ಮದುವೆ ಎಂದ ಮೇಲೆ ವೇದಿಕೆಯಲ್ಲಿ ವಧು ವರರು ಡಾನ್ಸ್ ಮಾಡುವುದು ಮುತ್ತಿಕ್ಕುವುದು ತಬ್ಬಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಮದುವೆ ಮಂಟಪದಲ್ಲೇ ವರ ವಧುವಿಗೆ ಮುತ್ತಿಕ್ಕಿದ್ದು, ಇದರಿಂದ ಮದುವೆ ಮನೆ ರಣಾಂಗಣವಾಗಿದೆ.
ಉತ್ತರ ಪ್ರದೇಶ: ಮದುವೆ ಎಂದ ಮೇಲೆ ವೇದಿಕೆಯಲ್ಲಿ ವಧು ವರರು ಡಾನ್ಸ್ ಮಾಡುವುದು ಮುತ್ತಿಕ್ಕುವುದು ತಬ್ಬಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಆದರೆ ಉತ್ತರ ಪ್ರದೇಶದಲ್ಲಿ ಮದುವೆ ಮಂಟಪದಲ್ಲೇ ವರ ವಧುವಿಗೆ ಮುತ್ತಿಕ್ಕಿದ್ದು, ಇದರಿಂದ ಮದುವೆ ಮನೆ ರಣಾಂಗಣವಾಗಿದೆ. ಎರಡು ಕಡೆಯವರು ಕ್ಷುಲ್ಲಕ ಕಾರಣಕ್ಕೆ ಕೈಗೆ ಸಿಕ್ಕಿದ ವಸ್ತುಗಳಿಂದ ಹೊಡೆದಾಡಿಕೊಂಡಿದ್ದು, ಆಸ್ಪತ್ರೆ ಸೇರಿದ್ದಾರೆ. ಉತ್ತರ ಪ್ರದೇಶದ ಹಾಪುರ್‌ನ ಅಶೋಕ ನಗರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಎರಡು ಕಡೆಯ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ತೋರಿಸುವುದು ಈಗಿನ ತಲೆಮಾರಿಗೆ ಕಾಮನ್ ಆದರೆ ಇದರಿಂದ ದೊಡ್ಡ ಯುದ್ಧವೇ ನಡೆಯುತ್ತದೆ ಎಂದು ಆ ಜೋಡಿ ಊಹೆಯೂ ಮಾಡಿರಲಿಲ್ಲವೆಂದೆನಿಸುತ್ತಿದೆ. ಮದುವೆಯ ಮಧ್ಯೆಯೇ ವರ ತನ್ನ ಪ್ರೀತಿಯ ವಧುವಿಗೆ ಮುತ್ತಿಕ್ಕಿದ್ದಾನೆ. ಇದರಿಂದ ಸಿಟ್ಟಿಗೆದ್ದ ವಧುವಿನ ಕಡೆಯವರು ಸ್ಟೇಜ್‌ನಲ್ಲಿಯೇ ವರನ ಕಡೆಯವರನ್ನು ಥಳಿಸಿದ್ದಾರೆ.
ಸಂಭ್ರಮಕ್ಕೆ ಹಚ್ಚಿದ ಪಟಾಕಿಯಿಂದ ಮದ್ವೆ ಮನೆ ಆಯ್ತು ಸ್ಮಶಾನ: ಮಕ್ಕಳು ಸೇರಿ 6 ಜನ ಬಲಿ
ವೇದಿಕೆಯಲ್ಲಿ ಹಾರ ಬದಲಾಯಿಸುವ ವೇಳೆ ತನ್ನ ಮನದನ್ನೆಗೆ ವರ ಮುತ್ತಿಟ್ಟಿದ್ದಾನೆ. ಆದರೆ ಇದು ವಧುವಿನ ಕುಟುಂಬವನ್ನು ಕೆರಳಿಸಿದೆ, ಎರಡು ಕಡೆಯವರ ಮಧ್ಯೆ ಮೊದಲಿಗೆ ವಾಗ್ವಾದ ಆರಂಭವಾಗಿದೆ. ಇದಾದ ಕ್ಷಣದಲ್ಲೇ ವಧುವಿನ ಕಡೆಯವರೆಲ್ಲರೂ ದೊಣ್ಣೆ ಹಿಡಿದು ವೇದಿಕೆಗೆ ಹತ್ತಿದ್ದು, ಹುಡುಗನ ಕಡೆಯವರನ್ನು ಥಳಿಸಲು ಆರಂಭಿಸಿದ್ದಾರೆ. ಈ ತಳ್ಳಾಟ ನೂಕಾಟದಲ್ಲಿ ವಧುವಿನ ತಂದೆಯೂ ಸೇರಿದಂತೆ 6 ಜನ ಗಾಯಗೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಬಂದಿದ್ದು, ಎರಡು ಕುಟುಂಬದ ಒಟ್ಟು 7 ಜನರನ್ನು ಬಂಧಿಸಿದ್ದಾರೆ. ಅಲ್ಲದೇ ಹಡೆದಾಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆ ಬಗ್ಗೆ ಪೊಲೀಸರು ಹೇಳುವಂತೆ ವಧುವಿನ ತಂದೆ ತಮ್ಮ ಇಬ್ಬರು ಮಕ್ಕಳ ಮದುವೆಯನ್ನು ಒಂದೇ ದಿನ ಆಯೋಜಿಸಿದ್ದರು. ಮೊದಲ ಮಗಳ ಮದುವೆ ಯಾವುದೇ ತೊಂದರೆ ಇಲ್ಲದೇ ಎರಡನೇ ಮದುವೆ ಬೇರೆಯದೇ ತಿರುವು ಪಡೆದು ಹೊಡೆದಾಟಕ್ಕೆ ಕಾರಣವಾಯ್ತು.
ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!
ವಧುವಿನ ಕುಟುಂಬದವರು ಹೇಳುವ ಪ್ರಕಾರ, ವರ ವಧುವಿಗೆ ಒತ್ತಾಯಪೂರ್ವಕವಾಗಿ ವೇದಿಕೆ ಮೇಲೆಯೇ ಮುತ್ತಿಟ್ಟ, ಅಲ್ಲದೇ ಪರಸ್ಪರ ಹಾರ ಬದಲಾಯಿಸಿದ ನಂತರ ಕಿಸ್ ಮಾಡುವಂತೆ ಒತ್ತಾಯಿಸಿದ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಾಪುರ್‌ನ ಹಿರಿಯ ಪೊಲೀಸ್ ಅಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ಪ್ರತಿಕ್ರಿಯಿಸಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾರೂ ಲಿಖಿತ ದೂರು ನೀಡಿಲ್ಲ, ದೂರು ನೀಡಿದ್ದಲ್ಲಿ ತನಿಖೆ ಮಾಡಲಾಗುವುದು ಎಂದು ಹೇಳಿದ್ದಾರೆ. ಆದರೆ 6 ಜನರ ವಿರುದ್ಧ ಸಾರ್ವಜನಿಕರ ಶಾಂತಿಗೆ ಭಂಗ ತಂದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.