ಐಎಎಸ್ ಅಧಿಕಾರಿಯ ಆಶೀರ್ವದಿಸಿದ ಹಿರಿಜೀವ... ಫೋಟೋ ವೈರಲ್

Published : Nov 08, 2022, 12:01 PM ISTUpdated : Nov 08, 2022, 01:01 PM IST
ಐಎಎಸ್ ಅಧಿಕಾರಿಯ ಆಶೀರ್ವದಿಸಿದ ಹಿರಿಜೀವ... ಫೋಟೋ ವೈರಲ್

ಸಾರಾಂಶ

  ಕೇರಳದ ಐಎಎಸ್ ಅಧಿಕಾರಿಯೊಬ್ಬರಿಗೆ ಅವರ ಕಚೇರಿಯಲ್ಲಿ ಹಿರಿಯ ಜೀವವೊಂದು ಮನತುಂಬಿ ಹಾರೈಸಿದ್ದು, ಆ ಕ್ಷಣದ ಫೋಟೋವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಲ್ಲಪುಳ: ಹಿರಿಯರ ಬೆಂಬಲ ಆಶೀರ್ವಾದವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಇದೇ ಕಾರಣಕ್ಕೆ ಬಹುತೇಕ ಭಾರತೀಯರು ಹಿರಿಯರ ಆಶೀರ್ವಾದ ಪಡೆದ ಮಹತ್ವದ ಕಾರ್ಯಗಳಿಗೆ ಮುಂದಡಿ ಇಡುತ್ತಾರೆ. ಅಸಹಾಯಕ ಹಿರಿಯರಿಗೆ ಸಹಾಯ ಮಾಡಿದ ಸಂದರ್ಭದಲ್ಲಿ ಅವರೇ ಮನದುಂಬಿ ಹೃದಯತುಂಬಿ ಹಾರೈಸುತ್ತಾರೆ. ಹಾಗೆಯೇ  ಕೇರಳದ ಐಎಎಸ್ ಅಧಿಕಾರಿಯೊಬ್ಬರಿಗೆ ಅವರ ಕಚೇರಿಯಲ್ಲಿ ಹಿರಿಯ ಜೀವವೊಂದು ಮನತುಂಬಿ ಹಾರೈಸಿದ್ದು, ಆ ಕ್ಷಣದ ಫೋಟೋವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಸಾವಿರಾರು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೇರಳದ (Kerala) ಐಎಎಸ್ ಅಧಿಕಾರಿಯಾಗಿರುವ (IAS Officer)  ಕೃಷ್ಣ ತೇಜ್ (Krishna Tej) ಅವರು ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿರುವ ಐಎಎಸ್ ಅಧಿಕಾರಿ. ಕೇರಳದ ಅಲಪುಳ (Allapuzha) ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವ ಐಎಎಸ್ ಅಧಿಕಾರಿ ಕೃಷ್ಣತೇಜ್, ಅವರ ಕಚೇರಿಗೆ ಯಾವುದು ಕಾರ್ಯದ ನಿಮಿತ್ತ ಬಂದಿದ್ದ ವೃದ್ಧ ಮಹಿಳೆಯೊಬ್ಬರು ಐಎಎಸ್‌ ಅಧಿಕಾರಿಯ ತಲೆ ಮೇಲೆ ತಮ್ಮ ಕೈಗಳನ್ನಿಟ್ಟು ಆಶೀರ್ವಾದಿಸಿದ್ದಾರೆ. ಈ ವೇಳೆ ಅವರು ಕುಳಿತಲ್ಲಿಯೇ ತಲೆಬಾಗಿಸಿಕೊಂಡಿರುವುದು ಫೋಟೋದಲ್ಲಿ ಕಾಣಿಸುತ್ತಿದೆ. ಅಲ್ಲದೇ ಸಮೀಪದಲ್ಲೇ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಯೊಬ್ಬರು ನಗುತ್ತಾ ನಿಂತಿರುವುದು ಫೋಟೋದಲ್ಲಿ ಕಾಣಿಸುತ್ತಿದೆ.

Weird News: ಇಲ್ಲಿ ಮದುವೆಯ ನಂತರ ವಧುವನ್ನು ಆಶೀರ್ವದಿಸಲು ತಲೆ ಮೇಲೆ ಉಗುಳ್ತಾರೆ

ಈ ಫೋಟೋವನ್ನು ಶೇರ್ ಮಾಡಿರುವ ಐಎಎಸ್ ಅಧಿಕಾರಿ 'ಇನ್ನೇನು ಬೇಕು' ಎಂದು ಬರೆದುಕೊಂಡಿದ್ದಾರೆ. ಈ ಫೋಟೋಗೆ ನೋಡುಗರು ಕಾಮೆಂಟ್ ಮಾಡಿದ್ದಾರೆ. ಇದೊಂದು ಅಪರೂಪದ ದೃಶ್ಯ, ನಿಮ್ಮಂತಹ ಕೆಲವರಿಗೆ ಮಾತ್ರ ಹೀಗೆ ಹಿರಿಯ ನಾಗರಿಕರಿಂದ ಬೆಚ್ಚನೆಯ ಆಶೀರ್ವಾದ ಪಡೆಯುವ ಅವಕಾಶವಿರುತ್ತದೆ. ನಿಮ್ಮೊಳಗಿರುವ ಈ ಒಳ್ಳೆಯ ಮನುಷ್ಯ ಹೀಗೆಯೇ ಇರಲಿ. ನಿಮ್ಮ ಮೇಲೆ ದೇವರ ಆಶೀರ್ವಾದವಿರಲಿ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

 


ಮುಕೇಶ್ ಅಂಬಾನಿ ಆಶೀರ್ವದಿಸಿದ ಆನೆ

ಕೆಲ ದಿನಗಳ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಅವರು ತಿರುಮಲದಲ್ಲಿರುವ ವೆಂಕಟೇಶ್ವರನ ಪುರಾತನ ದೇಗುಲದಲ್ಲಿ ಪ್ರಾರ್ಥಿಸಿದರು. ಈ ಸಮಯದಲ್ಲಿ ದೇವಾಲಯದ ಆನೆ ಅವರ ತಲೆಯ ಮೇಲೆ ಸೊಂಡಿಲಿಟ್ಟು ಆಶೀರ್ವದಿಸುತ್ತಿರುವ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಸಾಮಾನ್ಯವಾಗಿ ಹಿಂದೂ ದೇವಾಲಯಗಳಲ್ಲಿ ಹೀಗೆ ಆನೆಗಳಿಂದ ಆಶೀರ್ವಾದ ಪಡೆವ ಸಂಪ್ರದಾಯವಿದೆ. 

ಆನೆಗಳನ್ನು ಏಕೆ ಪೂಜಿಸುತ್ತಾರೆ?
ಹಿಂದೂ ಸಂಸ್ಕೃತಿಯಲ್ಲಿ ಆನೆ(Elephant)ಯನ್ನು ಗಣೇಶ ಎಂದು ಪೂಜಿಸಲಾಗುತ್ತದೆ. ಆನೆಗಳು ಗಣೇಶನ ಜೀವರೂಪ. ವಾಸ್ತುವಿನಲ್ಲಿ ಆನೆಯು ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದು ದೈವತ್ವದ ಸಂಪರ್ಕದೊಂದಿಗೆ ಪವಿತ್ರವೆಂದು ಪರಿಗಣಿಸಲ್ಪಟ್ಟಿದೆ ಮತ್ತು ಪ್ರಾಚೀನ ಕಾಲದಲ್ಲಿ ವಿಸ್ತೃತ ಕುಟುಂಬದ ಭಾಗವಾಗಿ ಪರಿಗಣಿಸಲ್ಪಟ್ಟಿದೆ. ಪೂಜಾ ವಿಧಿವಿಧಾನಗಳ ಭಾಗವಾಗಿ ದಕ್ಷಿಣ ಭಾರತದ ದೇವಾಲಯಗಳಲ್ಲಿ ಆನೆಗಳನ್ನು ಸಾಕಲಾಗುತ್ತದೆ. ಅಂಬಾನಿ ಪ್ರಾರ್ಥಿಸಿದ ತಿರುಪತಿ ದೇವಸ್ಥಾನದಲ್ಲಿ ಪೂಜೆಗಾಗಿ ಆನೆಗಳನ್ನು ಸಾಕಲಾಗುತ್ತದೆ. ಅವುಗಳಿಗೆ ದೇವಾಲಯ(Temple)ದ ಅಧಿಕಾರಿಗಳು ಆಹಾರವನ್ನು ನೀಡುತ್ತಾರೆ ಮತ್ತು ಆಚರಣೆಯಂತೆ, ಅಂಬಾನಿ ಕೂಡ ಆನೆಗೆ ಆಹಾರ ನೀಡಿದರು. 

ಮಂಗಳೂರಿನಲ್ಲಿ 'ಮಿಸ್ ಇಂಡಿಯಾ'; ದುರ್ಗಪರಮೇಶ್ವರಿ ಆಶೀರ್ವಾದ ಪಡೆದ ಸಿನಿ ಶೆಟ್ಟಿ

ಆನೆಗಳು ದಕ್ಷಿಣ ಭಾರತದಲ್ಲಿ ದೇವಾಲಯಗಳ ಭಾಗವಾಗಿವೆ. ಮೈಸೂರು ದಸರಾ(Dussera)ದಲ್ಲಿ ದೇವರ ಪಲ್ಲಕ್ಕಿ ಹೊತ್ತು ರಾಜಗಾಂಭೀರ್ಯದಲ್ಲಿ ಮೆರವಣಿಗೆ ಹೋಗುವ ಆನೆಗಳು ವಿಶ್ವಪ್ರಸಿದ್ಧವಾಗಿವೆ. ಅಂತೆಯೇ ತಮಿಳುನಾಡು, ಕರ್ನಾಟಕ, ಆಂಧ್ರ ಪ್ರದೇಶ ದೇವಾಲಯಗಳ ಸಂಕೀರ್ಣದೊಳಗೆ ಆನೆಗಳಿರುತ್ತವೆ. ಇವು ದೇವರ ಪಲ್ಲಕ್ಕಿ ಉತ್ಸವ ಇತ್ಯಾದಿ ಸಂದರ್ಭದಲ್ಲಿ ದೇವರನ್ನು ಬೆನ್ನ ಮೇಲೆ ಹೊತ್ತು ತಿರುಗಿಸುತ್ತವೆ. ನಿತ್ಯ ಪೂಜೆಗೆ ಪಾತ್ರವಾಗುತ್ತವೆ. ಕೆಲವೆಡೆ ಪೂಜೆಯ ಸಂದರ್ಭದಲ್ಲಿ ಗಂಟೆ ಬಾರಿಸುವ ಆನೆಗಳೂ ಇವೆ. ಹಬ್ಬ ಹರಿದಿನಗಳಲ್ಲಿ ಆನೆಗಳನ್ನು ಅಲಂಕರಿಸಿ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತ್ತದೆ. ಈ ಗಣಪತಿ ಸ್ವರೂಪವಾದ ಆನೆಗಳು ಭಕ್ತರಿಂದ ಕಾಣಿಕೆ, ಬಾಳೆಹಣ್ಣು, ಕಾಯಿ ಸ್ವೀಕರಿಸಿ ಅವರ ತಲೆಯ ಮೇಲೆ ಸೊಂಡಿಲಿಟ್ಟು(Trunk) ಆಶೀರ್ವದಿಸುತ್ತವೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?