂಸತ ಕಾರ್ತಿ ಚಿದಂಬರನ್, ಡಿಎಂಕೆ ಸಂಸದ ದಯಾನಿಧಿ ಮಾರನ್, ಡಿಎಂಕೆ ಸಂಸದಾ ತಿರುಚಿ ಶಿವಾ ಪಾರ್ಲಿಮೆಂಟ್ ಸಂಭಾಗಣದಲ್ಲಿ ಮತ ಚಲಾಯಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ರಾಜೀವ್ ಚಂದ್ರಶೇಖರ್ ಸೇರಿದಂತೆ ಹಲವರು ಮತ ಚಲಾಯಿಸಿದ್ದಾರೆ. 

ಜಗದೀಪ್ ಧನಕರ್ ಹಾಗೂ ಮಾರ್ಗರೆಟ್ ಆಳ್ವ ನಡುವೆ ಸ್ಪರ್ಧೆ: ಎನ್‌ಡಿಎ ಉಪ ರಾಷ್ಟ್ರಪತಿ ಅಭ್ಯರ್ಥಿ, ಪಶ್ಚಿಮ ಬಂಗಾಳ ಮಾಜಿ ರಾಜ್ಯಪಾಲ ಜಗದೀಪ್ ಧನಕರ್ ಆಯ್ಕೆ ಬಹುತೇಕ ಖಚಿತಗೊಂಡಿದೆ. ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟದ ಬೆಂಬಲವಿರುವ ಕಾರಣ ಧನಕರ್ ಆಯ್ಕೆ ಖಚಿತವಾಗಿದೆ. ಇತ್ತ ಮಾರ್ಗರೆಟ್ ಆಳ್ವಗೆ ವಿಪಕ್ಷಗಳ ಮೈತ್ರಿಕೂಟದ ಸಂಪೂರ್ಣ ಮತಗಳು ಬರವು ನಿರೀಕ್ಷೆ ಇಲ್ಲ. ಈಗಾಗಲೇ ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಹಾಗೂ ಮಾರ್ಗರೆಟ್ ಆಳ್ವ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಟಿಎಂಸಿ ಮತಗಳು ಆಳ್ವಾಗೆ ಸಿಗುವ ಸಾಧ್ಯತೆಗಳಿಲ್ಲ.

ಅಭ್ಯರ್ಥಿ ಯಾರು? ಬಿಜೆಪಿ ಅಣಕಿಸಿದ ಕಾಂಗ್ರೆಸ್‌ಗೆ ಸಂಕಷ್ಟ ತಂದಿಟ್ಟ ಜೈರಾಮ್ ರಮೇಶ್‌!

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 780 ಸದಸ್ಯರಿಗೆ ಮತದ ಹಕ್ಕಿದೆ. 391 ಮತ ಪಡೆದವರು ಗೆಲುವು ಸಾಧಿಸುತ್ತಾರೆ. ಉಭಯ ಸದನಗಳಲ್ಲಿ ಬಿಜೆಪಿಯೊಂದೇ 394 ಸ್ಥಾನ ಹೊಂದಿರುವ ಕಾರಣ ದೇಶದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್‌ ಧನಖಡ್‌ ಆಯ್ಕೆ ಖಚಿತವಾಗಿದೆ. ಧನಖಡ್‌ ವಿರುದ್ಧವಾಗಿ ವಿಪಕ್ಷಗಳಿಂದ ಕಾಂಗ್ರೆಸ್‌ ನಾಯಕಿ, ಕರ್ನಾಟಕ ಮೂಲದ ಮಾರ್ಗರೆಟ್‌ ಆಳ್ವ ಕಣಕ್ಕೆ ಇಳಿದಿದ್ದಾರೆ.

ದೇಶದ ಪ್ರಮುಖ ಹುದ್ದೆಗಳಲ್ಲಿ ದಕ್ಷಿಣ ಭಾರತದವರಿಗೂ ಪ್ರಾತಿನಿಧ್ಯ ಬೇಕು. ಈ ಚುನಾವಣೆಗೆ ವಿಪ್‌ ಜಾರಿಯಾಗುವುದಿಲ್ಲ. ಗುಪ್ತ ಮತದಾನ ಇರುವ ಕಾರಣ ಬಿಜೆಪಿಯನ್ನೂ ಒಳಗೊಂಡಂತೆ ಹೆಚ್ಚಿನ ಸಂಖ್ಯೆಯಲ್ಲಿ ನನ್ನನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ಉಪ ರಾಷ್ಟ್ರಪತಿ ಅಭ್ಯರ್ಥಿ  ಮಾರ್ಗರೇಟ್‌ ಆಳ್ವಾ ಹೇಳಿದ್ದಾರೆ.  ನಾನು ಕರ್ನಾಟಕದ ಮಗಳು. ನನಗೆ ಎಲ್ಲರ ಆಶೀರ್ವಾದ ಬೇಕು. ಚುನಾವಣಾ ವಾತಾವರಣ ಉತ್ತಮವಾಗಿದೆ. ಪ್ರಚಾರ ಕಾರ್ಯ ಈಗ ಸವಾಲಾಗಿದೆ. ಉಪರಾಷ್ಟ್ರಪತಿ ಅಭ್ಯರ್ಥಿ ಸ್ಥಾನವನ್ನು ನಾನು ಪಕ್ಷದಲ್ಲಿ ಕೇಳಿಲ್ಲ. ಅವರಾಗಿಯೇ ಕೊಟ್ಟಿದ್ದಾರೆ ಎಂದರು.

ಉಪ ರಾಷ್ಟ್ರಪತಿ ಅಭ್ಯರ್ಥಿ ಮಾರ್ಗರೆಟ್ ಆಳ್ವಾಗೆ ಸೈಬರ್ ವಂಚನೆ!?

click me!