ತಪ್ಪಿನಿಂದ ಪಾಠ ಕಲಿತ ಸರ್ಕಾರ, ಸಿಲ್‌ಕ್ಯಾರಾ ಬಳಿ ನೆಲಸಮ ಮಾಡಿದ್ದ ಮಂದಿರ ನಿರ್ಮಾಣಕ್ಕೆ ತೀರ್ಮಾನ!

By Santosh NaikFirst Published Nov 28, 2023, 9:49 PM IST
Highlights

ಸಿಲ್‌ಕ್ಯಾರಾದಲ್ಲಿ ಸುರಂಗ ಕುಸಿತ ಪ್ರಕರಣವಾದಾಗಲೇ ಸ್ಥಳೀಯ ಜನರು ಅಲ್ಲಿದ್ದ ಶಿವ ದೇವಸ್ಥಾನವನ್ನು ನೆಲಸಮ ಮಾಡಿದ್ದೇ ಈ ದುರಂತಕ್ಕೆ ಕಾರಣ ಎಂದು ಹೇಳಿದ್ದರು. ಈಗ ಉತ್ತರಾಖಂಡ ಸರ್ಕಾರ ಕೂಡ ನೆಲಸಮವಾಗಿದ್ದ ಪ್ರದೇಶದಲ್ಲಿ ಮಂದಿರವನ್ನು ನಿರ್ಮಾಣ ಮಾಡುವುದಾಗಿ ಹೇಳಿದೆ.
 

ಉತ್ತರಕಾಶಿ (ನ.28): ನಂಬಿಕೆ, ಮೂಢನಂಬಿಕೆ ಇದಾವುದೂ ಪ್ರಶ್ನೆಯಲ್ಲ. ಸಿಲ್‌ಕ್ಯಾರಾದಲ್ಲಿ ಸುರಂಗ ಕುಸಿತ ಘಟನೆ ಆದಾಗಲೇ, ಸ್ಥಳೀಯ ಜನರು ಅಲ್ಲಿದ್ದ ಶಿವ ದೇವಸ್ಥಾನವನ್ನು ಕೆಡವಿ ಸುರಂಗ ನಿರ್ಮಾಣ ಮಾಡಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಿದ್ದರು. ಇದನ್ನು ನಾವು ನಂಬುತ್ತೇವೆ. ನಿಮ್ಮ ನಂಬಿಕೆ ನಿಮಗೆ ಬಿಟ್ಟಿದ್ದು ಎಂದೂ ಹೇಳಿದ್ದರು. ಸುರಂಗದ ಒಳಗೆ ಸಿಲುಕಿದ್ದ ಕಾರ್ಮಿಕರನ್ನು ತಲುಪುವುದು ಹೇಗೆ ಎನ್ನುವ ಯೋಚನೆಯಲ್ಲಿರುವಾಗಲೇ, ನೆಲಸಮ ಮಾಡಿದ್ದ ಪ್ರದೇಶದಲ್ಲಿ ಪುಟ್ಟ ಮಂದಿರವನ್ನು ನಿರ್ಮಾಣ ಮಾಡಲಾಗಿತ್ತು. ಕಾಕತಾಳೀಯ ಎನ್ನುವಂತೆ ಅದೇ ದಿನ ಕಾರ್ಮಿಕರೊಂದಿಗೆ ಸಂಪರ್ಕ ಸಾಧಿಸಲು ರಕ್ಷಣಾ ತಂಡಕ್ಕೆ ಸಾಧ್ಯವಾಗಿತ್ತು. ಈಗ ಎಲ್ಲಾ 41 ಕಾರ್ಮಿಕರನ್ನು 17 ದಿನಗಳ ಬಳಿಕ ರಕ್ಷಣೆ ಮಾಡಲಾಗಿದೆ. ಇದರ ಬೆನ್ನಲ್ಲಿಯೇ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರಾಖಂಡದ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ, ನೆಲಸಮ ಮಾಡಿದ್ದ ಮಂದಿರವನ್ನು ಅದೇ ಪ್ರದೇಶದಲ್ಲಿ ನಿರ್ಮಾಣ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅದರೊಂದಿಗೆ ಎಲ್ಲಾ ಕಾರ್ಮಿಕರಿಗೂ ತಲಾ 1 ಲಕ್ಷ ರೂಪಾಯಿ ಪರಿಹಾರ ಹಣವನ್ನು ಘೋಷಣೆ ಮಾಡಿದ್ದಾರೆ.

'ಆರಂಭಿಕ ಹಂತದಲ್ಲಿ ನಮಗೆ ತುಂಬಾ ಭಯವಾಗಿತ್ತು. ಯಾವಾಗ ಅವರ ಜೊತೆ ಮಾತುಕತೆ ಆಡಿದೆವೋ ಆಗ ನಮಗೆ ಭರವಸೆ ಬಂತು.ಮೊದಲು ಚಿಕ್ಕವರನ್ನ ಕರೆತರಲು ನಿರ್ಧಾರ ಮಾಡಲಾಗಿತ್ತು. ನಂತರ ದೊಡ್ಡವರು ಟೀಂ ಲೀಡ್ ಮಾಡೋ ಐದು ಜನ ಬರಲು ನಿರ್ಧಾರವಾಗಿತ್ತು. ಮೊದಲು ನನಗೆ ರಕ್ಷಣಾ ಕಾರ್ಯಾಚರಣೆ ನಿಂತ ಕರೆ ಬಂದಾಗ ಭಯವಾಗಿತ್ತು. ಸದ್ಯ ಎಲ್ಲರನ್ನ 24 ಗಂಟೆ ನಿಗಾದಲ್ಲಿ ಇಡಲಾಗುವುದು. ಯಾರು ತೊಂದರೆಯಲ್ಲಿಲ್ಲ ಎಲ್ಲರು ಆರಾಮಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ದೇಶ ಮತ್ತು ವಿದೇಶದ ಹಲವಾರು ಜನ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ಧಾಮಿ ಹೇಳಿದ್ದಾರೆ.

ನೆಲಸಮ ಮಾಡಿದ್ದ ಮಂದಿರ ನಿರ್ಮಾಣಕ್ಕೆ ನಾವು ತೀರ್ಮಾನ ಮಾಡಿದ್ದೇವೆ ದೆಹಲಿ ಮತ್ತು ಗೋರಖ್‌ಪುರದಿಂದ ಬಂದಿರುವ ಕಾರ್ಮಿಕರಿಂದ ರಾಟ್‌ ಮೈನಿಂಗ್ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ದೀಪಾವಳಿಯ ಮಾರನೇ ದಿನದಿಂದ ನಾನು ನಿರಂತರವಾಗಿ ಇಲ್ಲೆ ಇದ್ದೆ. ಇಲ್ಲಿಂದಲೆ ನಾನು ರಾಜ್ಯದ ಇತರ ಕಾರ್ಯಮಾಡಿದ್ದೇನೆ. ರಾಜ್ಯ ಸರ್ಕಾರದಿಂದ ಎಲ್ಲಾ ಕಾರ್ಮಿಕರಿಗೆ ತಲಾ ಒಂದು ಲಕ್ಷ ನೀಡಲಾಗುವುದು. ನಾಳೆ ಚೆಕ್ ಮೂಲಕ ಪರಿಹಾರ ನೀಡಲಿದ್ದೇನೆ ಎಂದು ಹೇಳಿದ್ದಾರೆ.

Breaking: 17 ದಿನಗಳ ಬಳಿಕ ಸುರಂಗದಿಂದ ಹೊರಬಂದ ಕಾರ್ಮಿಕರು!

ಎಲ್ಲರಿಗೂ 15 ದಿನ ಅಥವಾ ಒಂದು ತಿಂಗಳು ಮನೆಗೆ ಹೋಗಲು ಅವಕಾಶ ನೀಡಿದ್ದೇವೆ. ರಕ್ಷಣಾ ಕಾರ್ಯಾಚರಣೆಯ ವೆಚ್ಚ ಎಷ್ಟೆ ಆದರೂ ನಾವು ನೀಡಲು ತೀರ್ಮಾನ ಮಾಡಿದ್ದೆವು. ಪ್ರಧಾನಿ ಮೋದಿ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದರು. ನಮಗೆ ಕಾರ್ಮಿಕರ ಜೀವ ಮುಖ್ಯವಾಗಿತ್ತು ಎಂದು ಧಾಮಿ ಹೇಳಿದ್ದಾರೆ.

Uttarkashi Tunnel Rescue: ಕಾರ್ಮಿಕರ ರಕ್ಷಣೆಗೆ ನೆರವಾಯ್ತು ನಿಷೇಧಿತ Rat Hole ಮೈನಿಂಗ್‌, ಇದಕ್ಕೆ ನಿಷೇಧ ಯಾಕೆ?

click me!