
ಬೆಂಗಳೂರು(ಆ.06): ಭಾರತದ ರಾಜಕೀಯದಲ್ಲಿ ಸುಷ್ಮಾ ಸ್ವರಾಜ್ ಹೆಸರು ಯಾವತ್ತಿಗೂ ಅಜರಾಮರ. ಕೇವಲ ರಾಜಕೀಯದಲ್ಲಿ ಮಾತ್ರವಲ್ಲ, ಭಾರತೀಯರಲ್ಲಿ ಹೃದಯದಲ್ಲಿ ಸುಷ್ಮಾ ಸ್ವರಾಜ್ ಹಚ್ಚ ಹಸುರಾಗಿದ್ದಾರೆ. ಭಾರತದ ವಿದೇಶಾಂಗ ಮಂತ್ರಿಯಾಗಿ ಸುಷ್ಮಾ ಸ್ವರಾಜ್ ಆಡಳಿತ ಕೇವಲ ಭಾರತ ಮಾತ್ರವಲ್ಲ, ವಿದೇಶದಲ್ಲೂ ಅಷ್ಟೇ ಸಂಚಲನ ಸೃಷ್ಟಿಸಿದ್ದರು. ಪ್ರತಿಯೊಬ್ಬ ಪ್ರಜೆಗೂ ವಿದೇಶಾಂಗ ಇಲಾಖೆ ಕೈಗೆ ಸಿಗುವಂತೆ ಮಾಡಿದ್ದರು. ಒಂದು ಸಣ್ಣ ಟ್ವೀಟ್ ಮಾಡಿದ್ದರೆ ಸಾಕು, ಮರುಕ್ಷಣದಲ್ಲೇ ಸಮಸ್ಯೆಗೆ ಪರಿಹಾರ ಸಿಗುತ್ತಿತ್ತು. ಈ ರೀತಿಯ ಹೊಸ ಆಡಳಿತ ಹಾಗೂ ಹೊಸತನ ನೀಡಿ ವಿದೇಶಾಂಗ ಇಲಾಖೆಗೆ ಹೊಸ ಸ್ವರ್ಶ ನೀಡಿದ ಹೆಗ್ಗಳಿಗೆ ಸುಷ್ಮಾ ಸ್ವರಾಜ್‌ಗೆ ಸಲ್ಲಲಿದೆ. ಇಂದು ಸುಷ್ಮಾ ಸ್ವರಾಜ್ 3ನೇ ವರ್ಷದ ಪುಣ್ಯತಿಥಿ. ದೇಶಾದ್ಯಂತ ಬಿಜೆಪಿ ಕಾರ್ಯಕರ್ತರು, ನಾಯಕರು ಸುಷ್ಮಾ ಸ್ವರಾಜ್‌ಗೆ ಗೌರವ ನಮನ ಸಲ್ಲಿಸಿದ್ದಾರೆ.
ಜನರ ಯಾವುದೇ ಸಮಸ್ಯೆಗೆ ತಕ್ಷಣ ಸ್ಪಂದಿಸುವ ರಾಜಕಾರಣಿ ಎಂದೇ ಸುಷ್ಮಾ ಗುರುತಿಸಿಕೊಂಡಿದ್ದಾರೆ. ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಭಾರತೀಯರಿಗೆ ತಕ್ಷಣವೇ ನೆರವಿಗೆ ಧಾವಿಸುವ ವಿದೇಶಾಂಗ ಸಚಿವೆ ಅನ್ನೋ ಹೆಗ್ಗಳಿಕೆ ಸುಷ್ಮಾ ಸ್ವರಾಜ್ ಪಾತ್ರರಾಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಅದರಲ್ಲೂ ಟ್ವಿಟರ್ ಮೂಲಕ ವಿದೇಶ ಯಾವುದೇ ಮೂಲೆಯಲ್ಲಿ ಸಂಕಷ್ಟದಲ್ಲಿರುವ ಭಾರತೀಯನಿಗೆ ಮರುಕ್ಷಣದಲ್ಲೇ ನೆರವಾಗೋ ಮೂಲಕ ಮಿಂಚಿನ ಕಾರ್ಯಚರಣೆ ಹಾಗೂ ತಕ್ಷಣದ ಪರಿಹಾರ ನೀಡುವುದರಲ್ಲಿ ಸುಷ್ಮಾ ಎತ್ತಿದ ಕೈ.
Celebrity Style : ಸುಷ್ಮಾ ಸ್ವರಾಜ್ ಸೀರೆಗಿತ್ತು ಜ್ಯೋತಿಷ್ಯದ ನಂಟು!
ಇಸ್ಲಾಮಿಕ್ ಸಹಕಾರ ಸಂಘಟನೆ(OIC) ಸಮ್ಮಿಟ್‌ನಲ್ಲಿ ಗೌರವ ಅತಿಥಿಯಾಗಿ ಸುಷ್ಮಾ ಸ್ವರಾಜ್ ಭಾಷಣ ಮಾಡಿದ್ದಾರೆ. ಮೂಲಕ OIC ಶೃಂಗಸಭೆಯಲ್ಲಿ ಭಾಷಣ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವಿಶೇಷ OIC ಪ್ರಮುಖ ಸದಸ್ಯ ರಾಷ್ಟ್ರ ಪಾಕಿಸ್ತಾನ ಪ್ರಬಲ ವಿರೋಧ ಹಾಗೂ ಬಹಿಷ್ಕಾರದ ನಡುವೆ ನಿರ್ಭೀತವಾಗಿ ಸುಷ್ಮಾ ಭಾಷಣ ಮಾಡಿದ್ದರು. ವಿದೇಶಾಂಗ ಮಂತ್ರಿಯಾಗಿ ಸುಷ್ಮಾ ಸ್ವರಾಜ್ ಮಾಲ್ಡೀವ್ಸ್‌ನಲ್ಲಿನ ಬಿಕ್ಕಟ್ಟನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ನೇಪಾಳ ದಿಗ್ಬಂಧನ, ಚೀನಾದ ಡೋಕ್ಲಾಮ್ ಬಿಕ್ಕಟ್ಟು, ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ವಾದ ಸೇರಿದಂತೆ ಹಲವು ಸಂಕಷ್ಟ ಹಾಗೂ ಬಿಕ್ಕಟ್ಟುಗಳನ್ನು ಅತ್ಯಂತ ಯಶಸ್ವಿಯಾಗಿ ನಿಭಾಯಿಸಿದ್ದರು.
ಮಂಗಳ ಗ್ರಹದಲ್ಲಿ ಸಿಲುಕಿದ್ರೂ ಭಾರತ ನಿಮ್ಮನ್ನು ರಕ್ಷಿಸುತ್ತೆ: ಸುಷ್ಮಾ ಸ್ವರಾಜ್ ಮಾಡಿದ್ದ ಟ್ವೀಟ್ ವೈರಲ್!
ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿಯಲ್ಲಿ ವಿದೇಶಾಂಗ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿದ ಸುಷ್ಮಾ ಸ್ವರಾಜ್, ಎರಡನೇ ಅವಧಿಗೆ ಆರೋಗ್ಯ ಸಮಸ್ಯೆ ಕಾರಣದಿಂದ ದೂರ ಉಳಿದಿದ್ದರು. ಆದರೆ ಸುಷ್ಮಾ ಸ್ವರಾಜ್ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲೂ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 1996ರಲ್ಲಿ ಮಾಹಿತಿ ತಂತ್ರಜ್ಞಾನ ಸಚಿವೆಯಾಗಿ 13 ದಿನ ಅಧಿಕಾರ ನಡೆಸಿದ್ದರು. 2003 ರಿಂದ 2004ರಲ್ಲಿ ಅಟಲ್ ಬಿಹಾರಿ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದ ಸುಷ್ಮಾ ಸ್ವರಾಜ್ ಹೊಸದಾಗಿ 6 ಏಮ್ಸ್ ಆಸ್ಪತ್ರೆ ತೆರೆದು ಜನರಿಗೆ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ