
ಲಕ್ನೋ (ಜೂ.30): ಕಂತೆ ಕಂತೆ ಹಣದೊಂದಿಗೆ ಹೆಂಡತಿ, ಮಕ್ಕಳು ತೆಗೆದುಕೊಂಡಿದ್ದ ಸೆಲ್ಫಿ ಉತ್ತರ ಪ್ರದೇಶದ ಉನ್ನಾವೋದಲ್ಲಿ ಪೊಲೀಸ್ ಅಧಿಕಾರಿಯ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಹೆಂಡತಿ, ಮಕ್ಕಳು ತೆಗೆದ ಸೆಲ್ಫಿಯಿಂದ ಪೊಲೀಸ್ ಅಧಿಕಾರಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಉನ್ನಾವೋದ ಬೆಹ್ತಾ ಮುಜಾವರ್ ಪೊಲೀಸ್ ಸ್ಟೇಷನ್‌ನ ಎಸ್‌ಎಚ್‌ಓ ಆಗಿರುವ ರಮೇಶ್ ಚಂದ್ರ ಸಹಾನಿ ಅವರ ಇಬ್ಬರು ಮಕ್ಕಳು ಹಾಗೂ ಅವರ ಪತ್ನಿ 500 ರೂಪಾಯಿ ನೋಟುಗಳಿರುವ 27 ಬಂಡಲ್ ಹಣದೊಂದಿಗೆ ಫೋಟೋಗೆ ಪೋಸ್ ನೀಡಿದ್ದರು. ಫೋಟೋ ವೈರಲ್ ಆಗುತ್ತಿದ್ದ ಹಾಗೆ ಅಧಿಕಾರಿ ರಮೇಶ್ ಚಂದ್ರ ಸಹಾನಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ. ಸೆಲ್ಫಿ ಗಮನಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ತಕ್ಷಣ ತನಿಖೆಗೆ ಆದೇಶ ನೀಡಿದ್ದಾರೆ. ಈ ವೇಳೆ ಎಸ್‌ಎಚ್‌ಓ ರಮೇಶ್ ಚಂದ್ರ ಸಹಾನಿ ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಇದು 2021ರ ನವೆಂಬರ್ 14ರಂದು ತೆಗೆದಿದ್ದ ಚಿತ್ರ. ಕುಟುಂಬದ ಆಸ್ತಿಯನ್ನು ಮಾರಾಟ ಮಾಡಿದಾಗಿನ ಸೆಲ್ಫಿ ಎಂದು ಅಧಿಕಾರಿ ಹೇಳಿದ್ದಾರೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಫೋಟೋದಲ್ಲಿ ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಇಬ್ಬರು ಮಕ್ಕಳು ಹಾಸಿಗೆಯ ಮೇಲೆ 14 ಲಕ್ಷ ರೂಪಾಯಿಯ 500 ರೂಪಾಯಿ ನೋಟುಗಳ ಬಂಡಲ್‌ಗಳಿಟ್ಟು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವಿಷಯವನ್ನು ತಿಳಿದ ಬಳಿಕ ಪೊಲೀಸ್ ಅಧೀಕ್ಷಕ (ಎಸ್‌ಪಿ) ಸಿದ್ಧಾರ್ಥ್ ಶಂಕರ್ ಮೀನಾ ಅವರು ಎಸ್‌ಎಚ್‌ಒ ಅವರನ್ನು ವರ್ಗಾವಣೆ ಮಾಡಿದ್ದಲ್ಲದೆ, ಬಂಗಾರಮೌ ವೃತ್ತದ ಅಧಿಕಾರಿ (ಸಿಒ) ಮೂಲಕ ತನಿಖೆಗೆ ಆದೇಶಿಸಿದರು.
ಸಾಮಾಜಿಕ ಮಾಧ್ಯಮದ ವೈರಲ್ ಪೋಸ್ಟ್‌ನಲ್ಲಿ ಸಿಒ ಪಂಕಜ್ ಸಿಂಗ್ ಅವರು, ಸಹಾನಿ ಅವರ ಕುಟುಂಬ ಸದಸ್ಯರು 500 ರೂಪಾಯಿ ಕರೆನ್ಸಿ ನೋಟುಗಳ ಬಂಡಲ್‌ಗಳೊಂದಿಗೆ ಕುಳಿತಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.
ಸುದ್ದಿ ಸಂಸ್ಥೆ ಪಿಟಿಐ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಎಸ್‌ಎಚ್‌ಒ ಕರೆಗಳಿಗೆ ಪ್ರತಿಕ್ರಿಯೆ ನೀಡಿಲ್ಲ. ಹಾಗಿದ್ದರೂ, ಸಹಾನಿ ತಮ್ಮನ್ನು ಸಮರ್ಥಿಸಿಕೊಂಡಿದ್ದು, 2021ರ ನವೆಂಬರ್ 14 ರಂದು ಮನೆಯ ಆಸ್ತಿಯೊಂದನ್ನು ಮಾರಾಟ ಮಾಡಿದ್ದೆ. ಅದರಿದ ಬಂದ ಹಣ ಇದಾಗಿತ್ತು ಎಂದಿದ್ದಾರೆ.
ಎಮ್ಮೆಗೆ ಡಿಕ್ಕಿ:ಹಾಸಿಗೆ ಹಿಡಿದ 83ರ ವೃದ್ಧನ ವಿರುದ್ಧ 29 ವರ್ಷ ಹಳೆ ಕೇಸಲ್ಲಿ ಬಂಧನ ವಾರಂಟ್
ಘಟನೆಯ ವಿವರಗಳನ್ನು ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸ್ಟೇಷನ್ ಹೌಸ್ ಆಫೀಸರ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿಯ ಪತ್ನಿ ಹಾಗೂ ಮಕ್ಕಳು ಹಣದ ಬಂಡಲ್ ಮುಂದೆ ಕುಳಿತಿರುವುದು ಕಂಡಿದೆ. ನಾವು ವಿಷಯದ ಬಗ್ಗೆ ಗಮನಹರಿಸಿದ್ದೇವೆ ಮತ್ತು ಪೊಲೀಸ್ ಅಧಿಕಾರಿಯನ್ನು ಈಗಾಗಲೇ ವರ್ಗಾವಣೆ ಮಾಡಿದ್ದು, ತನಿಕೆಯನ್ನೂ ಆರಂಭಿಸಲಾಗಿದೆ ಎಂದಿದ್ದಾರೆ.
Gender Change : ಕಠಿಣ ಶ್ರಮದ ನಂತ್ರ ಅವಳಿಂದ ಅವನಾದವನ ಕಥೆ ಇದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ