ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮಕ್ಕೆ ದೆಹಲಿ ಮೆಟ್ರೋದಲ್ಲಿ ಪ್ರಯಾಣ ನಡೆಸಿದರು.
ನವದೆಹಲಿ (ಜೂ.30): ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಪ್ರಧಾನಿ ನರೇಂದ್ರ ಮೋದಿ, ಕಾರ್ಯಕ್ರಮಕ್ಕೆ ಸಾಮಾನ್ಯರಂತೆ ಮೆಟ್ರೋದಲ್ಲಿ ಪ್ರಯಾಣ ನಡೆಸಿದರು. ಈ ವೇಳೆ ದೆಹಲಿ ಮೆಟ್ರೋದಲ್ಲಿದಲ್ಲಿದ್ದ ಕೆಲವು ಮಕ್ಕಳೊಂದಿಗೆ ಮೋದಿ ಸಮಾಲೋಚನೆ ಕೂಡ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನಲೆಯಲ್ಲಿ ಮೆಟ್ರೋದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೆಟ್ರೋಗಾಗಿ ಕಾದು ನಿಂತ ಪ್ರಧಾನಿ ಸ್ವತಃ ತಾವೇ ಟೋಕನ್ ಖರೀದಿಸಿ ಪ್ರಯಾಣ ಬೆಳೆಸಿದರು. ಏಕಾಏಕಿ ಪ್ರಧಾನಿ ಮೋದಿ ಮೆಟ್ರೋ ಪ್ರಯಾಣಕ್ಕೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸಿದ್ದು ಕಂಡಿತು. ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಧಾನಿ ಮೋದಿ ಮೆಟ್ರೋ ಏರಿದ್ದರು. ಪ್ರಧಾನಿ ನರೇಂದ್ರ ಮೋದಿ ನಿವಾಸ ಸ್ಥಳದಲ್ಲೇ ಲೋಕ ಕಲ್ಯಾಣ ಮೆಟ್ರೋ ಮಾರ್ಗವಿದೆ. ಅಲ್ಲಿಂದಲೇ ಅವರು ದೆಹಲಿ ವಿವಿಗೆ ಪ್ರಯಾಣ ಬೆಳೆಸಿದರು.
ದೆಹಲಿ ವಿವಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಿದ ಪ್ರಧಾನಿ , ಸಹ ಪ್ರಯಾಣಿಕರೊಂದಿಗೆ ಮಾತುಕತೆ... pic.twitter.com/rVpe4xNVkx
— Asianet Suvarna News (@AsianetNewsSN)