ಬರ್ತ್‌ಡೇ ಆಚರಿಸಿ ರಸ್ತೆ ಗಬ್ಬೆಬ್ಬಿಸಿದವರ ಕರೆಸಿ ಕ್ಲೀನ್ ಮಾಡಿಸಿದ ಪೊಲೀಸರು

Published : Nov 08, 2022, 12:52 PM IST
ಬರ್ತ್‌ಡೇ ಆಚರಿಸಿ ರಸ್ತೆ ಗಬ್ಬೆಬ್ಬಿಸಿದವರ ಕರೆಸಿ ಕ್ಲೀನ್ ಮಾಡಿಸಿದ ಪೊಲೀಸರು

ಸಾರಾಂಶ

ಸಾವಿರಾರು ಜನ ಓಡಾಡುವ ರಸ್ತೆಯಲ್ಲಿ ಗೆಳೆಯರ ಬರ್ತ್‌ಡೇ ಆಚರಿಸಿ ಕೇಕನ್ನೆಲ್ಲಾ ಅಲ್ಲೇ ಚೆಲ್ಲಿ ಗಲೀಜು ಮಾಡಿ ಹೊರಟು ಹೋದ ಯುವ ತರುಣರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಲಕ್ನೋ: ಸಾರ್ವಜನಿಕ ಆಸ್ತಿ ಎಂದರೆ ಬಹುತೇಕರಿಗೆ ಇನ್ನಿಲ್ಲದ ಅಸಡ್ಡೆ, ಇದೇ ಕಾರಣಕ್ಕೆ ಸರ್ಕಾರಿ ಬಸ್‌ಗಳು, ಸರ್ಕಾರಿ ಶೌಚಾಲಯಗಳು, ಬಸ್‌ ನಿಲ್ದಾಣಗಳು ಸೇರಿದಂತೆ ಸರ್ಕಾರದೆನಿಸಿದ ಆಸ್ತಿಗಳೆಲ್ಲವೂ ಬಹಳ ಕೆಟ್ಟ ಸ್ಥಿತಿ ತಲುಪಿರುತ್ತವೆ. ಇದಕ್ಕೆ ಕಾರಣ ಅದರ ಬಗ್ಗೆ ಸಾರ್ವಜನಿಕರ ಅಸಡ್ಡೆ, ನಮ್ಮದಲ್ಲ ಎಂದಾದ ಮೇಲೆ ಏನಾದರೆ ನಮಗೇನು ಎಂಬ ನಿರ್ಲಕ್ಷ್ಯ. ಇದೇ ರೀತಿ ನಿರ್ಲಕ್ಷ್ಯದ ಮನಸ್ಥಿತಿಯಿಂದ ಸಾವಿರಾರು ಜನ ಓಡಾಡುವ ರಸ್ತೆಯಲ್ಲಿ ಗೆಳೆಯರ ಬರ್ತ್‌ಡೇ ಆಚರಿಸಿ ಕೇಕನ್ನೆಲ್ಲಾ ಅಲ್ಲೇ ಚೆಲ್ಲಿ ಗಲೀಜು ಮಾಡಿ ಹೊರಟು ಹೋದ ಯುವ ತರುಣರಿಗೆ ಪೊಲೀಸರು ತಕ್ಕ ಪಾಠ ಕಲಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಅಂದಹಾಗೆ ಉತ್ತರಪ್ರದೇಶದ (Uttar Pradesh) ಲಕ್ನೋದಲ್ಲಿ (Lucknow) ಈ ಘಟನೆ ನಡೆದಿದೆ. ಇತ್ತೀಚೆಗೆ ಯುವಕರು ತಮ್ಮ ಗೆಳೆಯರ ಹುಟ್ಟುಹಬ್ಬವನ್ನು (Birthday) ಸಾರ್ವಜನಿಕ ಸ್ಥಳಗಳಲ್ಲಿ, ಕಾರುಗಳ ಮೇಲೆ, ಫ್ಲೈಓವರ್ (Flyover) ಮೇಲೆ ಫುಟ್ಫಾತ್ (Footpath ಮೇಲೆ ನಡುರಸ್ತೆಯಲ್ಲಿ ಆಚರಿಸುವುದು ಒಂದು ಟ್ರೆಂಡ್ ಆಗಿದೆ. ಹೀಗೆ ಟ್ರೆಂಡ್ (Trend) ಫಾಲೋ ಮಾಡುವ ಯುವಕ ಯುವತಿಯರು ಜೊತೆ ಜೊತೆಗೆ ಸ್ವಚ್ಛತೆಯನ್ನು ಪಾಲಿಸಲು ಹೋಗುವುದಿಲ್ಲ. ಬಿಂದಾಸ್ ಆಗಿ ಸಾರ್ವಜನಿಕ ಸ್ಥಳದಲ್ಲಿ ಕೇಕ್ ಕತ್ತರಿಸಿ, ಹುಟ್ಟುಹಬ್ಬ ಆಚರಿಸುಕೊಳ್ಳುವವರಿಗೆ ತಿನ್ನಿಸಿ ಆತನ/ಅವಳ ಮುಖಕ್ಕೆ ಕೇಕ್ ಉಜ್ಜಲು ಹೋಗಿ ಸ್ಥಳದಲ್ಲೆಲ್ಲಾ ಕೇಕ್ ಉದುರಿಸಿ ಸ್ಥಳವನ್ನು ಗಬ್ಬೆಬ್ಬಿಸಿ ಅಲ್ಲಿಂದ ಕಾಲ್ಕಿಳುತ್ತಾರೆ.

ಇದೇ ರೀತಿ ಸಾರ್ವಜನಿಕ ಸ್ಥಳವನ್ನು (Public property) ಗಬ್ಬೆಬ್ಬಿಸಿದ ಯುವಕರನ್ನು ಗಮನಿಸಿದ ಉತ್ತರಪ್ರದೇಶದ ಪೊಲೀಸರು ಅವರನ್ನು ವಾಪಸ್ ಅದೇ ಸ್ಥಳಕ್ಕೆ ಕರೆಸಿ  ಅವರ ಕೈಯಿಂದಲೇ ಗಲೀಜಾದ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಜೊತೆಗೆ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ಕಳೆದ ಶುಕ್ರವಾರ ಮಧ್ಯರಾತ್ರಿ 1090 ಇಂಟರ್ ಸೆಕ್ಷನ್ ಬಳಿ ಮಧ್ಯರಾತ್ರಿ ಗಸ್ತು ತಿರುಗುತ್ತಿದ್ದಾಗ  ಐವರು ಯುವಕರ ಗುಂಪು ಅಲ್ಲಿ ಹುಟ್ಟುಹಬ್ಬ ಆಚರಿಸುತ್ತಿರುವುದನ್ನು ಗೌತಂಪಲ್ಲಿ (Gowthampalli) ಪೊಲೀಸ್ ಠಾಣೆ ಮುಖ್ಯಸ್ಥ ಸುಧೀರ್‌ ಅವಸ್ಥಿ ಗಮನಿಸಿದ್ದಾರೆ. ಐವರು ಯುವಕರ ಗುಂಪು ಅಲ್ಲಿ ಓರ್ವನ ಹುಟ್ಟುಹಬ್ಬ ಆಚರಿಸಿದ ಬಳಿಕ ಆ ಸ್ಥಳ ಗಲೀಜಾಗಿದೆ. ಈ ಯುವಕರ ಗುಂಪಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ ಸುಧೀರ್ ಅವಸ್ಥಿ (Sudhir Avasthi) ಆ ಯುವಕರಿಗೆ ಸ್ಥಳವನ್ನು ಸ್ವಚ್ಛಗೊಳಿಸಿ ಹೋಗುವಂತೆ ಸೂಚನೆ ನೀಡಿದ್ದಾರೆ. 

Insults Customer ಹೀಯಾಳಿಸಿದ ಸಿಬ್ಬಂದಿಗೆ ಬುದ್ಧಿ ಕಲಿಸಿದ ಗ್ರಾಹಕ, 10 ಲಕ್ಷ ರೂ ಮುಂದಿಟ್ಟ ಬೆನ್ನಲ್ಲೇ ಸೇಲ್ಸ್‌ಮ್ಯಾನ್ ಕ್ಷಮೆ

ಪೊಲೀಸ್ ಅಧಿಕಾರಿಯ ಸೂಚನೆಯಂತೆ ಯುವಕರು ಆ ಸ್ಥಳವನ್ನು ಸ್ವಚ್ಛಗೊಳಿಸಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ವಿಡಿಯೋದ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿ ಯುವಕರಿಗೆ ಇದು ನಿಮ್ಮ ಮನೆ ಅಲ್ಲ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಸುತ್ತಿದೆ. 

ಶೌಚಾಲಯದಲ್ಲಿ 45 ನಿಮಿಷ ಕಳೆದ ಪತಿ, ಕೋಪಗೊಂಡ ಪತ್ನಿ 'ಬುದ್ಧಿ' ಕಲಿಸಿದ್ದು ಹೀಗೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ