ಕಾರ್ಮಿಕರ ಬಳಿ ತಲುಪಿದ ಎನ್‌ಡಿಆರ್‌ಎಫ್‌ ತಂಡ!

By Santosh NaikFirst Published Nov 28, 2023, 10:00 PM IST
Highlights

Silkyara tunnel rescue ಬರೋಬ್ಬರಿ 17 ದಿನಗಳ ಕಾಲ ಸುರಂಗ ಮಾರ್ಗದ ಒಳಗೆ ಸಿಲುಕಿದ್ದ 41 ಕಾರ್ಮಿಕರನ್ನು ಮಂಗಳವಾರ ಯಶಸ್ವಿಯಾಗಿ ಹೊರತರಲಾಗಿದೆ. ಕಾರ್ಮಿಕರು ಹೊರಬರುತ್ತಿದ್ದಂತೆ ರಕ್ಷಣಾ ಕಾರ್ಯಚರಣೆಯಲ್ಲಿ ಇದ್ದವರ ಸಂಭ್ರಮ ಮುಗಿಲು ಮುಟ್ಟಿತ್ತು.
 

ಉತ್ತರಕಾಶಿ (ನ.28): ಇನ್ನೇನು ಬದುಕುವ ಯಾವ ಮಾರ್ಗವೂ ಇಲ್ಲದೇ ಸಾವೇ ದಿಕ್ಕು ಎಂದು ಕಣ್ಣೀರಿಟ್ಟಿದ್ದ 41 ಕಾರ್ಮಿಕರನ್ನು ರಕ್ಷಿಸುವಲ್ಲಿ ಕೊನೆಗೂ ಸರ್ಕಾರ ಯಶಸ್ವಿಯಾಗಿದೆ. 17 ದಿನಗಳ ನಿರಂತರ ಪ್ರಯತ್ನದಿಂದಾಗಿ 41 ಕಾರ್ಮಿಕರು ಈಗ ಸಾವನ್ನೇ ಗೆದ್ದು ಬಂದಿದ್ದಾರೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ಕಾರ್ಮಿಕರನ್ನು ರಕ್ಷಿಸುವ ನಿಟ್ಟಿನಲ್ಲಿ ಕೊರೆಯುತ್ತಿದ್ದ ಸುರಂಗ ಕೊನೇ ಹಂತಕ್ಕೆ ಬಂದಿತು. ಅದಾದ ಕೆಲವೇ ಹೊತ್ತಿನಲ್ಲಿ ಕಾರ್ಮಿಕರು ಒಬ್ಬೊಬ್ಬರಾಗಿ ಸುರಂಗದಿಂದ ಹೊರಬಂದರು. ಸುರಂಗದ ಒಳಗಡೆಯೇ ಕಾರ್ಮಿಕರನ್ನು ವೈದ್ಯಕೀಯ ತಪಾಸಣೆ ಮಾಡಿ ಬಳಿಕ ಅವರನ್ನು ಹೊರತರಲಾಗಿದೆ. ರಕ್ಷಣಾ ಕಾರ್ಯಾಚರಣೆಯ ಕಾರಣದಿಂದಾ ಸುರಂಗದೊಳಗೆ ತಾತ್ಕಾಲಿಕ ವೈದ್ಯಕೀಯ ಸೌಲಭ್ಯವನ್ನು ಮಾಡಲಾಗಿತ್ತು. ಸಿಕ್ಕಿಬಿದ್ದ ಕಾರ್ಮಿಕರನ್ನು ಹೊರತಂದ ಬಳಿಕ, ಈ ಸ್ಥಳದಲ್ಲಿ ಆರೋಗ್ಯ ತರಬೇತಿ ನೀಡಲು ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಸಮಸ್ಯೆ ಕಂಡುಬಂದಲ್ಲಿ ಆರೋಗ್ಯ ಇಲಾಖೆಯಿಂದ 8 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ವೈದ್ಯರು ಹಾಗೂ ತಜ್ಞರ ತಂಡವನ್ನು ನಿಯೋಜಿಸಲಾಗಿದೆ.ಒಟ್ಟು ಈ ಕಾರ್ಯಾಚರಣೆ 395 ಗಂಟೆಗಳ ಕಾಲ ನಡೆದಿದೆ. ಮೊದಲ ಹಂತದಲ್ಲಿ ಐವರು ಕಾರ್ಮಿಕರು ಹೊರ ತರಲಾಯಿತು.

The first worker among the 41 workers trapped inside Silkyara tunnel in Uttarakhand since November 12, has been successfully rescued. pic.twitter.com/rUAAA6TRDp

— ANI (@ANI)

 

click me!