Latest Videos

ಹೆಚ್ಚುತ್ತಿದೆ ಬಿಸಿಲಿನ ತಾಪಮಾನ, ಸುಡುವ ಬಿಸಿಲಲ್ಲಿ ಹಪ್ಪಳ ಹುರಿದ ಯೋಧನ ವೀಡಿಯೋ ವೈರಲ್

By Vinutha PerlaFirst Published May 23, 2024, 1:00 PM IST
Highlights

ದಕ್ಷಿಣಭಾರತದಲ್ಲಿ ವಿಪರೀತ ಮಳೆಯ ಕಾಟವಾದರೆ, ವಾಯುವ್ಯ ಭಾರತದಲ್ಲಿ ಸಿಕ್ಕಾಪಟ್ಟೆ ಬಿಸಿಲ ಧಗೆ. ವಿಪರೀತ ಬಿಸಿಲಿನ ತಾಪ ಜನರನ್ನು ಕಂಗೆಡಿಸುತ್ತಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಮರಳಿನಿಂದ ಮುಚ್ಚಿ ಪಾಪಡ್‌ನ್ನು ಹುರಿಯುತ್ತಿರುವ ವೀಡಿಯೋ ವೈರಲ್ ಆಗಿದೆ.

ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭೀಕರ ಗಾಳಿ ಮಳೆಯಿಂದ ಹಲವು ಅನಾಹುತಗಳೇ ಉಂಟಾಗುತ್ತಿದೆ. ಆದರೆ ಇತ್ತ ವಾಯುವ್ಯ ಭಾರತದಲ್ಲಿ ಬಿಸಿ ಗಾಳಿಯ ಹೊಡೆತದಿಂದ ಜನರು ಕಂಗಾಲಾಗಿದ್ದಾರೆ. ವಿಪರೀತ ಬಿಸಿಲಿನ ತಾಪ ಜನರನ್ನು ಕಂಗೆಡಿಸುತ್ತಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಮರಳಿನಿಂದ ಮುಚ್ಚಿ ಪಾಪಡ್‌ನ್ನು ಹುರಿಯುತ್ತಿರುವ ವೀಡಿಯೋ ವೈರಲ್ ಆಗಿದೆ. ಬಿಕಾನೇರ್ ಸಾಮಾನ್ಯವಾಗಿ ರಾಜಸ್ಥಾನದ ಅತ್ಯಂತ ಬಿಸಿಯಾದ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಈ ವರ್ಷ ತಾಪಮಾನ 46 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಿದೆ.

ಎಕ್ಸ್‌ನಲ್ಲಿ ಯೋಧನ ಈ ವೀಡಿಯೋವನ್ನು ಶೇರ್ ಮಾಡಲಾಗಿದೆ. ವೈರಲ್ ವೀಡಿಯೊ ಬಿಎಸ್‌ಎಫ್‌ ಜವಾನನೊಂದಿಗೆ ಪ್ರಾರಂಭವಾಗುತ್ತದೆ. ಮುಖವನ್ನು ಮುಚ್ಚಿಕೊಂಡಿರುವ ಯೋಧ, ಕೈಯಲ್ಲಿ ಬಂದೂಕನ್ನು ಹಿಡಿದಿದ್ದಾನೆ. ಮರಳಿನ ಕೆಳಗೆ ಪಾಪಡ್ ಇರಿಸುತ್ತಾನೆ. ಕೆಲವು ಸೆಕೆಂಡುಗಳ ಕಾಲ ಕಾಯುತ್ತಾನೆ. ನಂತರ ಮರಳಿನ ಕೆಳಗಿನಿಂದ ಹಪ್ಪಳವನ್ನು ಹೊರ ತೆಗೆಯುತ್ತಾನೆ. ಈಗ ಸಂಪೂರ್ಣವಾಗಿ ಪಾಪಡ್ ಹುರಿದ ಸ್ಥಿತಿಯಲ್ಲಿರೋದನ್ನು ನೋಡಬಹುದು.

ಹೀಟ್‌ವೇವ್‌ ಎಫೆಕ್ಟ್‌, ನೀರಲ್ಲ.. ಬೆಂಗಳೂರಿನಲ್ಲಿ ಶುರುವಾಯ್ತು ಬಿಯರ್‌ ಬರ!

'ನಮ್ಮ ಜವಾನರಿಗೆ ಸೆಲ್ಯೂಟ್. ಬಿಎಸ್‌ಎಫ್ ಜವಾನ್ ರಾಜಸ್ಥಾನದ ಬಿಕಾನೇರ್‌ನಲ್ಲಿ ಮರಳಿನಲ್ಲಿ ಪಾಪಡ್‌ನ್ನು ಹುರಿಯುತ್ತಿದ್ದಾನೆ. ಬಿಸಿಲಿನ ಶಾಖದಲ್ಲಿ ತಾಯಿನಾಡಿಗೆ ಸೇವೆ ಸಲ್ಲಿಸುತ್ತಿದ್ದಾನೆ' ಎಂಬ ಶೀರ್ಷಿಕೆ ನೀಡಿ ಎಕ್ಸ್‌ನಲ್ಲಿ ಪೋಸ್ಟ್ ಶೇರ್ ಮಾಡಲಾಗಿದೆ. ಸೋಷಿಯಲ್ ಮೀಡಿಯಾದಲ್ಲಿ 22,000ಕ್ಕೂ ಹೆಚ್ಚು ಮಂದಿ ಈ ವೀಡಿಯೋವನ್ನು ನೋಡಿದ್ದಾರೆ. ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಒಬ್ಬ ಬಳಕೆದಾರರು, 'ರಾಜಸ್ಥಾನದ ಪಶ್ಚಿಮ ವಲಯದಿಂದ ಗಂಗಾನಗರ, ಬಿಕಾನೇರ್, ಜೈಸಲ್ಮೇರ್, ಬಾರ್ಮರ್ ಬಿಎಸ್‌ಎಫ್‌ನಿಂದ ರಕ್ಷಿಸಲ್ಪಟ್ಟ ಅತ್ಯಂತ ಬಿಸಿಯಾದ ಮತ್ತು ಕಠಿಣ ವಲಯವಾಗಿದೆ. ಹವಾಮಾನ ಮತ್ತು ಪ್ರತ್ಯೇಕವಾದ ಭೂಪ್ರದೇಶವು ತುಂಬಾ ಒರಟಾಗಿರುತ್ತದೆ. BSF ಮರುಭೂಮಿಯ ಸೆಂಟಿನೆಲ್ ಗಾರ್ಡಿಯನ್ ಆಗಿದೆ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಇಂಥಾ ಕಠಿಣ ಪರಿಸ್ಥಿತಿಗಳಲ್ಲೂ ಜವಾನರು ಕರ್ತವ್ಯ ಸಲ್ಲಿಸುತ್ತಾರೆ. ಅವರಿಗೊಂದು ಸೆಲ್ಯೂಟ್' ಎಂದು ಪ್ರತಿಕ್ರಿಯಿಸಿದ್ದಾರೆ.

ತೀವ್ರ ಶಾಖದ ಅಲೆ ದುಷ್ಪರಿಣಾಮಕ್ಕೆ ಹಣ್ಣಿನ ಜ್ಯೂಸ್, ತರಕಾರಿ ತಿನ್ನುವುದು ಬೆಸ್ಟ್

ಭಾರತದ ಹವಾಮಾನ ಇಲಾಖೆ (IMD) ಮೇ 25ರ ವರೆಗೆ ವಾಯುವ್ಯ ಭಾರತದ ಹೆಚ್ಚಿನ ಭಾಗಗಳಲ್ಲಿ ತೀವ್ರತರವಾದ ಶಾಖದ ಪರಿಸ್ಥಿತಿಯನ್ನು ಊಹಿಸಿದೆ. IMD ಜೋಧ್‌ಪುರ ಮತ್ತು ಬಿಕಾನೇರ್‌ಗೆ ಹೀಟ್‌ವೇವ್ ರೆಡ್ ಅಲರ್ಟ್ ನೀಡಲಾಗಿದೆ.

Salute to Our Jawans

BSF Jawan roasting a papad in sand in Bikaner, Rajasthan along IB serving motherland in such heat.pic.twitter.com/FV4Mi7hJra

— Frontalforce 🇮🇳 (@FrontalForce)
click me!